ಆಗಸ್ಟ್​ನಲ್ಲಿ ಖರೀದಿಸಬಹುದಾದ 5 ಬೆಸ್ಟ್ ಬಜೆಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

ಆಗಸ್ಟ್ ತಿಂಗಳಲ್ಲಿ ನೀವು ಹೊಸ ಸ್ಮಾರ್ಟ್ಫೋನ್ ಕೊಂಡುಕೊಳ್ಳುವ ಪ್ಲಾನ್ನಲ್ಲಿದ್ದರೆ, ಅದು ಬಜೆಟ್ ಬೆಲೆಯದ್ದಾಗಿದ್ದಲ್ಲಿ ಇಲ್ಲಿವೆ ಆ ಅತ್ಯುತ್ತಮ ಆಯ್ಕೆಗಳು.

TV9 Web
| Updated By: Vinay Bhat

Updated on: Aug 15, 2021 | 1:58 PM

ಭಾರತದಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳು ಹೆಚ್ಚು ಯಶಸ್ಸು ಗಳಿಸುತ್ತದೆ. ಕೈಗೆಟುಕುವ ಬೆಲೆ ಮತ್ತು ಅಗತ್ಯವಾದ ಅಧ್ಬುತ ಫೀಚರ್ ಗಳು ಇದಕ್ಕೆ ಪ್ರಮುಖ ಕಾರಣ. ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾಗಿರುವ ಶವೋಮಿ, ರಿಯಲ್ ಮಿ ಒಂದುಕಡೆಯಾದರೆ ಸ್ಯಾಮ್ಸಂಗ್ ಕೂಡ ಈ ನಿಟ್ಟಿನಲ್ಲಿ ಸೈ ಎನಿಸಿಕೊಳ್ಳುತ್ತಿದೆ.

1 / 7
ಹಾಗಾದ್ರೆ ಆಗಸ್ಟ್ ತಿಂಗಳಲ್ಲಿ ನೀವು ಹೊಸ ಸ್ಮಾರ್ಟ್​ಫೋನ್​​ ಕೊಂಡುಕೊಳ್ಳುವ ಪ್ಲಾನ್​ನಲ್ಲಿದ್ದರೆ, ಅದು ಬಜೆಟ್ ಬೆಲೆಯದ್ದಾಗಿದ್ದಲ್ಲಿ ಇಲ್ಲಿವೆ ಆ ಅತ್ಯುತ್ತಮ 5 ಸ್ಮಾರ್ಟ್​ಫೋನ್​​ಗಳು…

2 / 7
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್: ಈ ಫೋನಿನ ಬೆಲೆ 19,999 ರೂ. 6.67 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಹೊಂದಿದ್ದು, 108 ಮೆಗಾಫಿಕ್ಸೆಲ್​ನ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. 5020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. 16MP ಸೆಲ್ಫೀ ಕ್ಯಾಮೆರಾ ಇದೆ.

3 / 7
ರಿಯಲ್ ಮಿ X7 5G: ಇದರ ಬೆಲೆ 19,999 ರೂ. ಇದು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5G ಸ್ಮಾರ್ಟ್​ಫೋನ್​​ಗಳಲ್ಲಿ ಇದಕೂಡ ಒಂದಾಗಿದೆ. ಈ ಸ್ಮಾರ್ಟ್​ಫೋನ್​​ 6.4 ಇಂಚಿನ ಡಿಸ್ ಪ್ಲೇ ಹೊಂದಿದೆ. 4,310mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಬರೋಬ್ಬರಿ 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. 64MP ಟ್ರಿಪಲ್ ಕ್ಯಾಮೆರಾ ಸೆಟಪ್, 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

4 / 7
ರೆಡ್ಮಿ ನೋಟ್ 10S: ಈ ಸ್ಮಾರ್ಟ್​ಫೋನ್​​ನ ಬೆಲೆ 14,999 ರೂ. ಇದು 6.43 ಇಂಚಿನ ಡಿಸ್ ಪ್ಲೇ ಹೊಂದಿದ್ದು, 6GB RAM ಆಯ್ಕೆಯಿಂದ ಕೂಡಿದೆ. 64 ಮೆಗಾಫಿಕ್ಸೆಲ್ ಕ್ವಾಡ್ ಕ್ಯಾಮೆರಾ, 13 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಕಡಿಮೆ ಬೆಲೆಗೆ ಆಕರ್ಷಕ ಫೋನ್ ಕೊಂಡುಕೊಳ್ಳುವವರ ಮೊದಲ ಆಯ್ಕೆ ರೆಡ್ಮಿ ನೋಟ್ 10 ಎಸ್ ಆಗಿದೆ.

5 / 7
ಪೋಕೋ X3 ಪ್ರೊ: ಇದರ ಬೆಲೆ 18,999 ರೂ. ಆಗಿದೆ. ಈ ಸ್ಮಾರ್ಟ್​ಫೋನ್​​ 6.67 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಹೊಂದಿದೆ. 48 ಮೆಗಾಫಿಕ್ಸೆಲ್​ನ ಮುಖ್ಯ ಕ್ಯಾಮೆರಾ ಇದರಲ್ಲಿದ್ದು, ಸೆಲ್ಫೀಗಾಗಿ 20 ಮೆಗಾಫಿಕ್ಸೆಲ್ ನೀಡಲಾಗಿದೆ. ಸ್ನಾಪ್ಡ್ರಾಗನ್ 860 ಪ್ರೊಸೆಸರ್ನಿಂದ ಆವೃತ್ತವಾಗಿದೆ. 5160mAh ಸಾಮರ್ಥ್ಯದ ಬ್ಯಾಟರಿ ಪವರ್​ಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.

6 / 7
ಸ್ಯಾಮ್ಸಂಗ್ ಗ್ಯಾಲಕ್ಸಿ M31s: ಈ ಸ್ಮಾರ್ಟ್​ಫೋನ್​​ನ ಬೆಲೆ 16,999 ರೂ. ಆಗಿದೆ. 6.5 ಇಂಚಿನ ಡಿಸ್ ಪ್ಲೇ ಇದರಲ್ಲಿದ್ದು, ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದಕ್ಕೆ ಪೂರಕವಾಗಿ 25Wನ ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. 64 ಮೆಗಾಫಿಕ್ಸೆಲ್​ನ ಪ್ರೈಮರಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

7 / 7
Follow us