ಟಾಟಾ ಇಂಟರ್ನೆಟ್: 500 Mbps ಸ್ಪೀಡ್, ತಿಂಗಳಿಗೆ 3300 GB ಡೇಟಾ
Tata Sky Vs Spectra: ಹಾಗೆಯೇ 6 ತಿಂಗಳ ಯೋಜನೆಯನ್ನು ಆರಿಸಿದರೆ, ತಿಂಗಳಿಗೆ 1,500 GB ವರೆಗಿನ ಡೇಟಾವನ್ನು ನೀಡಲಾಗುತ್ತದೆ. ಇನ್ನು ಒಂದು ವರ್ಷದ ಪ್ಲ್ಯಾನ್ನ್ನು ಆಯ್ಕೆ ಮಾಡಿದರೆ ಇಡೀ ವರ್ಷ ಅನಿಯಮಿತ ಡೇಟಾ ಬಳಸಬಹುದು.
ಭಾರತದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಅನೇಕ ಕಂಪೆನಿಗಳು ಕಳೆದೊಂದು ವರ್ಷದಿಂದ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಿದೆ. ಇದರ ಬೆನ್ನಲ್ಲೇ ಟೆಲಿಕಾಂ ಕಂಪೆನಿಗಳು ಕೂಡ ಅತ್ಯುತ್ತಮ ಇಂಟರ್ನೆಟ್ ಪ್ಲ್ಯಾನ್ಗಳನ್ನೂ ಪರಿಚಯಿಸಲು ಆರಂಭಿಸಿದೆ. ಈಗಾಗಲೇ ಹಲವು ಕಂಪೆನಿಗಳು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಮೇಲೆ ಹಲವು ಆಫರ್ಗಳನ್ನು ನೀಡುತ್ತಿವೆ. ಇದೀಗ ಟಾಟಾ ಸ್ಕೈ ಕೂಡ ತನ್ನ ಬ್ರಾಂಡ್ಬ್ಯಾಡ್ ಸೇವೆಯಲ್ಲಿ ವಿಶೇಷ ಆಫರ್ಗಳನ್ನು ಗ್ರಾಹಕರ ಮುಂದಿಟ್ಟಿದೆ. ಹಾಗಿದ್ರೆ ಬ್ರಾಂಡ್ಬ್ಯಾಂಡ್ ಮೂಲಕ ಟಾಟಾ ನೀಡುತ್ತಿರುವ ವಿಶೇಷ ಕೊಡುಗೆಗಳೇನು ಎಂಬುದನ್ನು ತಿಳಿಯೋಣ.
ಟಾಟಾ ಸ್ಕೈ ಸ್ಟ್ರಾಂಗ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್: ಟಾಟಾ ಸ್ಕೈಯ 500 Mbps ವೇಗದಲ್ಲಿ ಇಂಟರ್ನೆಟ್ ಸೇವೆ ನೀಡುತ್ತಿದೆ. ಈ ಬ್ರಾಡ್‌ಬ್ಯಾಂಡ್ ರಿಚಾರ್ಜ್ ಮೊತ್ತ 2,300 ರೂ. ಒಂದು ತಿಂಗಳ ವಾಲಿಡಿಟಿಯೊಂದಿಗೆ ಸಿಗುವ ಈ ಪ್ಲ್ಯಾನ್ನಲ್ಲಿ ಗ್ರಾಹಕರಿಗೆ ಬರೋಬ್ಬರಿ 3300 GB ನೀಡಲಾಗುತ್ತದೆ. ಅಂದರೆ ಪ್ರತಿದಿನ 110 ಜಿಬಿ ಇಂಟರ್ನೆಟ್ ಬಳಸಬಹುದು. ಆದರೆ ಈ ಪ್ಲ್ಯಾನ್ನಲ್ಲಿ ದಿನ ಬಳಕೆಯ ಮಿತಿ ನೀಡಲಾಗಿಲ್ಲ. ಬದಲಾಗಿ ಒಂದು ತಿಂಗಳಲ್ಲಿ 3300 GB ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಕಂಪನಿಯು ತನ್ನ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ನಲ್ಲಿ 99.9% ಅಪ್ ಟೈಮ್ ನೀಡುತ್ತದೆ. ಇದಾಗ್ಯೂ ಟಾಟಾ ಸ್ಕೈಯ ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ರೀತಿಯ OTT ಪ್ರಯೋಜನಗಳನ್ನು ನೀಡಲಾಗಿಲ್ಲ.
ಇನ್ನು ಸ್ಪೆಕ್ಟ್ರಾ ಬ್ರಾಂಡ್ಬ್ಯಾಂಡ್ ಕಂಪೆನಿ ಕೂಡ ಇಂತಹದ್ದೇ ಮತ್ತೊಂದು ಇಂಟರ್ನೆಟ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲೂ ಕೂಡ 500 Mbps ಇಂಟರ್ನೆಟ್ ವೇಗ ನೀಡುತ್ತಿರುವುದು ವಿಶೇಷ.
ಸ್ಪೆಕ್ಟ್ರಾ ಬ್ರಾಡ್‌ಬ್ಯಾಂಡ್ ಯೋಜನೆ: ಸ್ಪೆಕ್ಟ್ರಾ ಪರಿಚಯಿಸಿರುವ 1,599 ರೂ. ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬಳಕೆದಾರರಿಗೆ 500 Mbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಇನ್ನು ಈ ಆಫರ್ನಲ್ಲಿ ಒಂದು ವರ್ಷದ ರಿಚಾರ್ಜ್ ಮಾಡಿದರೆ ಅನಿಯಮಿತ ಡೇಟಾವನ್ನು ನೀಡಲಾಗುತ್ತದೆ. ಈ ಬ್ರಾಡ್‌ಬ್ಯಾಂಡ್ ಬಳಸಲು, ಬಳಕೆದಾರರು 1,000 ರೂಪಾಯಿಗಳನ್ನು ಇನ್ಸ್ಟಾಲೇಶನ್ ಚಾರ್ಜ್ ಹಾಗೂ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕು. ಇದರಲ್ಲಿ 2 ಸಾವಿರ ರೂ. ಅನ್ನು ಕಂಪೆನಿ ಮರುಪಾವತಿ ಮಾಡಲಿದೆ.
ಇನ್ನು 1,599 ರ ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ನೀವು ತಿಂಗಳಿಗೆ ಮಾತ್ರ ರಿಚಾರ್ಜ್ ಮಾಡಿದ್ರೆ 750 ಜಿಬಿ ಡೇಟಾ ನೀಡಲಾಗುತ್ತದೆ. ಹಾಗೆಯೇ 6 ತಿಂಗಳ ಯೋಜನೆಯನ್ನು ಆರಿಸಿದರೆ, ತಿಂಗಳಿಗೆ 1,500 GB ವರೆಗಿನ ಡೇಟಾವನ್ನು ನೀಡಲಾಗುತ್ತದೆ. ಇನ್ನು ಒಂದು ವರ್ಷದ ಪ್ಲ್ಯಾನ್ನ್ನು ಆಯ್ಕೆ ಮಾಡಿದರೆ ಇಡೀ ವರ್ಷ ಅನಿಯಮಿತ ಡೇಟಾ ಬಳಸಬಹುದು.
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಮೇಲೆ ಪ್ರೇಕ್ಷಕರಿಂದ ಬಾಟಲ್ ಕಾರ್ಕ್ ದಾಳಿ: ತಿರುಗಿಸಿ ಹೊಡಿ ಎಂದ ಕಿಂಗ್ ಕೊಹ್ಲಿ
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?