Google Pay: ಗೂಗಲ್ ಪೇ ಕೈಕೊಟ್ರೆ ಚಿಂತಿಸಬೇಕಿಲ್ಲ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ

ಒಂದೇ ಸೂರಿನಡಿ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಗೂಗಲ್ ಪೇ ತರಹವೇ ಇತರೆ ಕೆಲವು ಪೇಮೆಂಟ್‌ ಆ್ಯಪ್‌ಗಳು ಉತ್ತಮ ಸೇವೆ ನೀಡುತ್ತಿವೆ. ನಿಮಗೆಲ್ಲಾದರು ಗೂಗಲ್ ಪೇ ಕೈಕೊಟ್ಟ ಸಂದರ್ಭದಲ್ಲಿ ಪರ್ಯಾಯವಾಗಿ ಈ ಪೇಮೆಂಟ್ ಆ್ಯಪ್‌ಗಳನ್ನು ಕೂಡ ಬಳಸಬಹುದು.

Google Pay: ಗೂಗಲ್ ಪೇ ಕೈಕೊಟ್ರೆ ಚಿಂತಿಸಬೇಕಿಲ್ಲ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ
Google Pay
Follow us
TV9 Web
| Updated By: Vinay Bhat

Updated on: Aug 14, 2021 | 3:27 PM

ಭಾರತ ಈಗ ಡಿಜಿಟಲ್ (Digital) ಯುಗವಾಗಿ ಮಾರ್ಪಾಡಾಗುತ್ತಿದೆ. ಪ್ರಮುಖವಾಗಿ ಡಿಜಿಟಲ್‌ ಟ್ರಾನ್ಸಾಕ್ಶನ್​ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬಿಲ್ ಪೇಮೆಂಟ್, ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್‌ ಸೇರಿದಂತೆ ಅನೇಕ ವ್ಯವಹಾರಗಳು ಇಂದು ಡಿಜಿಟಲ್ ಪೇಮೆಂಟ್ ಆ್ಯಪ್ ಮೂಲಕವೇ ಮಾಡಲಾಗುತ್ತಿದೆ. ಈ ಎಲ್ಲ ಸೇವೆಗಳನ್ನು ಬಹುತೇಕರು ಗೂಗಲ್ ಪೇ (Google Pay) ಅಪ್ಲಿಕೇಶನ್ ಮೂಲಕ ಮಾಡುತ್ತಾರೆ. ಯಾಕಂದ್ರೆ ಡಿಜಿಟಲ್ ಪೇಮೆಂಟ್ ಆ್ಯಪ್ಸ್‌ಗಳ ಸಾಲಿನಲ್ಲಿ ಇಂದು ಗೂಗಲ್ ಪೇ ಹೆಚ್ಚಿನ ಜನರು ಬಳಸುತ್ತಿದದ್ದಾರೆ. ಯುಪಿಐ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕವು ಅಥವಾ ಮೊಬೈಲ್ ನಂಬರ್ ನಮೂದಿಸುವ ಮೂಲಕ ಇದರಲ್ಲಿ ಹಣ ಟ್ರಾನ್ಸ್‌ಫರ್ ಮಾಡುವುದು ಸೆಕೆಂಡ್​ಗಳ ಕೆಲಸವಷ್ಟೆ.

ಹೀಗೆ ಒಂದೇ ಸೂರಿನಡಿ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಗೂಗಲ್ ಪೇ ತರಹವೇ ಇತರೆ ಕೆಲವು ಪೇಮೆಂಟ್‌ ಆ್ಯಪ್‌ಗಳು ಉತ್ತಮ ಸೇವೆ ನೀಡುತ್ತಿವೆ. ನಿಮಗೆಲ್ಲಾದರು ಗೂಗಲ್ ಪೇ ಕೈಕೊಟ್ಟ ಸಂದರ್ಭದಲ್ಲಿ ಪರ್ಯಾಯವಾಗಿ ಈ ಪೇಮೆಂಟ್ ಆ್ಯಪ್‌ಗಳನ್ನು ಕೂಡ ಬಳಸಬಹುದು.

ಫೋನ್ ಪೇ (PhonePe app): ಗೂಗಲ್ ಪೇ ಆ್ಯಪ್‌ನಂತೆಯೇ ಸೇವೆ ಒದಗಿಸುತ್ತಿರುವ ‘ಪೋನ್‌ ಪೇ’ ಆ್ಯಪ್ ಈಗಾಗಲೇ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈ ಆ್ಯಪ್​ನಲ್ಲಿಯೂ ಪೇಮೆಂಟ್ ಮಾಡಲು ಹಲವು ಆಯ್ಕೆಗಳಿವೆ. ಕ್ಯೂಆರ್‌-QR ಕೋಡ್‌ ಸ್ಕ್ಯಾನ್‌ ಸೌಲಭ್ಯವು ಸಹ ಇದೆ. ಫೋನ್‌ ಪೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಾಗುತ್ತವೆ. ಗ್ರಾಹಕರು ಬ್ಯಾಂಕ್‌ಗೆ ನೊಂದಾಯಿತ ಮೊಬೈಲ್‌ನಂಬರ್‌ನಿಂದ ಫೋನ್‌ ಪೇ ಖಾತೆ ಹೊಂದುವುದು. ಸೆಕ್ಯುರಿಟಿಗಾಗಿ ನಾಲ್ಕು ನಂಬರ್​ನ ಪಿನ್‌ಸೆಟ್‌ ಮಾಡಿಕೊಳ್ಳುವ(UPI PIN) ಆಯ್ಕೆ ಇದೆ. ಪಾಸ್‌ಬುಕ್, ಬ್ಯಾಂಕ್ ಬ್ಯಾಲೆನ್ಸ್‌, ಟ್ರಾನ್ಸಾಕ್ಶನ್ ಹಿಸ್ಟರಿ ಸೌಲಭ್ಯಗಳು ಇವೆ.

ಪೇಟಿಎಮ್‌(Paytm): ಪೇಟಿಎಮ್ ಆ್ಯಪ್ ಸಹ ಈಗಾಗಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಗುರುತಿಸಿಕೊಂಡಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ ಫೋನ್‌ಗಳಲ್ಲಿ ಲಭ್ಯವಿದೆ. ಕ್ಯಾಶ್‌ಬ್ಯಾಕ್, ಡಿಸ್ಕೌಂಟ್, ಆಫರ್, ಗಿಫ್ಟ್‌ ವೊಚರ್‌ನಂತಹ ಸೌಲಭ್ಯಗಳು ಪೇಟಿಎಮ್‌ನಲ್ಲಿ ಲಭ್ಯವಾಗಲಿವೆ. ಗ್ರಾಹಕರು ಲೋನ್ ಪೇಮೆಂಟ್, ಬಿಲ್ ಪೇಮೆಂಟ್, ಫೋನ್ ರೀಚಾರ್ಜ್, ಆನ್‌ಲೈನ್‌ ಶಾಪಿಂಗ್ ಮಾಡಬಹುದು. ಸಣ್ಣ ಪುಟ್ಟ ಅಂಗಡಿಗಳಿಲ್ಲಿಯೂ ಸಹ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ಹಣ ವರ್ಗಾವಣೆ ಮಾಡಬಹುದು.

ಭೀಮ್ ಆಪ್ (BHIM): ಭೀಮ್‌ ಆ್ಯಪ್ ಸಹ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಆಗಿದ್ದು, Unified Payments Interface (UPI) ಯುಪಿಐ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಪೇನಂಯತೆ UPI ID ಮತ್ತು QR ಕೋಡ್ ಬಳಸಿ ಭೀಮ್‌ ಆ್ಯಪ್​ನಲ್ಲಿ ಸಹ ನೇರವಾಗಿ ಖಾತೆಗೆ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಗೂಗಲ್ ಪೇ ಸ್ಟೋರ್‌ನಲ್ಲಿ ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗ್ರಾಹಕರು ಅವರಿಗೆ ಸೂಕ್ತವಾಗ ಭಾಷೆ ಸೆಟ್‌ ಮಾಡುವ ಆಯ್ಕೆ ನೀಡಲಾಗಿದೆ.

ರೆಡ್ಮಿ 10 ಸ್ಮಾರ್ಟ್​ಫೋನಿನ ಮಾಹಿತಿ ಹಂಚಿಕೊಂಡು ಡಿಲೀಟ್ ಮಾಡಿದ ಶವೋಮಿ: ಇಲ್ಲಿದೆ ಫೀಚರ್ಸ್

ಬಿಡುಗಡೆಗೆ ಮೂರು ದಿನವಿರುವಾಗ ಬಹುನಿರೀಕ್ಷಿತ ಮೋಟೋ ಎಡ್ಜ್ 20 ಫೋನಿನ ಬೆಲೆ ಬಹಿರಂಗ

(Google Pay users here are 3 alternative digital UPI Payment App you can use like PhonePe)

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್