WhatsApp ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​​ಆಪ್ ಚಾಟ್ ಬಚ್ಚಿಡುವುದು ಹೇಗೆ? ಇಲ್ಲಿದೆ ಸುಲಭದ ಉಪಾಯ

ಅಂಡ್ರಾಯ್ಡ್ ಫೋನ್​ಗಳಲ್ಲಾದರೆ ನಿಮ್ಮ ಚಾಟ್​​ಲಿಸ್ಟ್​​ನ ಕೊನೇ ವರೆಗೆ ಸ್ಕ್ರಾಲ್ ಮಾಡಿದರೆ ಅಲ್ಲಿ ಕೊನೆಯದ್ದಾಗಿ ಆರ್ಕೈವ್ಡ್ ಚಾಟ್ ಕಾಣಬಹುದು. ಈ ಚಾಟ್ ಮತ್ತೆ ಚಾಟ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಬೇಕೆಂದಾದರೆ ಈ ಹಿಂದೆ ಮಾಡಿದಂತೆ ಚಾಟ್ ಮೇಲೆ ಒತ್ತಿ.

WhatsApp ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​​ಆಪ್ ಚಾಟ್ ಬಚ್ಚಿಡುವುದು ಹೇಗೆ? ಇಲ್ಲಿದೆ ಸುಲಭದ ಉಪಾಯ
ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 13, 2021 | 4:52 PM

ನಿಮ್ಮ ಕೆಲವು ವಾಟ್ಸ್​​ಆಪ್ ಚಾಟ್​ಗಳನ್ನು ಯಾರೂ ಕಾಣಬಾರದು ಅಥವಾ ನಿಮ್ಮ ಚಾಟ್ ಪಟ್ಟಿಯಲ್ಲಿ ಆ ವ್ಯಕ್ತಿ ಜತೆಗಿನ ಯಾವುದೇ ಚಾಟ್ ಕಾಣಿಸಿಕೊಳ್ಳಬಾರದು ಎಂದು ನೀವು ಬಯಸುವಿರಾದರೆ ಇಲ್ಲಿದೆ ಒಂದು ಸುಲಭ ಉಪಾಯ. ಅದಕ್ಕಾಗಿ ಥರ್ಡ್ ಪಾರ್ಟಿ ಆಪ್​ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್​​ಆಪ್​​ನಲ್ಲಿಯೇ ಚಾಟ್ ಮರೆ ಮಾಡುವ (Hide) ಫೀಚರ್ ಇದೆ. ಅದೇ ಆರ್ಕೈವ್ಡ್ (Archived). ಈ ರೀತಿ ಆರ್ಕೈವ್ ಮಾಡಿದ ಚಾಟ್ ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್​ನಲ್ಲಿಯೇ ಇರುತ್ತವೆ.ಆದರೆ ಚಾಟ್ ಲಿಸ್ಟ್ ನಲ್ಲಿ ಇವು ಕಾಣಿಸುವುದಿಲ್ಲ. ತಾತ್ಕಾಲಿಕವಾಗಿ ಚಾಟ್ ಮರೆ ಮಾಡುವುದು ಹೇಗೆ? ನಿಮ್ಮ ವಾಟ್ಸ್ ಆಪ್ ತೆರೆಯಿರಿ. ಯಾವ ವ್ಯಕ್ತಿಯ ಚಾಟ್​ನ್ನು ನೀವು ಮರೆ ಮಾಡಬೇಕೆಂದಿದ್ದೀರೋ ಆ ಚಾಟ್ ಮೇಲೆ ಒತ್ತಿ ಹಿಡಿಯಿರಿ. ಆ ಚಾಟ್ ಸೆಲೆಕ್ಟ್ ಆದ ಕೂಡಲೇ ಮೇಲ್ಭಾಗದಲ್ಲಿ ಆರ್ಕೈವ್ ಬಾಕ್ಸ್ (ಚಿಕ್ಕ ಬಾಣದ ಗುರುತು ಕೆಳಮುಖ ಮಾಡಿರುವ ಪುಟ್ಟ ಬಾಕ್ಸ್ ) ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ. ಈಗ ನಿಮ್ಮ ಚಾಟ್ ಲಿಸ್ಟ್ ನಿಂದ ಆ ವ್ಯಕ್ತಿಯ ಚಾಟ್ ಮರೆಯಾಗುತ್ತದೆ. ವೈಯಕ್ತಿಕ ಖಾತೆ ಮಾತ್ರ ಅಲ್ಲ ಗ್ರೂಪ್ ಚಾಟ್ ಕೂಡಾ ಇದೇ ರೀತಿ ಬಚ್ಚಿಡಬಹುದು.

ಗಮನಿಸಿ: ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ. ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ ಮೆನ್ಶನ್ ಮಾಡಿದರೆ ಅಥವಾ ಉತ್ತರಿಸಿದರೆ ಮಾತ್ರ ನೋಟಿಫಿಕೇಶನ್ ಬರುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.

ಬಚ್ಚಿಟ್ಟ ಚಾಟ್​​ಗಳನ್ನು ಮತ್ತೆ ಮೇಲೆತ್ತುವುದು ಹೇಗೆ? ಅಂಡ್ರಾಯ್ಡ್ ಫೋನ್​ಗಳಲ್ಲಾದರೆ ನಿಮ್ಮ ಚಾಟ್​​ಲಿಸ್ಟ್​​ನ ಕೊನೇ ವರೆಗೆ ಸ್ಕ್ರಾಲ್ ಮಾಡಿದರೆ ಅಲ್ಲಿ ಕೊನೆಯದ್ದಾಗಿ ಆರ್ಕೈವ್ಡ್ ಚಾಟ್ ಕಾಣಬಹುದು. ಈ ಚಾಟ್ ಮತ್ತೆ ಚಾಟ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಬೇಕೆಂದಾದರೆ ಈ ಹಿಂದೆ ಮಾಡಿದಂತೆ ಚಾಟ್ ಮೇಲೆ ಒತ್ತಿ. ಬಲಭಾಗದಲ್ಲಿ ಮೇಲೆ ಕಾಣಿಸುವ ಆರ್ಕೈವ್ಡ್ ಬಾಕ್ಸ್ ಕ್ಲಿಕ್ಕಿಸಿದರೆ ಆ ಚಾಟ್,ನಿಮ್ಮ ಚಾಟ್ ಲಿಸ್ಟ್ ನಲ್ಲಿ ಕಾಣಿಸುತ್ತದೆ.

WhatsApp ನಲ್ಲಿ ಚಾಟ್‌ಗಳನ್ನು “ಶಾಶ್ವತವಾಗಿ” ಮರೆಮಾಡುವುದು ಹೇಗೆ? ಇದಕ್ಕಾಗಿ ನೀವು ” Keep chats archived ” ಫೀಚರ್ ಆನ್ ಮಾಡಬೇಕಾಗುತ್ತದೆ. ಈ ವೈಶಿಷ್ಟ್ಯವನ್ನು ನೀವು Settings > Chats > Archived Chats > Keep Chats Archived ಇರಿಸಿಕೊಳ್ಳಿ. ನೀವು ಇದನ್ನು ಸಕ್ರಿಯಗೊಳಿಸಿದ ನಂತರ, ಸಂದೇಶ ಅಪ್ಲಿಕೇಶನ್‌ನಲ್ಲಿ ನೀವು ಮರೆಮಾಡುವ ಪ್ರತಿಯೊಂದು ಚಾಟ್ ಶಾಶ್ವತವಾಗಿ ಮರೆಮಾಡಲ್ಪಡುತ್ತದೆ. ಆದರೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ ವಾಟ್ಸ್​​ಆಪ್ ನಿಮ್ಮ ಎಲ್ಲಾ ಚಾಟ್‌ಗಳ ಮೇಲೆ ಆರ್ಕೈವ್ಡ್ ಬಾಕ್ಸ್ ಅನ್ನು ಸೇರಿಸುತ್ತದೆ.

ಇದನ್ನೂ ಓದಿ:  How To: ಈಗ ವಾಟ್ಸಾಪ್ ಮೂಲಕ ಕೇವಲ 3 ಹಂತಗಳಲ್ಲಿ ಸುಲಭವಾಗಿ ಲಸಿಕೆ ಪ್ರಮಾಣಪತ್ರ ಪಡೆಯಿರಿ! ಇಲ್ಲಿದೆ ವಿವರ

(How to hide chats in WhatsApp here the tricks for archived chats)