How To: ಈಗ ವಾಟ್ಸಾಪ್ ಮೂಲಕ ಕೇವಲ 3 ಹಂತಗಳಲ್ಲಿ ಸುಲಭವಾಗಿ ಲಸಿಕೆ ಪ್ರಮಾಣಪತ್ರ ಪಡೆಯಿರಿ! ಇಲ್ಲಿದೆ ವಿವರ
Vaccination Certificate: ಲಸಿಕೆ ಪ್ರಮಾಣಪತ್ರ ಪಡೆಯಲು ಇಚ್ಛಿಸುವ ಯಾರೇ ಆದರೂ ಕೇವಲ ವಾಟ್ಸಾಪ್ ಮೆಸೇಜ್ ಹಾಗೂ ಒಂದು ಒಟಿಪಿ ನಮೂದಿಸುವ ಮೂಲಕ ಈ ಕೆಲಸವನ್ನು ಮಾಡಬಹುದು ಎಂದು ಆರೋಗ್ಯ ಇಲಾಖೆ ಕಚೇರಿ ತಿಳಿಸಿದೆ.
ಕೊರೊನಾ ಲಸಿಕೆ ಪಡೆದವರು ಸುಲಭವಾಗಿ ಲಸಿಕೆ ಪ್ರಮಾಣಪತ್ರ ಪಡೆಯಲು ನೂತನ ಮಾರ್ಗ ಅಥವಾ ಅವಕಾಶ ಒಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಾಡಿಕೊಟ್ಟಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ (ಆಗಸ್ಟ್ 8) ವಾಟ್ಸಾಪ್ ಮೂಲಕವೇ ಲಸಿಕೆ ಪ್ರಮಾಣಪತ್ರ ಪಡೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ, ಕೆಲವೇ ಸೆಕೆಂಡ್ಗಳಲ್ಲಿ ಲಸಿಕೆ ಪಡೆದ ನಾಗರಿಕರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಲಸಿಕೆ ಪ್ರಮಾಣಪತ್ರ ಪಡೆಯಲು ಇಚ್ಛಿಸುವ ಯಾರೇ ಆದರೂ ಕೇವಲ ವಾಟ್ಸಾಪ್ ಮೆಸೇಜ್ ಹಾಗೂ ಒಂದು ಒಟಿಪಿ ನಮೂದಿಸುವ ಮೂಲಕ ಈ ಕೆಲಸವನ್ನು ಮಾಡಬಹುದು ಎಂದು ಆರೋಗ್ಯ ಇಲಾಖೆ ಕಚೇರಿ ತಿಳಿಸಿದೆ. ಸಾಮಾನ್ಯ ನಾಗರಿಕನ ಜೀವನವನ್ನು ತಂತ್ರಜ್ಞಾನದ ಮೂಲಕ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ಇದು. MyGov Corona Helpdesk ಮೂಲಕ 3 ಹಜ್ಜೆಗಳಲ್ಲಿ ಲಸಿಕೆ ಪ್ರಮಾಣಪತ್ರ ಪಡೆಯಬಹುದಾಗಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ವಾಟ್ಸಾಪ್ ಮೂಲಕ ಸುಲಭವಾಗಿ ಲಸಿಕೆ ಪ್ರಮಾಣ ಪಡೆಯುವುದು ಹೇಗೆ?
- ಮೊದಲಿಗೆ MyGov Corona Helpdesk ಸಂಪರ್ಕ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಆ ನಂಬರ್: +91 9013151515
- Covid Certificate ಎಂದು ಟೈಪ್ ಮಾಡಿ, ಮೇಲೆ ಸೂಚಿಸಿರುವ ನಂಬರ್ಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ.
- ಆಗ ನಿಮ್ಮ ಮೊಬೈಲ್ಗೆ ಒಂದು ಒಟಿಪಿ ಮೆಸೇಜ್ ಬರುತ್ತದೆ. ಅದನ್ನು ವಾಟ್ಸಾಪ್ ಚಾಟ್ನಲ್ಲಿ ಟೈಪ್ ಮಾಡಿ, ಸೆಂಡ್ ಮಾಡಿ.
- ಈ ಮೂರು ಹಂತಗಳನ್ನು ಪೂರೈಸಿದರೆ ನಿಮಗೆ ಲಸಿಕೆ ಪ್ರಮಾಣಪತ್ರ ಲಭಿಸುತ್ತದೆ. ಆದರೆ, ಒಂದು ಅಂಶವನ್ನು ನೀವು ನೆನಪಿಡಬೇಕು. ಅದೇನೆಂದರೆ, ನೀವು ಲಸಿಕೆ ಪಡೆಯುವಾಗ ಯಾವ ಮೊಬೈಲ್ ನಂಬರ್ ನೋಂದಣಿ ಮಾಡಿದ್ದೀರೋ ಅದೇ ನಂಬರ್ನಿಂದ ಇಲ್ಲಿ ಮೆಸೇಜ್ ಮಾಡಬೇಕು.
- ನೀವು ಲಸಿಕೆ ಪಡೆಯುವಾಗ ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆಯಿಂದಲೇ ಈ ವಾಟ್ಸಾಪ್ ಮೆಸೇಜ್ ಮಾಡಿದರೆ, ನಿಮಗೆ ನಿಮಿಷಗಳಲ್ಲಿ ಲಸಿಕೆ ಪ್ರಮಾಣಪತ್ರ ಸಿಗುತ್ತದೆ.
ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಅನುಮತಿ
ಮೂರನೇ ಅಲೆ ಭೀತಿ: ಕೋವಿಡ್ ಲಸಿಕೆ ಅಭಾವ ನೀಗಿಸಲು ಕೇಂದ್ರ ಸರ್ಕಾರದ ಭಗೀರಥ ಪ್ರಯತ್ನ
(How to download Coronavirus Covid19 Vaccination Certificate through Whatsapp Explained)
Published On - 5:59 pm, Sun, 8 August 21