AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi 10: ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಶವೋಮಿಯಿಂದ ಹೊಸ ಫೋನ್ ಬಿಡುಗಡೆ

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ರೆಡ್ಮಿ 10 ಸ್ಮಾರ್ಟ್​ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಒಟ್ಟು ಮೂರು ಆಯ್ಕೆಯಲ್ಲಿ ಈ ಫೋನ್ ಬಿಡುಗಡೆ ಆಗಿದ್ದು, ​ 4GB RAM + 64GB ಸ್ಟೊರೇಜ್​ ಆಯ್ಕೆಗೆ ಭಾರತದಲ್ಲಿ 13,300 ರೂ ಎಂದು ಅಂದಾಜಿಸಲಾಗಿದೆ.

Redmi 10: ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಶವೋಮಿಯಿಂದ ಹೊಸ ಫೋನ್ ಬಿಡುಗಡೆ
Redmi 10
TV9 Web
| Edited By: |

Updated on:Aug 20, 2021 | 3:23 PM

Share

ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಚೀನಾ ಮೂಲದ ಶವೋಮಿ (Xiaomi) ಕಂಪೆನಿ ಹೊಸ ರೆಡ್ಮಿ 10 (Redmi 10) ಫೋನನ್ನು ಅನಾವರಣ ಮಾಡಿದೆ. 50 ಮೆಗಾಫಿಕ್ಸೆಲ್ ಸಾಮರ್ಥ್ಯವಿರುವ ಕ್ವಾಡ್​​ ರಿಯರ್​ ಕ್ಯಾಮೆರಾದ ಜೊತೆಗೆ ಮೀಡಿಯಾ ಟೆಕ್​​ ಪ್ರೊಸೆಸರ್​ ಹೊಂದಿದ್ದು, ಸದ್ಯಕ್ಕೆ ಮಲೇಶಿಯಾದಲ್ಲಿ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಇದು ಭಾರತದಲ್ಲೂ ರಿಲೀಸ್ ಆಗಲಿದೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ರೆಡ್ಮಿ 10 ಸ್ಮಾರ್ಟ್​ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಒಟ್ಟು ಮೂರು ಆಯ್ಕೆಯಲ್ಲಿ ಈ ಫೋನ್ ಬಿಡುಗಡೆ ಆಗಿದ್ದು, ​ 4GB RAM + 64GB ಸ್ಟೊರೇಜ್​ ಆಯ್ಕೆಗೆ ಭಾರತದಲ್ಲಿ 13,300 ರೂ ಎಂದು ಅಂದಾಜಿಸಲಾಗಿದೆ. 4GB RAM + 128GB ಆಯ್ಕೆಯ ಸ್ಮಾರ್ಟ್​ಫೋನ್​ ಬೆಲೆ 14,800 ರೂ. ಅಂತೆಯೆ 6GB RAM + 128GB ಆಯ್ಕೆಯ ಸ್ಮಾರ್ಟ್​ಫೋನ್​ ಬೆಲೆ 16,283 ರೂ. ಎಂದು ಹೇಳಬಹುದು. ಪೆಬ್ಬಲ್​ ಬಿಳಿ, ಕಾರ್ಬನ್​ ಗ್ರೆ ಮತ್ತು ಸಮುದ್ರ ನೀಲಿ ಬಣ್ಣದ ಆಯ್ಕೆಯಲ್ಲಿ ಮಾರಾಟ ಕಾಣಲಿದೆ.

ರೆಡ್ಮಿ 10 6.5 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ಅನ್ನು ಹೊಂದಿದೆ. ಇದು 2400*1080 ಪಿಕ್ಸೆಲ್ ಸಾಮರ್ಥ್ಯದ ರೆಸಲೂಶನ್ ಹೊಂದಿದ್ದು, ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್​ಫೋನ್ ರೀತಿ ಇದೆ. ಮೀಡಿಯಾ ಟೆಕ್ ಹೆಲಿಯೊ ಜಿ88 ಎಸ್ಒಸಿ ಪ್ರೊಸೆಸರ್​ನಿಂದ ಕೂಡಿದೆ.

ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮತ್ತು ಸಿಲ್ವರ್ ಫಿನಿಶ್ ಪ್ರಮುಖ ಹೈಲೇಟ್ ಆಗಿದೆ. ರೆಡ್ಮಿ 10 ಸ್ಮಾರ್ಟ್​ಫೋನ್​ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಎರಡು 2 ಮೆಗಾಪಿಕ್ಸೆಲ್ ಸೆನ್ಸರ್‌ಗಳನ್ನು ಒಳಗೊಂಡಿರಲಿದೆ ಎಂದು ಮಾಹಿತಿಯಿದೆ. ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಬರಲಿದೆ ಎನ್ನಲಾಗಿದೆ.

ಇನ್ನೂ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ ನೂತನ ಸ್ಮಾರ್ಟ್​ಫೋನಿನ​ ಸಂಪೂರ್ಣ ವಿಶೇಷತೆಯನ್ನ ಬಹಿರಂಗ ಪಡಿಸಿಲ್ಲ. 3.5 mm ​ ಹೆಡ್​ಫೋನ್​ ಜಾಕ್​ ನೀಡಲಾಗಿದೆ. 182 ಗ್ರಾಮ್​ ಮತ್ತು ಫಿಂಗರ್​ಪ್ರಿಂಟ್​ ಸ್ಕ್ಯಾನರ್​ ಇದರಲ್ಲಿದೆ.

Flipkart Mobiles Bonanza sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಈ ಫೋನ್​ಗಳ ಮೇಲೆ 10,000 ರೂ. ಡಿಸ್ಕೌಂಟ್

Twitter DM: ಟ್ವಿಟ್ಟರ್‌ ಬಳಕೆದಾರರು ಫುಲ್ ಖುಷ್: ಬಂದಿದೆ ಹೊಸ ಅಪ್ಡೇಟ್

(Xiaomi Redmi 10 With 50-Megapixel Primary Camera 5000mAh Battery Launched Price Specifications)

Published On - 3:23 pm, Fri, 20 August 21

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್