ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಅನುಮತಿ

ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಅನುಮತಿ
ಕೊವಿಡ್ 19 ಲಸಿಕೆ ಪ್ರಾತಿನಿಧಿಕ ಚಿತ್ರ

Johnson and Johnson Vaccine: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ಈ ಮೂಲಕ ಭಾರತದಲ್ಲಿರುವ ಕೊರೊನಾ ಲಸಿಕೆಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

Sushma Chakre

|

Aug 07, 2021 | 2:20 PM

ನವದೆಹಲಿ: ಅಮೆರಿಕ ಮೂಲದ ಖ್ಯಾತ ಔಷದ ತಯಾರಿಕಾ ಸಂಸ್ಥೆ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ತನ್ನ ಸಿಂಗಲ್ ಡೋಸ್ ಕೊವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿತ್ತು. ಅದಕ್ಕೆ ಇದೀಗ ಅನುಮತಿ ಸಿಕ್ಕಿದ್ದು, ಈ ಮೂಲಕ ಭಾರತದಲ್ಲಿರುವ ಕೊರೊನಾ ಲಸಿಕೆಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಕೊವಿಡ್ ಲಸಿಕಾ ಅಭಿಯಾನ ನಡೆಯುತ್ತಿದ್ದು, ಇದೀಗ ಭಾರತದಲ್ಲಿರುವ ಕೊರೊನಾ ಲಸಿಕೆಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ. 

ಭಾರತದಲ್ಲಿ ಈಗಾಗಲೇ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಾಡೆರ್ನಾ ಕೊರೊನಾ ಲಸಿಕೆಗಳ ಬಳಕೆಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೂ ಅನುಮತಿ ಸಿಗುವ ಮೂಲಕ ಭಾರತದಲ್ಲಿರುವ ಕೊವಿಡ್ ಲಸಿಕೆಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಆಗಸ್ಟ್ 5ರಂದು ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್ ತನ್ನ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ (EUA) ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂಬ ವಿಷಯ ಪ್ರಯೋಗಗಳಿಂದ ತಿಳಿದುಬಂದಿದೆ.

ಭಾರತದ ಜನರಿಗೆ ಹಾಗೂ ವಿಶ್ವದ ಇತರೆ ದೇಶಗಳಿಗೆ ಬಯೋಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ಏಕ ಡೋಸ್ ಕೊರೊನಾ ಲಸಿಕೆ ಪರಿಚಯಿಸಲು ಈ ಅನುಮೋದನೆ ಒಂದು ಪ್ರಮುಖ ಮೈಲುಗಲ್ಲಾಗಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಇಂಡಿಯಾ ವಕ್ತಾರರು ಹೇಳಿದ್ದರು. ಈ ಹೊಸ ಲಸಿಕೆಯನ್ನು ಎರಡೊ ಡೋಸ್​ನಲ್ಲಿ ಪಡೆಯುವ ಅಗತ್ಯವಿಲ್ಲ, ಒಂದು ಡೋಸ್ ತೆಗೆದುಕೊಂಡರೆ ಸಾಕಾಗುತ್ತದೆ. ಇದೇ ಈ ಲಸಿಕೆಯ ವಿಶೇಷತೆಯಾಗಿದೆ.

ಇದನ್ನೂ ಓದಿ: ವಿದೇಶಿ ಲಸಿಕೆಗಳ ಮೇಲೆ ಕೇಂದ್ರಕ್ಕಿಲ್ಲ ಭರವಸೆ; ಆಕ್ಟೋಬರ್ ವೇಳೆಗೆ ಸಿಗಲಿದೆ ಇನ್ನೂ 4 ಕಂಪನಿಗಳಿಂದ ಕೊರೊನಾ ಲಸಿಕೆ

ಭಾರತದಲ್ಲಿ ಬಳಕೆಯಾಗಲಿದೆಯಾ ಜಾನ್ಸನ್​ ಆ್ಯಂಡ್​ ಜಾನ್ಸನ್​ ಲಸಿಕೆ; ಅನುಮೋದನೆಗೆ ಅರ್ಜಿ ಸಲ್ಲಿಸಿದ ಕಂಪನಿ

(Johnson and Johnson’s single dose COVID-19 vaccine is given approval for Emergency use in India)

Follow us on

Related Stories

Most Read Stories

Click on your DTH Provider to Add TV9 Kannada