ವಿದೇಶಿ ಲಸಿಕೆಗಳ ಮೇಲೆ ಕೇಂದ್ರಕ್ಕಿಲ್ಲ ಭರವಸೆ; ಆಕ್ಟೋಬರ್ ವೇಳೆಗೆ ಸಿಗಲಿದೆ ಇನ್ನೂ 4 ಕಂಪನಿಗಳಿಂದ ಕೊರೊನಾ ಲಸಿಕೆ

ಭಾರತದ ಕೊರೊನಾ ಲಸಿಕೆಯ ಬುಟ್ಟಿಗೆ ಆಕ್ಟೋಬರ್ ವೇಳೆಗೆ ಇನ್ನೂ ನಾಲ್ಕು ಕಂಪನಿಗಳ ಲಸಿಕೆಗಳು ಸೇರ್ಪಡೆಯಾಗಲಿವೆ. ಇದೇ ಆಗಸ್ಟ್ ತಿಂಗಳಲ್ಲಿ ದೇಶಕ್ಕೆ 20 ಕೋಟಿ ಡೋಸ್ ಲಸಿಕೆ ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಸೆಪ್ಟೆಂಬರ್ ತಿಂಗಳಿಗೆ 25 ಕೋಟಿ ಡೋಸ್ ಕೊರೊನಾ ಲಸಿಕೆ ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ.

ವಿದೇಶಿ ಲಸಿಕೆಗಳ ಮೇಲೆ ಕೇಂದ್ರಕ್ಕಿಲ್ಲ ಭರವಸೆ; ಆಕ್ಟೋಬರ್ ವೇಳೆಗೆ ಸಿಗಲಿದೆ ಇನ್ನೂ 4 ಕಂಪನಿಗಳಿಂದ ಕೊರೊನಾ ಲಸಿಕೆ
ಕೊರೊನಾ ಲಸಿಕೆ
Follow us
| Updated By: ಸಾಧು ಶ್ರೀನಾಥ್​

Updated on: Aug 06, 2021 | 3:33 PM

ಭಾರತದ ಕೊರೊನಾ ಲಸಿಕೆಯ ಬುಟ್ಟಿಗೆ ಆಕ್ಟೋಬರ್ ವೇಳೆಗೆ ಇನ್ನೂ ನಾಲ್ಕು ಕಂಪನಿಗಳ ಲಸಿಕೆಗಳು ಸೇರ್ಪಡೆಯಾಗಲಿವೆ. ಇದೇ ಆಗಸ್ಟ್ ತಿಂಗಳಲ್ಲಿ ದೇಶಕ್ಕೆ 20 ಕೋಟಿ ಡೋಸ್ ಲಸಿಕೆ ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಸೆಪ್ಟೆಂಬರ್ ತಿಂಗಳಿಗೆ 25 ಕೋಟಿ ಡೋಸ್ ಕೊರೊನಾ ಲಸಿಕೆ ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ.

ಆಕ್ಟೋಬರ್ ಗೆ ಇನ್ನೂ 4 ಕಂಪನಿಗಳ ಲಸಿಕೆ ಲಭ್ಯ ನಿರೀಕ್ಷೆ ಭಾರತದಲ್ಲಿ ಈಗ ಕೊರೊನಾ ಲಸಿಕೆಯ ತೀವ್ರ ಕೊರತೆ ಇದೆ. ಜುಲೈ ತಿಂಗಳಲ್ಲಿ 13 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಆದರೇ, ಈಗ ಆಗಸ್ಟ್ ತಿಂಗಳಿನಲ್ಲಿ ಸುಮಾರು 20 ಕೋಟಿ ಡೋಸ್ ಲಸಿಕೆಯು ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳಿಂದಲೇ 20 ಕೋಟಿ ಡೋಸ್ ಲಸಿಕೆ ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಇನ್ನೂ ಸೆಪ್ಟೆಂಬರ್ ತಿಂಗಳಿನಲ್ಲಿ 25 ಕೋಟಿ ಡೋಸ್ ಲಸಿಕೆಯು ಸಿಗುವ ವಿಶ್ವಾಸ ಕೇಂದ್ರ ಸರ್ಕಾರಕ್ಕೆ ಇದೆ. ಭಾರತದಲ್ಲಿ ಈಗ ಕೊರೊನಾ ಲಸಿಕೆಯ ಅಭಿಯಾನವು ಸಂಪೂರ್ಣವಾಗಿ 2 ಕಂಪನಿಗಳ ಲಸಿಕೆಯ ಪೂರೈಕೆಯಿಂದ ಮಾತ್ರವೇ ನಡೆಯುತ್ತಿದೆ.

ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯ ಲಸಿಕೆಯ ಪೂರೈಕೆಯಿಂದ ಮಾತ್ರವೇ ನಡೆಯುತ್ತಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಗುಡ್ ನ್ಯೂಸ್ ಏನೆಂದರೇ, ಆಕ್ಟೋಬರ್ ವೇಳೆಗೆ ಭಾರತದ ಕೊರೊನಾ ಲಸಿಕೆಯ ಬುಟ್ಟಿಗೆ ಇನ್ನೂ ನಾಲ್ಕು ಕಂಪನಿಗಳ ಲಸಿಕೆಯು ಸೇರ್ಪಡೆಯಾಗಲಿದೆ. ಹೈದರಾಬಾದ್‌ನ ಬಯೋಲಾಜಿಕಲ್ಸ್ ಇ, ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ, ಆಮೆರಿಕಾದ ನೋವಾವ್ಯಾಕ್ಸ್, ಜೆನೋವ್ ಲಸಿಕೆಗಳು ಆಕ್ಟೋಬರ್ ವೇಳೆಗೆ ದೇಶದ ಜನರಿಗೆ ಲಭ್ಯವಾಗುವ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರ ಹಾಕಿದೆ.

ಬಯೋಲಾಜಿಕಲ್ಸ್ ಇ ಕಂಪನಿಯು ಈಗ ತನ್ನ ಕೋರ್ಬ್ ವ್ಯಾಕ್ಸ್ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗ ನಡೆಸುತ್ತಿದೆ. ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ 3ನೇ ಹಂತದ ಪ್ರಯೋಗ ಮುಗಿಸಿದ್ದು, ಜೈ ಕೋವ್ ಡಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಡಿಸಿಜಿಐಗೆ ಅರ್ಜಿ ಸಲ್ಲಿಸಿದೆ. ಜೈಡಸ್ ಕ್ಯಾಡಿಲಾ ಕಂಪನಿಯಿಂದ ಹೆಚ್ಚಿನ ಮಾಹಿತಿಯನ್ನು ವಿಷಯ ತಜ್ಞರ ಸಮಿತಿಯು ಕೇಳಿದೆ.

ಇನ್ನು ಆಮೆರಿಕಾದ ನೋವಾವ್ಯಾಕ್ಸ್ ಕಂಪನಿಯು ಇಂದು(ಆಗಸ್ಟ್ 6ರಂದು) ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಕೋರಿ ಡಿಸಿಜಿಐಗೆ ಅರ್ಜಿ ಸಲ್ಲಿಸಿದೆ. ಜೆನೋವ್ ಲಸಿಕೆಯು ಪ್ರಯೋಗದ ಹಂತದಲ್ಲಿದೆ. ಈ ನಾಲ್ಕು ಕಂಪನಿಗಳ ಪೈಕಿ ಕೆಲ ಕಂಪನಿಗಳು ಈಗಾಗಲೇ ಲಸಿಕೆಯ ರಿಸ್ಕ್ ಉತ್ಪಾದನೆಯನ್ನು ಆರಂಭಿಸಿವೆ. ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಕೂಡ ತನ್ನ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಇಂದು(ಆಗಸ್ಟ್ 6ರಂದು) ಡಿಸಿಜಿಐಗೆ ಅರ್ಜಿ ಸಲ್ಲಿಸಿದೆ.

ಕೇಂದ್ರ ಆರೋಗ್ಯ ಸಚಿವರ ಭೇಟಿಯಾದ ಲಸಿಕಾ ಉತ್ಪಾದಕರು ಇಂದು ಎರಡು ಕೊರೊನಾ ಲಸಿಕಾ ಕಂಪನಿಗಳ ಉತ್ಪಾದಕರು ಕೇಂದ್ರದ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯ ಎಂ.ಡಿ. ಮಹೀಮಾ ಡಾಟ್ಲಾ ಅವರು ದೆಹಲಿಯಲ್ಲಿ ಮನಸುಖ್ ಮಾಂಡವೀಯಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೋರ್ಬ್ ವ್ಯಾಕ್ಸ್ ಲಸಿಕೆಯ ಉತ್ಪಾದನೆಗೆ ಕೇಂದ್ರ ಸರ್ಕಾರವು ಎಲ್ಲ ಸಹಕಾರ, ಬೆಂಬಲ ನೀಡಲಿದೆ ಎಂದು ಸಭೆಯ ಬಳಿಕ ಮನಸುಖ್ ಮಾಂಡವೀಯಾ ಹೇಳಿದ್ದಾರೆ.

ಬಳಿಕ ಮಧ್ಯಾಹ್ನ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಮನಸುಖ್ ಮಾಂಡವೀಯಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯೇ ಈಗ ಭಾರತದ ಲಸಿಕಾ ಅಭಿಯಾನದ ಮುಖ್ಯ ಇಂಜಿನ್. ಕೇಂದ್ರ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಪ್ರತಿ ತಿಂಗಳು ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಿ ಪೂರೈಸುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 25 ಕೋಟಿ ಡೋಸ್ ಲಸಿಕೆಯು ಪೂರೈಕೆಯಾಗಲಿದೆ. ಹೀಗಾದರೇ ನಿತ್ಯ ಸರಾಸರಿ 90 ಲಕ್ಷದಿಂದ 1 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಬಹುದು.ಈ ತಿಂಗಳಿನಿಂದಲೇ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರವು ಭಾರತಕ್ಕೆ ಕೊರೊನಾದ ಮೂರನೇ ಅಲೆ ಬರಲ್ಲ ಎನ್ನುವ ವಿಶ್ವಾಸದಲ್ಲಿದೆ. ಭಾರತದಲ್ಲಿ ಏನಿದ್ದರೂ ನಿತ್ಯ 40 ಸಾವಿರದಿಂದ 50 ಸಾವಿರ ಕೊರೊನಾ ಕೇಸ್ ಪತ್ತೆಯಾಗುತ್ತಾವೆ. ಹೆಚ್ಚೆಂದರೇ, ಗರಿಷ್ಠ 1 ಲಕ್ಷದವರೆಗೂ ಹೊಸ ಕೊರೊನಾ ಕೇಸ್ ನಿತ್ಯ ಪತ್ತೆಯಾಗಬಹುದು. ಒಂದು ವೇಳೆ ಅನಿರೀಕ್ಷಿತವಾಗಿ ಯಾವುದೇ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗದೇ ಇದ್ದರೇ, ಇದಕ್ಕಿಂತ ಹೆಚ್ಚಿನ ಕೇಸ್ ಪತ್ತೆಯಾಗಲ್ಲ ಎನ್ನುವ ವಿಶ್ವಾಸ ಕೇಂದ್ರ ಸರ್ಕಾರಕ್ಕಿದೆ.

ವಿದೇಶಿ ಲಸಿಕೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಭರವಸೆ ಇಲ್ಲ! ಕೇಂದ್ರ ಸರ್ಕಾರ ಈಗ ವಿದೇಶಿ ಕೊರೊನಾ ಲಸಿಕೆಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿಲ್ಲ. ಫೈಜರ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ತಮ್ಮ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಕೋರ್ಟ್ ಕೇಸ್ ನಿಂದ ರಕ್ಷಣೆ ಕೇಳುತ್ತಿವೆ. ಜೊತೆಗೆ ಇನ್ನೂ ಕೆಲ ಗ್ಯಾರಂಟಿಗಳನ್ನು ಕೇಳುತ್ತಿವೆ. ಕೇಂದ್ರ ಸರ್ಕಾರವು ಈ ಹಿಂದೆ ಕೋರ್ಟ್ ಕೇಸ್ ನಿಂದ ರಕ್ಷಣೆ ನೀಡಲು ಸಿದ್ದವಾಗಿತ್ತು. ಆದರೇ, ವಿದೇಶಿ ಲಸಿಕಾ ಕಂಪನಿಗಳ ಬೇಡಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ಲಸಿಕೆಗಳ ಮೇಲೆ ಈಗ ಹೆಚ್ಚಿನ ಭರವಸೆ, ನಿರೀಕ್ಷೆ ಇಟ್ಟುಕೊಂಡಿಲ್ಲ. ಜೊತೆಗೆ ಈ ವಿದೇಶಿ ಲಸಿಕಾ ಕಂಪನಿಗಳ ಬಳಿ ಭಾರತಕ್ಕೆ ಲಸಿಕೆ ಪೂರೈಸಲು ಲಸಿಕೆಯ ದಾಸ್ತಾನು ಕೂಡ ಇಲ್ಲ.

ಫೈಜರ್, ಮಾಡೆರ್ನಾ ಕಂಪನಿಯ ಲಸಿಕೆಗಳನ್ನು ಬೇರೆ ಬೇರೆ ದೇಶಗಳು ಈಗಾಗಲೇ ಬುಕ್ ಮಾಡಿಕೊಂಡಿವೆ. ಜೊತೆಗೆ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಅನುಭವದಿಂದ ಭಾರತಕ್ಕೆ ನಿರಾಶೆಯಾಗಿದೆ. ಸ್ಪುಟ್ನಿಕ್ ಲಸಿಕೆಯ ಮೊದಲ ಡೋಸ್ ಬೇರೆ. ಎರಡನೇ ಡೋಸ್ ಅನ್ನು ಬೇರೆ ವಯಲ್ ನಿಂದ ನೀಡಬೇಕು. ಮೊದಲ ಡೋಸ್ ಮತ್ತು 2ನೇ ಡೋಸ್ ಅನ್ನು ಪ್ರತೇಕವಾಗಿ ಉತ್ಪಾದನೆ ಮಾಡಬೇಕು. ಸ್ಪುಟ್ನಿಕ್ ಲಸಿಕೆಯ 2ನೇ ಡೋಸ್ ಲಸಿಕೆಯು ಹೆಚ್ಚು ಉತ್ಪಾದನೆಯಾಗಿಲ್ಲ. ಹೀಗಾಗಿ ವಿದೇಶಿ ಲಸಿಕೆಗಳ ಬಗ್ಗೆ ಈಗ ಕೇಂದ್ರ ಸರ್ಕಾರ ವಿಶ್ವಾಸ, ಭರವಸೆ ಇಟ್ಟುಕೊಂಡಿಲ್ಲ.

ಈಗ ದೇಶದಲ್ಲಿ 49.5 ಕೋಟಿ ಡೋಸ್ ಲಸಿಕೆಯನ್ನ ಜನರಿಗೆ ನೀಡಲಾಗಿದೆ. ಇನ್ನೂ 3 ಕೋಟಿ ಡೋಸ್ ಲಸಿಕೆಯು ರಾಜ್ಯಗಳ ಬಳಿ ದಾಸ್ತಾನು ಇದೆ. ಲಸಿಕಾ ಕಂಪನಿಗಳು ಖಾಸಗಿ ವಲಯಕ್ಕೆ ಖರೀದಿಸುವಷ್ಟು ಲಸಿಕೆಯನ್ನು ಮಾತ್ರ ನೀಡಬೇಕು. ಉಳಿದ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಬೇಕು. ಶೇ.25 ರಷ್ಟುನ್ನು ಖಾಸಗಿ ವಲಯಕ್ಕೆ ಪೂರೈಸಬೇಕು ಎಂಬುದು ಈಗ ಕಡ್ಡಾಯವಲ್ಲ. ಏಕೆಂದರೇ, ಖಾಸಗಿ ಆಸ್ಪತ್ರೆಗಳು ತಮಗೆ ನಿಗದಿಪಡಿಸಿದ್ದಷ್ಟು ಲಸಿಕೆಯನ್ನು ಖರೀದಿಸಿಲ್ಲ.

ಖಾಸಗಿ ವಲಯದಿಂದ 3 ತಿಂಗಳಲ್ಲಿ 3.5 ಕೋಟಿ ಡೋಸ್ ಮಾತ್ರ ಖರೀದಿ ದೇಶದ ಖಾಸಗಿ ಆಸ್ಪತ್ರೆಗಳು ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ 3.5 ಕೋಟಿ ಡೋಸ್ ಲಸಿಕೆಯನ್ನು ಮಾತ್ರ ಖರೀದಿಸಿವೆ. ಈ ಮೂರು ತಿಂಗಳ ಅವಧಿಯಲ್ಲೇ ಕೇಂದ್ರ-ರಾಜ್ಯ ಸರ್ಕಾರಗಳು 30 ಕೋಟಿ ಡೋಸ್ ಲಸಿಕೆಯನ್ನು ಖರೀದಿಸಿವೆ. ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದನೆಯಾದ ಲಸಿಕೆಯ ಪೈಕಿ ಶೇ.25 ರಷ್ಟು ಲಸಿಕೆಯನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಆದರೇ, ಖಾಸಗಿ ಆಸ್ಪತ್ರೆಗಳು ಶೇ.10 ರಷ್ಟು ಲಸಿಕೆಯನ್ನು ಮಾತ್ರ ಖರೀದಿಸಿವೆ.

ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಪೂರೈಸಬೇಕೆಂಬ ನಿಯಮ ಕೈ ಬಿಡಲು ಕೇಂದ್ರ ನಿರ್ಧರಿಸಿದೆ. ಬಿಹಾರದ ಯಾವುದೇ ಖಾಸಗಿ ಆಸ್ಪತ್ರೆಯ ಒಂದೇ ಒಂದು ಡೋಸ್ ಲಸಿಕೆಯನ್ನ ಕಳೆದ 3 ತಿಂಗಳ ಅವಧಿಯಲ್ಲಿ ಖರೀದಿಸಿಲ್ಲ. ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಗಳು 11 ಲಕ್ಷ ಡೋಸ್ ಲಸಿಕೆಯನ್ನು ಮಾತ್ರ ಖರೀದಿಸಿವೆ. ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳು 1.04 ಕೋಟಿ ಡೋಸ್ ಲಸಿಕೆಯನ್ನು ಖರೀದಿಸಿವೆ. ಕೇಂದ್ರ ಸರ್ಕಾರ ಈಗ 2ನೇ ಡೋಸ್ ಲಸಿಕೆಯನ್ನು ಜನರಿಗೆ ನೀಡಲು ಆದ್ಯತೆ ನೀಡಿದೆ. ಈ ಬಗ್ಗೆ ಪಾರ್ಲಿಮೆಂಟ್ ಗೆ ಉತ್ತರ ನೀಡಿದೆ. (India to get another 4 new corona vaccine by october 2021)

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು