JioPhone Next: ಜಿಯೋ ಫೋನ್ ನೆಕ್ಸ್ಟ್ನ ಅಚ್ಚರಿ ಫೀಚರ್ ಲೀಕ್: ನೀವು ಬೆರಗಾಗುವುದು ಗ್ಯಾರೆಂಟಿ
ಗೂಗಲ್ ಸಂಸ್ಥೆಯ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಸ್ಟ್ ಫೋನನ್ನು ತಯಾರಿಸಲಾಗಿದೆ. ಜಿಯೋದ ಹೊಸ ಫೋನ್ ಗೂಗಲ್ ಸಪೋರ್ಟ್ ಇರುವುದು ಈ ಫೋನಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ.
ಜನಪ್ರಿಯ ಜಿಯೋ ಕಂಪನಿಯ ಹೊಸ ಜಿಯೋ ಫೋನ್ ನೆಕ್ಸ್ಟ್ ಫೋನ್ (JioPhone Next) ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಆದರೆ, ಈ ಫೋನಿನ ಬಗ್ಗೆ ಒಂದಾಲ್ಲ ಒಂದು ವಿಚಾರ ಬಹಿರಂಗವಾಗುತ್ತಲೇ ಇದೆ. ಫೋನ್ ಪ್ರಿಯರಲ್ಲಂತು ಜಿಯೋದ ಹೊಸ ಫೋನ್ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಹೀಗಿರುವಾಗ ಜಿಯೋ ಫೋನ್ ನೆಕ್ಸ್ಟ್ ಫೋನಿನ ಫೀಚರ್ಸ್‌ಗಳು ಲೀಕ್ ಆಗಿದ್ದು, ಗ್ರಾಹಕರನ್ನ ಬೆರಗಾಗಿಸಿದೆ.
ಗೂಗಲ್ ಸಂಸ್ಥೆಯ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಸ್ಟ್ ಫೋನನ್ನು ತಯಾರಿಸಲಾಗಿದೆ. ಇದು 5ಜಿ ನೆಟ್ವರ್ಕ್ ಸಾಮರ್ಥ್ಯದ ಫೋನ್ ಆಗಿದ್ದು ಕಡಿಮೆ ಬೆಲೆಯಲ್ಲಿ ಲಭ್ಯ ಇರುತ್ತದೆ ಎಂದು ಈಗಾಗಲೇ ಕಂಪೆನಿ ತಿಳಿಸಿದೆ. ಹೀಗಿರುವಾಗ ಈ ಫೋನಿನ ಲೀಕ್ ಮಾಹಿತಿಗಳು ಈಗ ಅಚ್ಚರಿ ತಂದಿದೆ. ಜಿಯೋದ ಹೊಸ ಫೋನ್ ಗೂಗಲ್ ಸಪೋರ್ಟ್ ಇರುವುದು ಈ ಫೋನಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ.
ಜಿಯೋ ಫೋನ್ ನೆಕ್ಸ್ಟ್ ಫೋನ್ ಪ್ರಿ-ಇನ್‌ಸ್ಟಾಲ್ಡ್ ಸ್ನ್ಯಾಪ್‌ಚಾಟ್ ಆಪ್ ಹೊಂದಿರಲಿದ್ದು, ವಿಡಿಯೋ ಕಾಲಿಂಗ್ ಗಾಗಿ ಗೂಗಲ್ ಡ್ಯೂ ಸಹ ಇರಲಿದೆಯಂತೆ. ಇದರೊಂದಿಗೆ ಗೂಗಲ್ ಕ್ಯಾಮೆರಾ ಗೋ ಸಹ ಇನ್‌ಬಿಲ್ಟ್ ಆಗಿ ಇರಲಿದೆ. ಜೊತೆಗೆ ಗೂಗಲ್‌ನ ಕೆಲವು ಆ್ಯಪ್‌ಗಳ ಬೆಂಬಲ ಪಡೆದಿರಲಿದೆ. ಹಾಗೆಯೇ ಜಿಯೋ ಫೋನ್ ನೆಕ್ಟ್ಸ್ ಕ್ವಾಲ್ಕಮ್ 215 ಸಾಮರ್ಥ್ಯದೊಂದಿಗೆ ಇದು 1.3GHz ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಜಿಯೋ ಫೋನ್ ಎಂಬ ಫೀಚರ್ ಫೋನ್ ತಯಾರಿಸಿ ಬಿಡುಗಡೆ ಮಾಡಲಾಗಿತ್ತು. ಈ ಜಿಯೋ ಫೋನ್ 10 ಕೋಟಿಗೂ ಹೆಚ್ಚು ಹ್ಯಾಂಡ್ಸೆಟ್ಗಳು ಮಾರಾಟವಾಗಿದ್ದವು. ಇದೀಗ ಜಿಯೋ ಫೋನ್ ನೆಕ್ಸ್ಟ್ 30 ಕೋಟಿಯಷ್ಟು ಮಾರಾಟ ಮಾಡುವ ಗುರಿಯನ್ನ ಇಟ್ಟುಕೊಳ್ಳಲಾಗಿದೆ. ಇದೇ ಸೆಪ್ಟಂಬರ್ನಲ್ಲಿ Jio Phone Next ಹೊರಬರಲಿದೆ.
ಜಿಯೋ ಫೋನ್ ನೆಕ್ಸ್ಟ್ 1440×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಸ್ಕ್ರೀನ್ ಕಂಫರ್ಟ್ ಗಾತ್ರದಲ್ಲಿ ಇರಲಿದ್ದು, ಹೆಚ್‌ಡಿ ಪ್ಲಸ್ ಮಾದರಿಯನ್ನು ಹೊಂದಿರಲಿದೆ. ಈ ಫೋನಿನಲ್ಲಿ ಆಂಡ್ರಾಯ್ಡ್ 11 ಗೋ ಎಡಿಷನ್ ಓಎಸ್ ಸಪೋರ್ಟ್ ಇರಲಿದ್ದು, ಕೆಲವು ನೂತನ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ. ವಾಯಿಸ್ ಅಸಿಸ್ಟಂಟ್, ಲಾಂಗ್ವೇಜ್ ಟ್ರಾನ್ಸ್‌ಲೇಟ್, ಸ್ಮಾರ್ಟ್ ಕ್ಯಾಮೆರಾ ಮತ್ತು ಎಆರ್ ಫಿಲ್ಟರ್ ಸೇರಿದಂತೆ ಇನ್ನಷ್ಟು ಆಕರ್ಷಕ ಫೀಚರ್ಸ್‌ಗಳು ಇರಲಿವೆ.
Fake news: ಕೊರೊನಾ ಲಸಿಕೆಯಿಂದ ಮನುಷ್ಯರು ಚಿಂಪಾಂಜಿಯಾಗಿ ಮಾರ್ಪಡುವ ಸುಳ್ಳು ಸುದ್ದಿಯ ಚುಂಗು ಹಿಡಿದು
ಪೇಟಿಎಮ್ ಕೊಟ್ಟ ಆಫರ್ಗೆ ನಡುಗಿದ ಅಮೆಜಾನ್, ಫ್ಲಿಪ್ಕಾರ್ಟ್: ಸ್ವಾತಂತ್ರ್ಯ ದಿನಾಚರಣೆಗೆ ಬಂಪರ್ ಡಿಸ್ಕೌಂಟ್
(Reliance JioPhone Next Specifications Leaked May Get Qualcomm QM215 SoC and more)