Samsung Galaxy M52: ಸ್ಯಾಮ್​ಸಂಗ್ ತಯಾರಿಸುತ್ತಿರುವ ಹೊಸ 5G ಸ್ಮಾರ್ಟ್​ಫೋನ್ ಬಗ್ಗೆ ವಿಶೇಷ ಮಾಹಿತಿ ಬಹಿರಂಗ

ಗ್ಯಾಲಕ್ಸಿ M32 5G ಬಿಡುಗಡೆ ಆದ ಬೆನ್ನಲ್ಲೆ M52 5G ಸ್ಮಾರ್ಟ್​ಫೋನ್ ಕೂಡ ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನಿನ ವಿಶೇಷತೆಗಳು ಬಹಿರಂಗಗೊಂಡಿದೆ.

Samsung Galaxy M52: ಸ್ಯಾಮ್​ಸಂಗ್ ತಯಾರಿಸುತ್ತಿರುವ ಹೊಸ 5G ಸ್ಮಾರ್ಟ್​ಫೋನ್ ಬಗ್ಗೆ ವಿಶೇಷ ಮಾಹಿತಿ ಬಹಿರಂಗ
Samsung Galaxy M52
Follow us
TV9 Web
| Updated By: Vinay Bhat

Updated on: Aug 21, 2021 | 1:08 PM

ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್ (Samsung) ಕಂಪೆನಿಗೆ ಭಾರತ ನೆಚ್ಚಿನ ತಾಣವಾಗಿದೆ. ಇದಕ್ಕಾಗಿಯೆ ದೇಶದಲ್ಲಿ ತಿಂಗಳಿಗೆ ಒಂದು ಅಥವಾ ಎರಡು ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಲೇ ಇರುತ್ತದೆ. ಗ್ಯಾಲಕ್ಸಿ ಎಸ್, ಗ್ಯಾಲಕ್ಸಿ ಎ ಮತ್ತು ಗ್ಯಾಲಕ್ಸಿ ಎಂ ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತದೆ. ಸ್ಯಾಮ್​ಸಂಗ್ ಭಾರತದಲ್ಲಿ ಆಗಸ್ಟ್ 25 ರಂದು ಹೊಸ Galaxy M32 (Galaxy M32) ಫೋನನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೆ ಕಂಪೆನಿ ಮತ್ತೊಂದು ಫೋನನ್ನು ರಿವೀಲ್ ಮಾಡಿದೆ.

ಗ್ಯಾಲಕ್ಸಿ M32 5G ಬಿಡುಗಡೆ ಆದ ಬೆನ್ನಲ್ಲೆ M52 5G ಸ್ಮಾರ್ಟ್​ಫೋನ್ ಕೂಡ ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನಿನ ವಿಶೇಷತೆಗಳು ಬಹಿರಂಗಗೊಂಡಿದೆ. ಇದುಕೂಡ 5G ಬೆಂಬಲದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಬರೋಬ್ಬರಿ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಸ್ಮಾರ್ಟ್​ಫೋನ್ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M52 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೂಪರ್‌ ಅಮೋಲೆಡ್‌ ಇನ್ಫಿನಿಟಿ-ಒ ಡಿಸ್‌ಪ್ಲೇ ಆಗಿದೆ. ಕ್ವಾಲ್ಕಾಂ ಸ್ನಾಪ್ಡ್ರಾಗನ್ 778G ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 6GB RAM ಆಯ್ಕೆಯಲ್ಲಿ ಸಿಗಲಿದೆಯಂತೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ನಿಂದ ಒಳಗೊಂಡಿರಲಿದೆ ಎನ್ನಲಾಗಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆಯಂತೆ.

ವಿಶೇಷ ಎಂದರೆ ಗ್ಯಾಲಕ್ಸಿ ಎಮ್32 ಸ್ಮಾರ್ಟ್‌ಫೋನ್‌ ಬರೋಬ್ಬರಿ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, ಇದು 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಇದರ ಬೆಲೆ ಎಷ್ಟಿರಬಹುದೆಂದು ತಿಳಿದುಬಂದಿಲ್ಲ.

Vivo Y21: ವಿವೋದಿಂದ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?

Redmi 10: ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಶವೋಮಿಯಿಂದ ಹೊಸ ಫೋನ್ ಬಿಡುಗಡೆ

(Samsung Galaxy M52 5G entire specs tipped ahead of launch Galaxy M32 5G)