ರೆಡ್ಮಿ 10 ಸ್ಮಾರ್ಟ್​ಫೋನಿನ ಮಾಹಿತಿ ಹಂಚಿಕೊಂಡು ಡಿಲೀಟ್ ಮಾಡಿದ ಶವೋಮಿ: ಇಲ್ಲಿದೆ ಫೀಚರ್ಸ್

4GB RAM ಮತ್ತು 64GB ಸ್ಟೋರೆಜ್, 4GB RAM ಮತ್ತು 128GB ಸ್ಟೋರೆಜ್, 6GB RAM ಮತ್ತು 128GB ಸ್ಟೋರೆಜ್, ಹೀಗೆ ಮೂರು ಆಯ್ಕೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಆದರೆ ಇದರ ಬೆಲೆ ಎಷ್ಟೆಂದು ತಿಳಿದುಬಂದಿಲ್ಲ.

ರೆಡ್ಮಿ 10 ಸ್ಮಾರ್ಟ್​ಫೋನಿನ ಮಾಹಿತಿ ಹಂಚಿಕೊಂಡು ಡಿಲೀಟ್ ಮಾಡಿದ ಶವೋಮಿ: ಇಲ್ಲಿದೆ ಫೀಚರ್ಸ್
Redmi 10
Follow us
TV9 Web
| Updated By: Vinay Bhat

Updated on: Aug 14, 2021 | 2:41 PM

ಶವೋಮಿ (Xiaomi) ಕಂಪೆನಿಯ ಮುಂಬರುವ ಬಹುನಿರೀಕ್ಷಿತ ರೆಡ್ಮಿ 10 (Redmi 10) ಸ್ಮಾರ್ಟ್​ಫೊನಿನ ಬಗ್ಗೆ ಕೆಲವು ಮಾಹಿತಿ ಬಹಿರಂಗಗೊಂಡಿದೆ. ಅಚ್ಚರಿ ಎಂದರೆ ಸ್ವತಃ ಶವೋಮಿ ಕಂಪೆನಿಯೇ ತಪ್ಪಿ ರೆಡ್ಮಿ 10 ಫೋನಿನ ಮಾಹಿತಿಯನ್ನು ತನ್ನ ಬ್ಲಾಗ್​ನಲ್ಲಿ ಹಂಚಿಕೊಂಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದೆ. ಟ್ವಿಟ್ಟರ್​ನಲ್ಲಿ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ರೆಡ್ಮಿ10 ಹೋಲ್ ಪಂಚ್ ಡಿಸ್​ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ರೆಡ್ಮಿ 10 6.5 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ಅನ್ನು ಹೊಂದಿದೆ. ಇದು 2400*1080 ಪಿಕ್ಸೆಲ್ ಸಾಮರ್ಥ್ಯದ ರೆಸಲೂಶನ್ ಹೊಂದಿದ್ದು, ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್​ಫೋನ್ ರೀತಿ ಇದೆ. ಮೀಡಿಯಾ ಟೆಕ್ ಹೆಲಿಯೊ ಜಿ88 ಎಸ್ಒಸಿ ಪ್ರೊಸೆಸರ್​ನಿಂದ ಕೂಡಿದೆ. ಒಟ್ಟು ಮೂರು ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆಯಂತೆ.

4GB RAM ಮತ್ತು 64GB ಸ್ಟೋರೆಜ್, 4GB RAM ಮತ್ತು 128GB ಸ್ಟೋರೆಜ್, 6GB RAM ಮತ್ತು 128GB ಸ್ಟೋರೆಜ್, ಹೀಗೆ ಮೂರು ಆಯ್ಕೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಆದರೆ ಇದರ ಬೆಲೆ ಎಷ್ಟೆಂದು ತಿಳಿದುಬಂದಿಲ್ಲ. ಇನ್ನೂ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮತ್ತು ಸಿಲ್ವರ್ ಫಿನಿಶ್ ಪ್ರಮುಖ ಹೈಲೇಟ್ ಆಗಿದೆ. ರೆಡ್ಮಿ 10 ಸ್ಮಾರ್ಟ್​ಫೋನ್​ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಎರಡು 2 ಮೆಗಾಪಿಕ್ಸೆಲ್ ಸೆನ್ಸರ್‌ಗಳನ್ನು ಒಳಗೊಂಡಿರಲಿದೆ ಎಂದು ಮಾಹಿತಿಯಿದೆ. ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಬರಲಿದೆ ಎನ್ನಲಾಗಿದೆ.

ಬಿಡುಗಡೆಗೆ ಮೂರು ದಿನವಿರುವಾಗ ಬಹುನಿರೀಕ್ಷಿತ ಮೋಟೋ ಎಡ್ಜ್ 20 ಫೋನಿನ ಬೆಲೆ ಬಹಿರಂಗ

JioPhone Next: ಜಿಯೋ ಫೋನ್ ನೆಕ್ಸ್ಟ್​​ನ ಅಚ್ಚರಿ ಫೀಚರ್ ಲೀಕ್: ನೀವು ಬೆರಗಾಗುವುದು ಗ್ಯಾರೆಂಟಿ

(Redmi 10 Xiaomi accidentally reveals everything about the Redmi 10)

ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್