Twitter DM: ಟ್ವಿಟ್ಟರ್‌ ಬಳಕೆದಾರರು ಫುಲ್ ಖುಷ್: ಬಂದಿದೆ ಹೊಸ ಅಪ್ಡೇಟ್

ಟ್ವಿಟ್ಟರ್ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ಪರಿಚಯಿಸಿದ್ದು ಈ ಮೂಲಕ ನೀವು ಒಂದೇ ಮೆಸೇಜ್ ಅನ್ನು ಒಂದು ಬಾರಿಗೆ 20 ಬೇರೆ ಬೇರೆ ಅಕೌಂಟ್​ಗೆ ಕಳುಹಿಸಬಹುದಾಗಿದೆ.

Twitter DM: ಟ್ವಿಟ್ಟರ್‌ ಬಳಕೆದಾರರು ಫುಲ್ ಖುಷ್: ಬಂದಿದೆ ಹೊಸ ಅಪ್ಡೇಟ್
ಸಾಂದರ್ಭಿಕ ಚಿತ್ರ
Follow us
| Edited By: Vinay Bhat

Updated on: Aug 20, 2021 | 11:43 AM

ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಬಿಡುತ್ತೆ. ಅದರಲ್ಲೂ ಹೆಚ್ಚಿನ ಜನರು ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟ್ಟರ್‌ನಲ್ಲಿ (Twitter) ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟ್ಟರ್​ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟ್ವಿಟ್ಟರ್​ ಹೊಸ ಅಪ್ಡೇಟ್ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಬಳಕೆದಾರರು ಏಕಕಾಲದಲ್ಲಿ ಅನೇಕ ಖಾತೆಗಳಿಗೆ ನೇರ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಹೌದು, ಟ್ವಿಟ್ಟರ್ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ಪರಿಚಯಿಸಿದ್ದು ಈ ಮೂಲಕ ನೀವು ಒಂದೇ ಮೆಸೇಜ್ ಅನ್ನು ಒಂದು ಬಾರಿಗೆ 20 ಬೇರೆ ಬೇರೆ ಅಕೌಂಟ್​ಗೆ ಕಳುಹಿಸಬಹುದಾಗಿದೆ. ಈ ಬಗ್ಗೆ ಟ್ವಿಟ್ಟರ್ ಸಪೋರ್ಟ್ ಹ್ಯಾಂಡಲ್ ಮಾಹಿತಿ ನೀಡಿದೆ. ಇದರ ಜೊತೆಗೆ ಮತ್ತೊಂದು ಹೊಸ ಆಯ್ಕೆನ್ನು ನೀಡಿದ್ದು, ಬಳಕೆದಾರರು ಮೆಸೇಜ್ ಅನ್ನು ಲಾಂಗ್ ಪ್ರೆಸ್ ಮಾಡಿದರೆ ಆ ಮೆಸೇಜ್​ಗೆ ರಿಯಾಕ್ಟ್ ಮಾಡೋ ಆಯ್ಕೆಯನ್ನು ನೀಡಿದೆ. ಟ್ವಿಟ್ಟರ್​ನ ಈ ಹೊಸ ಆಯ್ಕೆ ಸದ್ಯಕ್ಕೆ ಐಓಎಸ್ ಬಳಕೆದಾರರಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ಪರಿಚಯಿಸಲಿದೆ.

ಇನ್ನೂ ಇತ್ತೀಚೆಗಷ್ಟೆ ಟ್ವಿಟ್ಟರ್​ಗೆ ಲಾಗಿನ್ ಆಗಲು ಹೊಸ ನಿಯಮವನ್ನು ತಂದಿತ್ತು . ಇದರ ಪ್ರಕಾರ, ಸ್ಮಾರ್ಟ್‌ಫೋನ್‌ನಲ್ಲಿ ಕನೆಕ್ಟ್ ಆಗಿರುವ ಗೂಗಲ್ ಖಾತೆಯೊಂದಿಗೆ ಹೊಸ ಟ್ವಿಟ್ಟರ್​​ ಬೀಟಾ ಅಪ್ಡೇಟ್​ಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಹೊಸ ಏಕೀಕರಣವು ಬಳಕೆದಾರರಿಗೆ ಲಾಗ್ ಇನ್ ಮಾಡಲು ಅಥವಾ ಅಸ್ತಿತ್ವದಲ್ಲಿರುವ ವಿವರಗಳೊಂದಿಗೆ ಖಾತೆಯನ್ನು ತೆರೆಯಲು ಅನುಮತಿಸುತ್ತದೆ. ಹೆಸರು ಮತ್ತು ಇಮೇಲ್ ವಿಳಾಸದಂತಹ ಮುಖ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಪಾಸ್‌ವರ್ಡ್ ಹಾಕುವ ಅಗತ್ಯ ಇರುವುದಿಲ್ಲ.

ಬಳಕೆದಾರರು ಈಗಾಗಲೇ ಟ್ವಿಟ್ಟರ್​​ ಖಾತೆಯನ್ನು ಹೊಂದಿದ್ದು, ಗೂಗಲ್ ಅಕೌಂಟ್ ಇಮೇಲ್ ಅನ್ನು ಬಳಸುತ್ತಿದ್ದರೆ, ಪಾಸ್ವರ್ಡ್ ಇಲ್ಲದೆ ಲಾಗಿನ್ ಮಾಡಬಹುದಾಗಿದೆ.

Android 12: ಇನ್ಮುಂದೆ ಮುಖಭಾವದಲ್ಲೇ ನಿಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು..!

Amazon app quiz: ಅಮೆಜಾನ್​ನ ಈ ಐದು ಪ್ರಶ್ನೆಗಳಿಗೆ ಉತ್ತರಿಸಿ 15 ಸಾವಿರ ರೂ. ಗೆಲ್ಲಿರಿ

(Twitter Update Now Users Can Send Twitter DMs To Multiple People At Once)

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ