ನಿಮ್ಮ ಸ್ಮಾರ್ಟ್​ಫೋನ್ ಡಿಸ್​ ಪ್ಲೇಯಲ್ಲಿ ಎರಡೆರಡು ಆ್ಯಪ್ ಬಳಸಿ: ಮಾಡಬೇಕಾದ್ದು ಇಷ್ಟೆ!

ಈ ವಿಶೇಷ ಸೌಲಭ್ಯದಲ್ಲಿ ಬಳಕೆದಾರರು ಏಕಕಾಲದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಎರಡು ಆ್ಯಪ್ ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಾದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್‌ ಸ್ಕ್ರೀನ್ ಮೋಡ್ ಬಳಕೆ ಮಾಡುವುದು ಹೇಗೆ?.

ನಿಮ್ಮ ಸ್ಮಾರ್ಟ್​ಫೋನ್ ಡಿಸ್​ ಪ್ಲೇಯಲ್ಲಿ ಎರಡೆರಡು ಆ್ಯಪ್ ಬಳಸಿ: ಮಾಡಬೇಕಾದ್ದು ಇಷ್ಟೆ!
split screen
Follow us
TV9 Web
| Updated By: Vinay Bhat

Updated on: Aug 15, 2021 | 3:14 PM

ಮಾರುಕಟ್ಟೆಗೆ ಈಗ ನಾನಾ ಬಗೆಯ ವೈಶಿಷ್ಟ್ಯವುಳ್ಳ ಸ್ಮಾರ್ಟ್​ಫೋನ್​ಗಳು ಕಾಲಿಡುತ್ತಿವೆ. ಮುಂಭಾಗದಲ್ಲಿ ಮಾತ್ರವಲ್ಲದೆ ಫೋನಿನ ಹಿಂಭಾಗದಲ್ಲೂ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದಕ್ಕೆ ತಕ್ಕಂತೆ ಅದರಲ್ಲಿನ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಸಾಕಷ್ಟು ಅಪ್‌ಡೇಟ್‌ಗಳಾಗಿದೆ. ಪ್ರತಿ ಆಂಡ್ರಾಯ್ಡ್‌ ಓಎಸ್‌ನಲ್ಲಿಯೂ ಏನಾದರೊಂದು ಹೊಸ ಫೀಚರ್ ಇದ್ದೆ ಇರುತ್ತದೆ. ಆ ಪೈಕಿ ಮಲ್ಟಿಟಾಸ್ಕ್‌ ಕೆಲಸ ನಿರ್ವಹಿಸಲು ಸ್ಪ್ಲಿಟ್ ಸ್ಕ್ರೀನ್ ಮೋಡ್ ಹೆಚ್ಚು ಗಮನಸೆಳೆದಿದೆ. ಕೆಲವರು ಬಳಸುತ್ತಿದ್ದಾರೆ ಕೂಡ.

ಈ ವಿಶೇಷ ಸೌಲಭ್ಯದಲ್ಲಿ ಬಳಕೆದಾರರು ಏಕಕಾಲದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಎರಡು ಆ್ಯಪ್ ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಾದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್‌ ಸ್ಕ್ರೀನ್ ಮೋಡ್ ಬಳಕೆ ಮಾಡುವುದು ಹೇಗೆ?.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಫೀಚರ್‌ಗಳಲ್ಲೊಂದಾದ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದೇ ವೇಳೆಗೆ ಎರಡು ಅಪ್ಲಿಕೇಶನ್‌ಗಳನ್ನು ಬಳಸಲು ಈ ಫೀಚರ್ ಅನುಮತಿಸುತ್ತದೆ. ಉದಾಹರಣೆಗೆ-ಏಕಕಾಲದಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ವೀಕ್ಷಿಸಬಹುದು ಮತ್ತು ಸ್ನೇಹಿತರಿಗೆ ವಾಟ್ಸ್ಆ್ಯಪ್ ನಲ್ಲಿ ಚಾಟ್ ಕೂಡ ಮಾಡಬಹುದಾಗಿದೆ.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಸೆಟ್‌ ಮಾಡಲು ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಮೇನ್ ಸ್ಕ್ರೀನ್‌/ಹೋಮ್‌ ಸ್ಕ್ರೀನ್‌ ಕೆಳಗಿನ ಎಡ ಭಾಗದಲ್ಲಿನ ರೀಸೆಂಟ್‌ ಅಪ್ಲಿಕೇಶನ್‌ಗಳ ಬಟನ್ ಟ್ಯಾಪ್ ಮಾಡಿ. (ಮಧ್ಯ ಬಟನ್‌ ಎಡ ಭಾಗದ ಬಟನ್). ಇತ್ತೀಚಿಗೆ ನೀವು ಬಳಕೆ ಮಾಡಿದ/ತೆರೆದ ಎಲ್ಲಾ ಅಪ್ಲಿಕೇಶನ್‌ಗಳ ಕ್ಯಾಸ್ಕೇಡಿಂಗ್ ಮೆನು ಕಾಣಿಸುತ್ತದೆ.

ಆಗ, ಬಲ ಭಾಗದ ಮೇಲ್ಭಾಗದಲ್ಲಿ ಕಾಣುವ ಮೂರು ಡಾಟ್ ಬಟನ್ ಇತ್ತಿರಿ, ನಂತರ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ ಅಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಆಯ್ಕೆ ಆನ್ ಮಾಡಿ. ಆನಂತರ, ನೀವು ಒಂದೇ ವೇಳೆ ಎರಡು ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.

ಇನ್ನೂ ಮಧ್ಯ ಬಟನ್‌ ಎಡ ಭಾಗದ ಬಟನ್ ಅನ್ನು ಟ್ಯಾಪ್ ಮಾಡಿದಾಗ ಇತ್ತೀಚಿಗೆ ನೀವು ತೆರೆದ ಆ್ಯಪ್ಸ್‌ ಲಿಸ್ಟ್‌ ಕಾಣಿಸುತ್ತವೆ. ಅವುಗಳಲ್ಲಿ ಯಾವ ಆಪ್ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಮಾಡಲು ಬಯಸುತ್ತಿರೊ ಆ ಆ್ಯಪ್ ಅನ್ನು ಟ್ಯಾಪ್ ಮಾಡಿ ಹಿಡಿಯಿರಿ. ಆಗ ನೀವು ಟ್ಯಾಪ್ ಮಾಡಿರುವ ಆ್ಯಪ್ ನಿಮಗೆ ಸ್ಪ್ಲಿಟ್ ಸ್ಕ್ರೀನ್ ವ್ಯೂ ಕಾಣಿಸುತ್ತದೆ. ಈ ಆಯ್ಕೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳನ್ನು ಕಾಣಸಿಗುತ್ತದೆ. ನಿಮ್ಮ ಮೊಬೈಲ್​ನಲ್ಲಿ ಈ ಆಯ್ಕೆ ಇಲ್ಲ ಎಂದಾದಲ್ಲಿ ಮೆನುವಿಗೆ ಹೋಗಿ ಸೆಟ್ಟಿಂಗ್ಸ್​ ಆಯ್ಕೆ ಮಾಡಿದರೆ ಅದರಲ್ಲಿ ಸ್ಪ್ಲಿಟ್ ಸ್ಕ್ರೀನ್ ಸರ್ಚ್ ಮಾಡಿದರೆ ಸಿಗುತ್ತದೆ.

ಆಗಸ್ಟ್​ನಲ್ಲಿ ಖರೀದಿಸಬಹುದಾದ 5 ಬೆಸ್ಟ್ ಬಜೆಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

ಟಾಟಾ ಇಂಟರ್​ನೆಟ್: 500 Mbps ಸ್ಪೀಡ್, ತಿಂಗಳಿಗೆ 3300 GB ಡೇಟಾ

(How to use split screen mode on your Android smartphone Here is the simple tricks)

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ