Oppo A16s: ಕ್ಯಾಮೆರಾದಲ್ಲಿ ಆಕರ್ಷಕ ಎಡಿಟಿಂಗ್ ಆಯ್ಕೆ ಹೊಂದಿರುವ ಒಪ್ಪೋ A16s ಸ್ಮಾರ್ಟ್‌ಫೋನ್ ಬಿಡುಗಡೆ
ಒಪ್ಪೋ A16s ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಮಾಮೂಲಾಗಿ ಉಪಯೋಗಿಸಿದರೆ ಎರಡು ದಿನಗಳ ಕಾಲ ಚಾರ್ಜ್ ನಿಲ್ಲಲಿದೆ ಎಂದು ಕಂಪೆನಿ ತಿಳಿಸಿದೆ.
ಕೆಲವು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದ್ದ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒಪ್ಪೋ ಬರಬರುತ್ತಾ ತನ್ನ ಮೌಲ್ಯವನ್ನು ಕಳೆದುಕೊಂಡಿತು. ಶವೋಮಿಯ ರೆಡ್ಮಿ ಎಂಐ, ಸ್ಯಾಮ್ಸಂಗ್, ರಿಯಲ್ ಮಿ ಬ್ರ್ಯಾಂಡ್ಗಳ ಎದುರು ಎದ್ದು ನಿಲ್ಲಲು ಒಪ್ಪೋ ಸಂಸ್ಥೆ ಈಗಲೂ ಹರಸಾಹಸ ಪಡುತ್ತಿದೆ. ಇದರ ನಡುವೆಯೂ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಸದ್ಯ ಒಪ್ಪೋ ಸಂಸ್ಥೆ ಹೊಸ ಒಪ್ಪೋ ಎ16ಎಸ್ ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ.
ಬೆಲೆ ಎಷ್ಟು?:
ವಿಶೇಷವಾಗಿ ಈ ಹೊಸ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯನ್ನು ಹೊಂದಿದ್ದು, 5000mAh ಬ್ಯಾಟರಿ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನಿಂದ ಕೂಡಿದೆ. ಒಪ್ಪೋ A16s ಸ್ಮಾರ್ಟ್‌ಫೋನ್ ಕೇವಲ ಒಂದು ಮಾದರಿಯಲ್ಲಷ್ಟೆ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಫೋನಿನ ಬೆಲೆ ಯೂರೋ 149, ಅಂದರೆ ಭಾರತದಲ್ಲಿ ಇದರ ಬೆಲೆ ಸರಿಸುಮಾರು 13,000 ರೂ. ಇರಬಹುದೆಂದು ಅಂದಾಜಿಸಲಾಗಿದೆ.
ಏನು ವಿಶೇಷತೆ?:
ಒಪ್ಪೋ A16s ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಲರ್ಓಎಸ್ 11.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದರಲ್ಲಿ ಫೋಟೋಗಳನ್ನು ವರ್ಧಿಸಲು AI ಬ್ಯೂಟಿಫಿಕೇಶನ್, ಬೆರಗುಗೊಳಿಸುವ ಮೋಡ್ ಮತ್ತು ಬೊಕೆ ಫಿಲ್ಟರ್‌ಗಳಂತಹ ಫ್ರೀ ಲೋಡ್ ಫೀಚರ್ಸ್‌ಗಳನ್ನು ಹೊಂದಿದೆ.
ಇನ್ನೂ ಒಪ್ಪೋ A16s ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಮಾಮೂಲಾಗಿ ಉಪಯೋಗಿಸಿದರೆ ಎರಡು ದಿನಗಳ ಕಾಲ ಚಾರ್ಜ್ ನಿಲ್ಲಲಿದೆ ಎಂದು ಕಂಪೆನಿ ತಿಳಿಸಿದೆ. ಅಲ್ಲದೆ ರಾತ್ರಿಯ ಚಾರ್ಜಿಂಗ್ ಅನ್ನು ರಕ್ಷಿಸಲು ಮತ್ತು ರಾತ್ರಿ-ಸಮಯದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಮುಂಚಿತವಾಗಿ ಸ್ಥಾಪಿಸಲಾದ ವೈಶಿಷ್ಟ್ಯಗಳೂ ಇವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್, ಡ್ಯುಯಲ್-ಬ್ಯಾಂಡ್ ವೈ-ಫೈ ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆಗಳಿಂದ ಕೂಡಿದೆ.
Google Pay: ಗೂಗಲ್ ಪೇ ಕೈಕೊಟ್ರೆ ಚಿಂತಿಸಬೇಕಿಲ್ಲ: ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ
ರೆಡ್ಮಿ 10 ಸ್ಮಾರ್ಟ್ಫೋನಿನ ಮಾಹಿತಿ ಹಂಚಿಕೊಂಡು ಡಿಲೀಟ್ ಮಾಡಿದ ಶವೋಮಿ: ಇಲ್ಲಿದೆ ಫೀಚರ್ಸ್
(Oppo A16s With 5000mAh Battery Triple Rear Cameras Launched in budget price Specifications)
Published On - 3:50 pm, Sat, 14 August 21