ಮೂರನೇ ಅಲೆ ಭೀತಿ: ಕೋವಿಡ್ ಲಸಿಕೆ ಅಭಾವ ನೀಗಿಸಲು ಕೇಂದ್ರ ಸರ್ಕಾರದ ಭಗೀರಥ ಪ್ರಯತ್ನ
ದೇಶದಲ್ಲಿ ಈಗಾಗಲೇ ಮೂರನೇ ಅಲೆಯ ಭೀತಿ ಆರಂಭವಾಗಿರುವುದರಿಂದ ಅದಷ್ಟು ಬೇಗ ಎಲ್ಲ ಅರ್ಹ ಭಾರತೀಯರಿಗೆ ಲಸಿಕೆ ಸಿಗುವಂಥ ಏರ್ಪಾಟು ಸರ್ಕಾರ ಮಾಡುತ್ತಿದೆ. ಆಗಸ್ಟ್ನಿಂದ ಡಿಸೆಂಬರ್ವರೆಗೆ ತಡೆರಹಿತವಾಗಿ ಎಲ್ಲ ರಾಜ್ಯಗಳಿಗೆ ಲಸಿಕೆ ಸಿಗುವಂಥ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ.
ಭಾರತದ 135 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವುದು ಸಾಮಾನ್ಯ ಕೆಲಸವಲ್ಲ. ಲಸಿಕಾ ಅಭಿಯಾನ ಶುರುವಾಗಿ 6 ತಿಂಗಳು ಕಳೆದರೂ ಹಲವಾರು ರಾಜ್ಯಗಳು ಅದರ ಕೊರತೆಯನ್ನು ನಿರಂತರವಾಗಿ ಅನುಭವಿಸುತ್ತಿವೆ. ಇದುವರೆಗೆ ಕೇವಲ ಕೋವಿಶೀಲ್ಡ್ ಮಾತ್ರ ರಾಜ್ಯಗಳಿಗೆ ಲಭ್ಯವಿತ್ತು ಈಗ ಕೊವ್ಯಾಕ್ಸಿನ್ ಸಹ ಜೊತೆಗೂಡಿರುವುದರಿಂದ ಅಭಾವದ ಸಮಸ್ಯೆ ಎದುರಾಗದು ಅಂತ ಕೇಂದ್ರ ಸರ್ಕಾರ ಹೇಳುತ್ತಿದೆ. ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲಿ 25.65 ಕೋಟಿ ಡೋಸ್ ಕೊವಾಕ್ಸಿನ್ ಲಸಿಕೆ ಲಭ್ಯವಾಗಲಿದೆಯೆಂದು ಸರ್ಕಾರ ತಿಳಿಸಿದೆ. ಹಾಗೆಯೇ ಈ ಲಸಿಕೆಯನ್ನು ಉತ್ಪಾದಿಸುವ ಸಂಸ್ಥೆಯು 26.15 ಕೋಟಿ ಡೋಸ್ಗಳನ್ನು ಸೆಪ್ಟೆಂಬರ್ ತಿಂಗಳು ಪೂರೈಸಲಿದೆ.
ದೇಶದಲ್ಲಿ ಈಗಾಗಲೇ ಮೂರನೇ ಅಲೆಯ ಭೀತಿ ಆರಂಭವಾಗಿರುವುದರಿಂದ ಅದಷ್ಟು ಬೇಗ ಎಲ್ಲ ಅರ್ಹ ಭಾರತೀಯರಿಗೆ ಲಸಿಕೆ ಸಿಗುವಂಥ ಏರ್ಪಾಟು ಸರ್ಕಾರ ಮಾಡುತ್ತಿದೆ. ಆಗಸ್ಟ್ನಿಂದ ಡಿಸೆಂಬರ್ವರೆಗೆ ತಡೆರಹಿತವಾಗಿ ಎಲ್ಲ ರಾಜ್ಯಗಳಿಗೆ ಲಸಿಕೆ ಸಿಗುವಂಥ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಹೆಚ್ಚು ಪ್ರಮಾಣದಲ್ಲಿ ಲಸಿಕಗಳನ್ನು ಪೂರೈಸುವಂತೆ ಅದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ ಮತ್ತು ಭರತ್ ಬಯೋಟೆಕ್ ಸಂಸ್ಥೆಗಳಿಗೆ ತಾಕೀತು ಮಾಡಿದೆ.
ಮೂಲಗಳ ಪ್ರಕಾರ ಆಗಸ್ಟ್ನಿಂದ ಡಿಸೆಂಬರ್ವರಗೆ ಪ್ರತಿ ತಿಂಗಳು 25 ಕೋಟಿ ಕೋವಿಶೀಲ್ಡ್ ಲಸಿಕೆ ಡೋಸ್ಗಳು ಲಭ್ಯವಾಗಲಿವೆ. ಅಂದರೆ ವರ್ಷಾಂತ್ಯದವರೆಗೆ ಒಟ್ಟು 136.55 ಕೋಟಿ ಡೋಸ್ಗಳು ಲಭ್ಯವಾಗಲಿದ್ದು ಅಲ್ಲಿಗೆ 201.91 ಕೋಟಿ ಡೋಸ್ ಲಸಿಕೆಯನ್ನು ಈ ಎರಡು ಸಂಸ್ಥೆಗಳು ಪ್ರಸಕ್ತ ವರ್ಷ ಪೂರೈಸಿದಂತಾಗುತ್ತದೆ.
ಸರ್ಕಾರವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ, ಪುಣೆಗೆ ಇದುವರೆಗೆ ರೂ. 8071.87 ಕೋಟಿಗಳನ್ನು ಪಾವತಿಸಿದೆ ಮತ್ತು ಹೈದರಾಬಾದಿನ ಭರತ್ ಬಯೋಟೆಕ್ ಸಂಸ್ಥೆಗೆ ಈ ವರ್ಷ ರೂ. 6433.87 ಕೋಟಿ ಪಾವತಿಸಿದೆ.
ಇದನ್ನೂ ಓದಿ: ‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್ಗೆ ಯಾಮಾರಿಸಿದ್ದ ರಾಜ್ ಕುಂದ್ರಾ