ಪಿಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಪ್ರಧಾನಿ ಮೋದಿ ಸೋಮವಾರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ
ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಅಗುವುದೇನೋ ಸರಿ, ಅದರೆ, ಫಲಾನುಭವಿಗಳಾಗ ಬಯಸುವ ರೈತರು pmkisan.gov.org ವೆಬ್ ಸೈಟ್ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಬ್ಯಾಂಕ್ ಖಾತೆ ನಂಬರ್ ಹಾಗೂ ಇನ್ನಿತರ ವಿವರಗಳನ್ನು ಪೂರೈಸಬೇಕು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸೋಮವಾರ ಅಂದರೆ ಆಗಸ್ಟ್ 9 ರಂದು ಆರ್ಥಿಕವಾಗಿ ಸಬಲರಲ್ಲದ ಕೋಟ್ಯಾಂತರ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂಪಾಯಿ ಜಮೆಯಾಗಲಿದೆ. ಕೇಂದ್ರ ಸರ್ಕಾರ ಬಡ ರೈತರಿಗೆ ಬಿಡುಗಡೆ ಮಾಡುತ್ತಿರುವ 9 ನೇ ಕಂತು ಇದಾಗಿದೆ. ಈ ಯೋಜನೆ ಅಡಿಯಲ್ಲಿ ರೈತರು ಕೇಂದ್ರದಿಂದ ಪ್ರತಿವರ್ಷ 6,000 ರೂಪಾಯಿಗಳ ಹಣಕಾಸಿನ ನೆರವು ಪಡೆಯುತ್ತಾರೆ.
ಮೇಲೆ ಹೇಳಿದಂತೆ ಇದು ದೇಶದ ಎಲ್ಲ ಅನ್ನದಾತರಿಗೆ ಸಿಗುವ ನೆರವಲ್ಲ. ಎರಡು ಎಕೆರೆಗಳಿಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗುವುದು ಸಾಧ್ಯ. ಅಧಿಕೃತ ಮೂಲಗಳ ಪ್ರಕಾರ ಸುಮಾರು 12.11 ಕೋಟಿ ರೈತರು ಆರ್ಥಿಕ ನೆರವು ಪಡೆಯಲಿದ್ದಾರೆ.
ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಅಗುವುದೇನೋ ಸರಿ, ಅದರೆ, ಫಲಾನುಭವಿಗಳಾಗ ಬಯಸುವ ರೈತರು pmkisan.gov.org ವೆಬ್ ಸೈಟ್ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಬ್ಯಾಂಕ್ ಖಾತೆ ನಂಬರ್ ಹಾಗೂ ಇನ್ನಿತರ ವಿವರಗಳನ್ನು ಪೂರೈಸಬೇಕು.
ಆಗಸ್ಟ್ 9 ರಂದದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ರೈತರ ಬ್ಯಾಂಕ್ ಅಕೌಂಟ್ಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ಡೆಸ್ಕ್ಟಾಪ್ನಲ್ಲಿ ವಿಡಿಯೋ ಕರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ