ಸುಷ್ಮಾ ಸ್ವರಾಜ್ ಪುಣ್ಯ ಸ್ಮರಣೆ: ಜನನಾಯಕಿಯ ಬದುಕಿನ ಆಸಕ್ತಿಕರ ಸಂಗತಿಗಳು ಇಲ್ಲಿವೆ

Sushma Swaraj Death Anniversary: "ನಾನು ಸಂಸತ್ ಸದಸ್ಯೆಯಾಗಿ ಸಂಸತ್ ನಲ್ಲಿ ಕುಳಿತುಕೊಂಡರೆ ನಾನು ಅವರನ್ನು ಗೌರವಾನ್ವಿತ ಪ್ರಧಾನಿ ಎಂದು ಸಂಬೋಧಿಸಬೇಕಾಗುತ್ತದೆ. ಅದು ನನಗೆ ಸರಿ ಅನಿಸುವುದಿಲ್ಲ. ಸೋನಿಯಾ ಗಾಂಧಿ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಂಡು ಬಿಳಿ ಸೀರೆ ಉಡುವೆ ಎಂದಿದ್ದರು ಸುಷ್ಮಾ ಸ್ವರಾಜ್.

ಸುಷ್ಮಾ ಸ್ವರಾಜ್ ಪುಣ್ಯ ಸ್ಮರಣೆ: ಜನನಾಯಕಿಯ ಬದುಕಿನ ಆಸಕ್ತಿಕರ ಸಂಗತಿಗಳು ಇಲ್ಲಿವೆ
ಸುಷ್ಮಾ ಸ್ವರಾಜ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 06, 2021 | 4:09 PM

ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಎರಡನೇ ವರ್ಷ ಪುಣ್ಯ ತಿಥಿ ಇಂದು. ಹಣೆಯಲ್ಲಿ ದೊಡ್ಡ  ಕುಂಕುಮದ ಬೊಟ್ಟು, ಅಂದವಾಗಿ ಸೀರೆಯುಟ್ಟು ಗಂಭೀರ ನಡೆ, ತನ್ನ ಭಾಷಣದಿಂದ ಎದುರಾಳಿಗಳನ್ನೂ ಸಂಮೋಹನಗೊಳಿಸುತ್ತಿದ್ದ ರಾಜಕಾರಣಿ ಸುಷ್ಮಾ ಸ್ವರಾಜ್. ತನ್ನ 25 ನೇ ವಯಸ್ಸಿನಲ್ಲಿ ಭಾರತದ  ಕ್ಯಾಬಿನೆಟ್ ಸಚಿವ ಸ್ಥಾನಕ್ಕೇರಿದವರು. 14 ಫೆಬ್ರವರಿ 1952 ರಂದು ಹರಿಯಾಣದ ಅಂಬಾಲಾದಲ್ಲಿ ಜನಿಸಿದ ಸುಷ್ಮಾ 2019 ಆಗಸ್ಟ್ 6 ರಂದು ನಿಧನರಾದರು.  ಸುಷ್ಮಾ  ಸ್ವರಾಜ್ ಬದುಕಿನ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ. ದೇಶದ ನಾಗರಿಕರನ್ನು ಕಾಪಾಡಿದ ವಿದೇಶಾಂಗ ಸಚಿವೆ ಸುಷ್ಮಾ ಅವರನ್ನು ಭಾರತದ ವಿದೇಶಾಂಗ ಸಚಿವರನ್ನಾಗಿ ಮಾಡಿದ ಸಮಯ ಇದು. 2015 ರಲ್ಲಿ, ಯೆಮೆನ್‌ನಲ್ಲಿ ಯುದ್ಧದಂತಹ ಪರಿಸ್ಥಿತಿ ಉಂಟಾದಾಗ ಮತ್ತು ಯೆಮೆನ್ ಸರ್ಕಾರ ಮತ್ತು ಬಂಡುಕೋರರ ನಡುವೆ ಯುದ್ಧ ಪ್ರಾರಂಭವಾಯಿತು. ಸಾವಿರಾರು ಭಾರತೀಯರು ಆ ಪರಿಸ್ಥಿತಿಗಳಲ್ಲಿ ಬದುಕು ಮತ್ತು ಸಾವಿನ ನಡುವೆ ಸಿಲುಕಿಕೊಂಡರು. ಅಲ್ಲಿ ಸಿಕ್ಕಿಬಿದ್ದ ಭಾರತೀಯರು ಭಾರತ ಸರ್ಕಾರದ ಸಹಾಯವನ್ನು ಕೋರಿದರು. ಇಂತಹ ಪರಿಸ್ಥಿತಿಯಲ್ಲಿ ಸುಷ್ಮಾ ತಕ್ಷಣ ಸಕ್ರಿಯರಾಗಿದ್ದು ಜನರನ್ನು ರಕ್ಷಿಸಲು ಹಗಲಿರುಳು ಕೆಲಸ ಮಾಡಿದರ.. ಅದೇ ರಾತ್ರಿ ಯೋಜನೆ ಸಿದ್ಧವಾಯಿತ. ಅದೇ ಆಪರೇಷನ್ ‘ರಾಹತ್’. ಸುಷ್ಮಾ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರನ್ನು ಯೆಮೆನ್‌ಗೆ ಕಳುಹಿಸಿದರು. ಭಾರತೀಯ ವಾಯುಪಡೆಯ ವಿಮಾನಗಳು ಆ ದೇಶದ ಭೂಮಿಗೆ ಕಾಲಿಟ್ಟವು ಮತ್ತು ತಮ್ಮ 4640 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು. ಇದಲ್ಲದೇ, 48 ದೇಶಗಳ ಎರಡು ಸಾವಿರ ನಾಗರಿಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದರು, ಅವರನ್ನು ಭಾರತೀಯ ವಾಯುಪಡೆಯ ಸಹಾಯದಿಂದ ಏರ್ ಲಿಫ್ಟ್ ಮಾಡಲಾಯಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾಡಿದ ರಕ್ಷಣಾ ಕಾರ್ಯಾಚರಣೆಯನ್ನು ವಿಶ್ವದಾದ್ಯಂತ ಸ್ಮರಿಸಲಾಗುತ್ತಿದೆ.

ಮೇರಾ ಮೇಡಂ ಮಹಾನ್ ಮುಂಬೈ ನಿವಾಸಿ ಹಮೀದ್ ಅನ್ಸಾರಿ ಎಂಬಾತ ಆನ್​​ಲೈನ್ ಸ್ನೇಹಿತೆಯನ್ನು ಭೇಟಿ ಮಾಡಲು 2012 ರಲ್ಲಿ ಅಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ಆತನನ್ನು ವೀಸಾ ಇಲ್ಲ ಎಂಬ ಕಾರಣದಿಂದ ಬಂಧಿಸಲಾಯಿತು. ಮೂರು ವರ್ಷ ಜೈಲು ಶಿಕ್ಷೆಅನುಭವಿಸಿದರೂ ಆತನನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ವಿಷಯವನ್ನು ಅನ್ಸಾರಿ ಕುಟುಂಬ  ಸುಷ್ಮಾ ಅವರ ಗಮನಕ್ಕೆ ತಂದ ಕೂಡಲೇ ಸುಷ್ಮಾ ಕಾರ್ಯ ಪ್ರವೃತ್ತರಾಗರು. 18 ಡಿಸೆಂಬರ್ 2018 ರಂದು ಅನ್ಸಾರಿ ಬಂಧಮುಕ್ತನಾದ. ಹಮೀದ್ ನ ಪೋಷಕರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸುಷ್ಮಾ ಅವರನ್ನು ಭೇಟಿ ಮಾಡಲು ಬಂದಾದ ಅವರ ತಾಯಿ ‘ಮೇರಾ ಮೇಡಂ ಮಹಾನ್’ ಎಂದಿದ್ದರು.

ಪಾಕ್​​ನಿಂದ ಗೀತಾಳನ್ನು ಅಮ್ಮನ ಮಡಿಲಿಗೆ ಸೇರಿಸಿದ ಸುಷ್ಮಾ ಗೀತಾ ಎಂಬ ಹುಡುಗಿ ಅಡ್ಡಾಡುತ್ತಾ ಪಾಕಿಸ್ತಾನದ ಗಡಿಗೆ ಹೋಗಿಬಿಟ್ಟಿದ್ದಳು. ಆಕೆಗೆ ಕಿವಿ ಕೇಳಿಸುವುದಿಲ್ಲ,ಮಾತು ಬರುವುದಿಲ್ಲ. ಗಡಿದಾಟಿ ಬಂದ ಬಾಲಕಿಯನ್ನು ಅಲ್ಲಿನ ಇಡಿ ಫೌಂಡೇಶನ್‌ಗೆ ಕರೆದೊಯ್ಯಲಾಯಿತು. ಪಾಕಿಸ್ತಾನದಿಂದ ಗೀತಾ ಸುದ್ದಿ ಬಂದಾಗ, ವಿದೇಶಾಂಗ ಸಚಿವರಾಗಿದ್ದಾಗ ಸುಷ್ಮಾ ಸ್ವರಾಜ್ ಅವರು ನನ್ನ ಮಗಳು ಮತ್ತು ನಾನು ಆಕೆಯನ್ನು ಭಾರತಕ್ಕೆ ಕರೆತಂದು ಆಕೆಯ ಪೋಷಕರ ಮಡಿಲಿಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದರು . ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಗೀತಾ ಭಾರತಕ್ಕೆ ಬಂದರು. ಆಕೆಯ ತಾಯಿಯನ್ನು ಪತ್ತೆಹಚ್ಚಿ ಮಗಳನ್ನು ಆಕೆಯ ಮಡಿಲಿಗೆ ಒಪ್ಪಿಸಿದ ಕೀರ್ತಿ ಸುಷ್ಮಾ ಅವರಿಗೆ ಸಲ್ಲುತ್ತದೆ.

ಸುಷ್ಮಾ ಸ್ವರಾಜ್

ತಲೆ ಬೋಳಿಸಿಕೊಂಡು ಬಿಳಿ ಸೀರೆ ಉಡುತ್ತೇನೆ ಎಂದಿದ್ದರು ಅದು ಚುನಾವಣೆ ಸಮಯ, ಕಾಂಗ್ರೆಸ್ ನೇತೃತ್ವದ ಯುಪಿಎ ಬಿಜೆಪಿಯ ಎನ್​​ಡಿಎ ಮೈತ್ರಿಕೂಟವನ್ನು ಸೋಲಿಸಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸರ್ಕಾರದ ನೇತೃತ್ವ ವಹಿಸಲಿದ್ದರು.  ಸೋನಿಯಾ ಪ್ರಧಾನಿಯಾಗಲು ಬಿಡುವುದಿಲ್ಲ ಎಂದು ಬಿಜೆಪಿ ಹಠ ಹಿಡಿದಿತ್ತು. ಎಲ್ಲೆಡೆ ಪ್ರತಿಭಟನೆ ಗಳು ನಡೆಯುತ್ತಿದ್ದವು, ವಿದೇಶಿ ಮಹಿಳೆ ಪ್ರಧಾನಿಯಾಗುವುದು ಬೇಡ ಎಂಬಕೂಗು ಎದ್ದಿತ್ತು. ಈ ಹೊತ್ತಲ್ಲಿ ಸುಷ್ಮಾ ಸ್ವರಾಜ್ ಅವರು “ನಾನು ಸಂಸತ್ ಸದಸ್ಯೆಯಾಗಿ ಸಂಸತ್ ನಲ್ಲಿ ಕುಳಿತುಕೊಂಡರೆ ನಾನು ಅವರನ್ನು ಗೌರವಾನ್ವಿತ ಪ್ರಧಾನಿ ಎಂದು ಸಂಬೋಧಿಸಬೇಕಾಗುತ್ತದೆ. ಅದು ನನಗೆ ಸರಿ ಅನಿಸುವುದಿಲ್ಲ. ಸೋನಿಯಾ ಗಾಂಧಿ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಂಡು ಬಿಳಿ ಸೀರೆಯನ್ನು ಧರಿಸಿ, ಸನ್ಯಾಸಿನಿಯಂತೆ ನೆಲದ ಮೇಲೆ ಮಲಗುತ್ತೇನೆ ಮತ್ತು ಒಣ ಕಡಲೆ ತಿನ್ನುವುದರಿಂದ ಜೀವನ ಮಾಡುತ್ತೇನೆ ಎಂದು ಸುಷ್ಮಾ ಹೇಳಿದ್ದರು.

ಚುನಾವಣೆಗಾಗಿ ಕನ್ನಡ ಕಲಿತರು ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾತನಾಡುವ ರಾಜಕಾರಣಿಗೆ ಸ್ಥಳೀಯ ಜನರೊಂದಿಗೆ ವ್ಯವಹರಿಸಲು ಕಷ್ಟವಾಗುತ್ತಿತ್ತು .ಆಗ ಸುಷ್ಮಾ ಕನ್ನಡ ಭಾಷೆಯನ್ನು ಕಲಿತರು. ಕಾಂಗ್ರೆಸ್ ಭದ್ರಕೋಟೆಯಲ್ಲಿ ಸೋನಿಯಾ ಗಾಂಧಿಯವರ ಗೆಲುವು ಖಚಿತವಾಗಿತ್ತು. ಆದರೆ, ಸುಷ್ಮಾ ಕೇವಲ 30 ದಿನಗಳಲ್ಲಿ ಕನ್ನಡ ಭಾಷೆಯನ್ನು ಕಲಿತರು. ಈ ಮಧ್ಯೆ, ಅವರು ಚುನಾವಣಾ ಪ್ರಚಾರದಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಮಾಡಲು ಆರಂಭಿಸಿದರು. ಸ್ವರಾಜ್ ಅವರು ಸೋನಿಯಾ ವಿರುದ್ಧ ವಿದೇಶಿ ಮೂಲದ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ವಿದೇಶಿ ಬಹು ಔರ್ ದೇಸಿ ಭೇಟಿ’ ಘೋಷಣೆಯನ್ನು ನೀಡಿದರು. ಆದರೆ, ಸುಷ್ಮಾ ಅವರು 56 ಸಾವಿರಕ್ಕೂ ಹೆಚ್ಚು ಮತಗಳಿಂದ ಚುನಾವಣೆಯಲ್ಲಿ ಪರಾಭವಗೊಂಡರು.

ಪತಿ ಸ್ವರಾಜ್ ಕೌಶಲ್ ಜತೆ ಸುಷ್ಮಾ

ಹರಿಯಾಣದ ಹುಡುಗಿಯ ಪ್ರೇಮ ವಿವಾಹ 1975 ರಲ್ಲಿ ಹರಿಯಾಣದಂತಹ ರಾಜ್ಯದಲ್ಲಿ ಪ್ರೇಮ ವಿವಾಹದಂತಹ ಹೆಜ್ಜೆ ಇಡುವ ಬಗ್ಗೆ ಯೋಚಿಸುವುದು ಕೂಡ ಕಷ್ಟವಾಗಿತ್ತು. ಆ ಸಮಯದಲ್ಲಿ ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಓದುತ್ತಿದ್ದಾಗ ಸುಷ್ಮಾ ಮತ್ತು ಸ್ವರಾಜ್ ಕೌಶಲ್ ಮೊದಲು ಭೇಟಿಯಾದರು. ಚಂಡೀಗಢದಲ್ಲಿ ಒಟ್ಟಿಗೆ ಓದುತ್ತಿದ್ದಾಗ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅವರು 13 ಜುಲೈ 1975 ರಂದು ವಿವಾಹವಾದರು. ಅವರು ಎರಡೂ ಕುಟುಂಬಗಳನ್ನು,ವಿಶೇಷವಾಗಿ ಹರಿಯಾಣದ ಸುಷ್ಮಾ ಸ್ವರಾಜ್ ಕುಟುಂಬದಲ್ಲಿ ಮನವೊಲಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಯಿತು ಎಂದು ಹೇಳಲಾಗಿದೆ. ಮದುವೆ ನಂತರ ಸ್ವರಾಜ್ ಕೌಶಲ್ ರಾಜಕಾರಣಿ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದರು. ಆರು ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿದ್ದ ಅವರು ಅವರು ಮಿಜೋರಾಂ ರಾಜ್ಯಪಾಲರಾಗಿದ್ದರು.

ಇದನ್ನೂ ಓದಿ:  ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ

(Remembering Indian politician BJP leader Sushma Swaraj on her death anniversary)

Published On - 4:08 pm, Fri, 6 August 21