ಪ್ರೀತಮ್ ಗೌಡ ತಮ್ಮ ಉತ್ಸಾಹೀ ಯುವ ಮಿತ್ರ, ಸಚಿವ ಸ್ಥಾನ ಸಿಗದಿರುವುದಕ್ಕೆ ಅವರಲ್ಲಿ ಕೋಪವೇನೂ ಇಲ್ಲ ಎಂದ ಮುಖ್ಯಮಂತ್ರಿ ಬೊಮ್ಮಾಯಿ
ಶನಿವಾರದಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿಗಳು, ಮಂತ್ರಿ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಮತ್ತು ಮುಖ್ಯಮಂತ್ರಿಯಾದ ನಂತರ ಅವರು ಜೆಡಿಎಸ್ ಮಹಾನಾಯಕ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿರುವುದಕ್ಕೆ ಕೆಂಡ ಕಾರಿರುವ ಹಾಸನದ ಶಾಸಕ ಪ್ರೀತಮ್ ಗೌಡ ಅವರ ಬಗ್ಗೆ ಮಾತಾಡಿದರು.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಯಾಗಿ ಮೂರು ದಿನ ಸಹ ಆಗಿಲ್ಲ. ಅದರೆ ಆಗಲೇ ಬಿಜೆಪಿ ಶಾಸಕರು ಮತ್ತು ಮಂತ್ರಿಗಳಾಗಿರುವವರು ಸಹ ಅಪಸ್ವರ ಎತ್ತಿದ್ದಾರೆ. ಖಾತೆಗಳ ಹಂಚಿಕೆ ನಂತರ ನಾಯಕರ ಅಸಮಾಧಾನ ಹೆಚ್ಚಾಗಿದೆ. ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್ ಅವರು ತಾನು ಅಪೇಕ್ಷಿಸಿದ ಮತ್ತು ಮನವಿ ಮಾಡಿಕೊಂಡಿದ್ದ ಖಾತೆ ಸಿಕ್ಕಿಲ್ಲ ಅಂತ ಕ್ಯಾತೆ ತೆಗೆದಿದ್ದಾರೆ. ಅವರು ಇಷ್ಟರಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಾನು ಕೇಳಿದ ಖಾತೆ ಕೊಡಿ ಅಂತ ಕೇಳಲಿದ್ದಾರೆ. ತಮ್ಮ ಬೇಡಿಕೆಗೆ ಮನ್ನಣೆ ಸಿಗದ್ದಿದ್ದರೆ ಪಕ್ಷಕ್ಕೆ ಹಿತವೆನಿಸಿದ ನಿರ್ಧಾರ ತೆಗೆದುಕೊಳ್ಳುವ ಸುಳಿವನ್ನು ಅವರು ನೀಡಿದ್ದಾರೆ ಮುಖ್ಯಮಂತ್ರಿಗಳು ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಶನಿವಾರದಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿಗಳು, ಮಂತ್ರಿ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಮತ್ತು ಮುಖ್ಯಮಂತ್ರಿಯಾದ ನಂತರ ಅವರು ಜೆಡಿಎಸ್ ಮಹಾನಾಯಕ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿರುವುದಕ್ಕೆ ಕೆಂಡ ಕಾರಿರುವ ಹಾಸನದ ಶಾಸಕ ಪ್ರೀತಮ್ ಗೌಡ ಅವರ ಬಗ್ಗೆ ಮಾತಾಡಿದರು. ಪ್ರೀತಮ್ ತಮ್ಮ ಉತ್ಸಾಹೀ ಯುವ ಸ್ನೇಹಿತ ಎಂದು ಹೇಳಿದ ಬೊಮ್ಮಾಯಿ ಅವರು ಅವರಿಗೆ ಮಂತ್ರಿ ಸ್ಥಾನ ಸಿಗದ ಕಾರಣ ಹಾಸನದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವೇನೂ ಇಲ್ಲ ಎಂದು ಹೇಳಿದರು.
ಪಕ್ಷದ ಎಲ್ಲ ಕಾರ್ಯಕರ್ತರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ನಡೆಸಿಕೊಂಡು ಹೋಗುವ ಮಾತನ್ನು ಮುಖ್ಯಮಂತ್ರಿಗಳು ಹೇಳಿದರು.
ಇದನ್ನೂ ಓದಿ: ಪ್ರೀತಿಗೆ ಒಪ್ಪದ ಅಮ್ಮನ ಹತ್ಯೆ ಮಾಡಿದ ಬಾಲಕಿ; ವಿಡಿಯೋ ಕಾಲ್ನಲ್ಲೇ ಕೊಲೆ ಮಾಡುವುದನ್ನು ಕಲಿಸಿದ ಪ್ರಿಯತಮ