ಅಮೇರಿಕಾದ ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ಪ್ರಾಂತ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಭೂಕಂಪಗಳು!

ಅಮೇರಿಕಾದ ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ಪ್ರಾಂತ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಭೂಕಂಪಗಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2021 | 7:12 PM

ಆದೃಷ್ಟಶಾತ್, ಈ ಭೂಕಂಪಗಳು ಜಾಸ್ತಿ ತೀವ್ರತೆ ಹೊಂದರಿದ ಕಾರಣ ಯಾವುದೇ ನಷ್ಟ-ಹಾನಿ ಸಂಭವಿಸಿಲ್ಲ. ಯುಎಸ್ಜಿಎಸ್ ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ ಆ ಎಲ್ಲ ಭೂಕಂಪಗಳ ತೀವ್ರತೆ ರಿಕ್ಟರ್ ಸ್ಕೇಲ್ ಮೇಲೆ ಬಹಳ ಚಿಕ್ಕ ಪ್ರಮಾಣದವುಗಳಾಗಿದ್ದವು ಮತ್ತು ಕೇವಲ 4 ಕಂಪನಗಳು ಮಾತ್ರ 3 ರಿಂದ 3.5ರಷ್ಟು ತೀವ್ರತೆ ಹೊಂದಿದ್ದವು.

ಇದು ನಂಬಲು ಅಸಾಧ್ಯವಾದರೂ ವಾಸ್ತವ ಸಂಗತಿ ಮತ್ತು ಕೇವಲ ಒಂದು ತಿಂಗಳು ಹಿಂದಷ್ಟೇ ಜರುಗಿರುವಂಥದ್ದು. ಅಮೇರಿಕಾದ ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ಪ್ರಾಂತ್ಯದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಲ ಭೂಕಂಪಗಳು ಜರುಗಿವೆ! ಅಮೆರಿಕದ ಜಿಯಾಲಾಜಿಲ್ ಸರ್ವೇ ವರದಿ (ಯುಎಸ್ಜಿಎಸ್) ಇದನ್ನು ಖಚಿತಪಡಿಸಿದೆ. ಜೂನ್ 2017 ನಂತರ ಮೊದಲ ಬಾರಿಗೆ ಅಷ್ಟು ಸಂಖ್ಯೆಯ ಭೂಕಂಪಗಳು ಆ ಭಾಗದಲ್ಲಿ ಸಂಭವಿಸಿವೆ. 2017ರ ಜೂನ್​ನಲ್ಲಿ ಸುಮಾರು 1,100 ಭೂಕಂಪಗಳು ಅಲ್ಲಿ ಜರುಗಿದ್ದವು.

ಆದೃಷ್ಟಶಾತ್, ಈ ಭೂಕಂಪಗಳು ಜಾಸ್ತಿ ತೀವ್ರತೆ ಹೊಂದಿರದ ಕಾರಣ ಯಾವುದೇ ನಷ್ಟ-ಹಾನಿ ಸಂಭವಿಸಿಲ್ಲ. ಯುಎಸ್ಜಿಎಸ್ ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ ಆ ಎಲ್ಲ ಭೂಕಂಪಗಳ ತೀವ್ರತೆ ರಿಕ್ಟರ್ ಸ್ಕೇಲ್ ಮೇಲೆ ಬಹಳ ಚಿಕ್ಕ ಪ್ರಮಾಣದವುಗಳಾಗಿದ್ದವು ಮತ್ತು ಕೇವಲ 4 ಕಂಪನಗಳು ಮಾತ್ರ 3 ರಿಂದ 3.5ರಷ್ಟು ತೀವ್ರತೆ ಹೊಂದಿದ್ದವು. ಭೂಗರ್ಭಶಾಸ್ತ್ರ ವಿಜ್ಞಾನಿಗಳ ಪ್ರಕಾರ ಈ ಪಾರ್ಕ್ ಅಡಿಯಲ್ಲಿ ಜ್ವಾಲಾಮುಖಿಯೊಂದು ಹುದುಗಿದೆ. ವಿಜ್ಞಾನಿಗಳು ಹೇಳುವ ಹಾಗೆ ಈಗ ಸಂಭವಿಸಿರುವ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗೊಳ್ಳುವ ಸೂಚನೆ ನೀಡಿಲ್ಲ.

ಈ ಪ್ರದೇಶದಲ್ಲಿ ಆಗುವ ಭೂಕಂಪಗಳನ್ನು ಮಾನಿಟರ್ ಮಾಡುವ ಉಟಾಹ್ ವಿಶ್ವವಿದ್ಯಾಲಯದ ಭೂಕಂಪ ಕೇಂದ್ರಗಳು ಜುಲೈ ತಿಂಗಳಲ್ಲಿ 1,008 ಬಾರಿ ನ್ಯಾಶನಲ್ ಪಾರ್ಕ್ ಪ್ರದೇಶದಡಿಯಲ್ಲಿ ಭೂಮಿ ಅದುರಿದೆ. ಸದರಿ ಭೂಕಂಪಗಳು ಏಳು ಗುಂಪುಗಳ ಸರಣಿಯಲ್ಲಿ ಸಂಭವಿಸಿದ್ದು ಗರಿಷ್ಟ ಪ್ರಮಾಣದ ಕಂಪನಗಳು ಜುಲೈ 16ರಂದು ದಾಖಲಾಗಿದೆ. ಯುಎಸ್ಜಿಎಸ್ ವರದಿಯ ಪ್ರಕಾರ ಅಂದು 764 ಬಾರಿ ಭೂಮಿ ಅದುರಿದೆ ಮತ್ತು ಅತಿ ಹೆಚ್ಚು ಅಂದರೆ 3.6 ತೀವ್ರತೆಯ ಅದುರುವಿಕೆಯೂ ಅಂದೇ ಜರುಗಿದೆ.

ಇದನ್ನೂ ಓದಿ: Viral Video: ಬೈಕ್ ಸವಾರನ ಜೊತೆ ಬಾಲಿವುಡ್ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ