Fake news: ಕೊರೊನಾ ಲಸಿಕೆಯಿಂದ ಮನುಷ್ಯರು ಚಿಂಪಾಂಜಿಯಾಗಿ ಮಾರ್ಪಡುವ ಸುಳ್ಳು ಸುದ್ದಿಯ ಚುಂಗು ಹಿಡಿದು

ಅಸ್ಟ್ರಾಜೆನೆಕಾ, ಫೈಜರ್ ಲಸಿಕೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ನೂರಾರು ಖಾತೆಗಳನ್ನು ಫೇಸ್​ಬುಕ್​ ತೆಗೆದುಹಾಕಿದೆ.

Fake news: ಕೊರೊನಾ ಲಸಿಕೆಯಿಂದ ಮನುಷ್ಯರು ಚಿಂಪಾಂಜಿಯಾಗಿ ಮಾರ್ಪಡುವ ಸುಳ್ಳು ಸುದ್ದಿಯ ಚುಂಗು ಹಿಡಿದು
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on:Aug 13, 2021 | 6:21 PM

ಅಸ್ಟ್ರಾಜೆನೆಕಾ ಹಾಗೂ ಫೈಜರ್​ನ ಕೊವಿಡ್​-19 ಲಸಿಕೆ ಪಡೆದ ಮನುಷ್ಯರು ಚಿಂಪಾಂಜಿಗಳಾಗಿ ಮಾರ್ಪಡುತ್ತಾರೆ ಎಂದು ತಪ್ಪಾದ ಮಾಹಿತಿಯನ್ನು ತಮ್ಮ ಖಾತೆಗಳ ಮೂಲಕ ಹರಡುತ್ತಿದ್ದ 300ರಷ್ಟು ಖಾತೆಗಳನ್ನು ಫೇಸ್​ಬುಕ್​ ನಿಷೇಧಿಸಿದೆ. ವರದಿಗಳ ಪ್ರಕಾರ, ಈ ಖಾತೆಗಳು ರಷ್ಯಾದ ತಪ್ಪು ಮಾಹಿತಿ ಜಾಲಕ್ಕೆ ತಳುಕು ಹಾಕಿಕೊಂಡಿರುವಂಥವು ಮತ್ತು ಮುಖ್ಯವಾಗಿ ಭಾರತ, ಲ್ಯಾಟಿನ್ ಅಮೆರಿಕಾ ಹಾಗೂ ಯುಎಸ್​ ಬಳಕೆದಾರರನ್ನು ಗುರಿ ಮಾಡಿಕೊಂಡಿರುವಂಥವು. ಈ ತಪ್ಪಾದ ಮಾಹಿತಿ ಜಾಲವು ಆರಂಭದಲ್ಲಿ ಮೀಮ್ಸ್​ಗಳು ಹಾಗೂ ಕಾಮೆಂಟ್ಸ್​ಗಳನ್ನು ಪೋಸ್ಟ್​ ಮಾಡಿವೆ. ಅಂದರೆ ಅದು 2020ರ ನವೆಂಬರ್ ಹಾಗೂ ಡಿಸೆಂಬರ್ ಸಮಯದಲ್ಲಿ. ಅಸ್ಟ್ರಾಜೆನೆಕಾದ ಕೊವಿಡ್-19 ಲಸಿಕೆಯು ಜನರನ್ನು ಚಿಂಪಾಂಜಿಗಳನ್ನಾಗಿ ಮಾಡಿ, ಆ ನಂತರ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದಿತ್ತು. ಐದು ತಿಂಗಳ ನಂತರ, 2021ರ ಮೇ ತಿಂಗಳಲ್ಲಿ ಇದು ಮತ್ತೆ ಕಾಣಿಸಿಕೊಂಡಿದೆ. ಕಳುವಾಗಿ, ಸೋರಿಕೆ ಆಗಿದೆ ಎಂದು ಆರೋಪಿಸಲಾದ ಆಸ್ಟ್ರಾಜೆನೆಕಾ ದಾಖಲಾತಿಗಳ ಮೂಲಕವಾಗಿ ಫೈಜರ್ ಕಂಪೆನಿಯ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

“ವಿದೇಶೀ ಮಧ್ಯಪ್ರವೇಶದ ನಮ್ಮ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನಾವು 65 ಫೇಸ್​ಬುಕ್​ ಖಾತೆಗಳನ್ನು ಮತ್ತು 243 ಇನ್​​ಸ್ಟಾಗ್ರಾಮ್​ ಖಾತೆಗಳನ್ನು ತೆಗೆದುಹಾಕಿದ್ದೇವೆ. ವಿದೇಶಿ ಸಂಸ್ಥೆಯೊಂದರ ಪರವಾಗಿ ನಿಖರ ಅಲ್ಲದ ನಡವಳಿಕೆಯನ್ನು ಸಂವಹನ ಮಾಡುತ್ತಿದೆ. ನೆಟ್​ವರ್ಕ್​ ಹತ್ತಾರು ಫೋರಂ ಹಾಗೂ ಪ್ಲಾಟ್​ಫಾರ್ಮ್​ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಪ್ರೇಕ್ಷಕರನ್ನು ಸೃಷ್ಟಿಸಲು ವಿಫಲವಾಗಿದೆ. ನಮ್ಮ ತನಿಖೆ ಮೂಲಕ ಈ ಅಭಿಯಾನ ಮತ್ತು ವಿದೇಶಿ ಖಾತೆಗಳ ಮಧ್ಯದ ಸಂಬಂಧವನ್ನು ಕಂಡುಕೊಳ್ಳಲಾಗಿದೆ. ಈಗ ನಮ್ಮ ಪ್ಲಾಟ್​ಫಾರ್ಮ್​ನಿಂದ ಆ ಖಾತೆಗಳನ್ನು ಕಿತ್ತೊಗೆಯಲಾಗಿದೆ,” ಎಂದು ಗ್ಲೋಬಲ್ ಐಒ ಥ್ರೆಟ್ ಗುಪ್ತಚರ ಮುಖ್ಯಸ್ಥ ಹಾಗೂ ಫೇಸ್​ಬುಕ್​ ಐಒ ಥ್ರೆಟ್ ಗುಪ್ತಚರ ಮುಖ್ಯಸ್ಥ ಬೆನ್​ ನಿಮ್ಮೊ ಹೇಳಿದ್ದಾರೆ.

ಕೆಲವೇ ಹ್ಯಾಶ್​ಟ್ಯಾಗ್​ಗಳ ಮೇಲೆ ಗಮನ “ಆಸ್ಟ್ರಾಜೆನೆಕಾ ಸೃಷ್ಟಿಸಿದ ಕೊರೊನಾ ಚುಚ್ಚುಮದ್ದು ಚಿಂಪಾಂಜಿ ವಂಶವಾಹಿಗಳ ಆಧಾರದ ಮೇಲೆ ರೂಪಿಸಿರುವಥದ್ದು, ಈ ಲಸಿಕೆಯನ್ನು ನಿಷೇಧಿಸಬೇಕು, ಇಲ್ಲದಿದ್ದರೆ ನಾವೆಲ್ಲರೂ ಚಿಂಪಾಂಜಿಗಳಾಗುತ್ತೇವೆ,” ಎಂದು ಬಿಜಿನೆಸ್ ಇನ್​ಸೈಡರ್ ತಪ್ಪು ಮಾಹಿತಿ ಜಾಲದಿಂದ ಒಂದು ಪೋಸ್ಟ್ ಅನ್ನು ಉಲ್ಲೇಖಿಸಿದೆ. Instagram ಖಾತೆಗಳು “ಕಚ್ಚಾ ಮತ್ತು ಕುತಂತ್ರದಿಂದ ಕೂಡಿದ” ಚಟುವಟಿಕೆಯನ್ನು ನಡೆಸಿತು, ಅದು #AstraZenecakills ಮತ್ತು #AstraZenecalies, #stopAstraZeneca ನಂತಹ ಕೆಲವು ಹ್ಯಾಶ್‌ಟ್ಯಾಗ್‌ಗಳ ಮೇಲೆ ಕೇಂದ್ರೀಕೃತವಾಗಿದೆ. ಡಿಸೆಂಬರ್ 14 ಮತ್ತು ಡಿಸೆಂಬರ್ 21 ರ ನಡುವೆ, ಕಾರ್ಯಾಚರಣೆಯ ಹ್ಯಾಶ್‌ಟ್ಯಾಗ್‌ಗಳನ್ನು ಒಳಗೊಂಡ ಸುಮಾರು 10,000 ಪೋಸ್ಟ್‌ಗಳನ್ನು ಮಾಡಲಾಗಿದೆ, ಆಗಾಗ ಲಿಂಕ್‌ಗಳೊಂದಿಗೆ ಕಾರ್ಯಾಚರಣೆಯ ಆಫ್-ಪ್ಲಾಟ್​ಫಾರ್ಮ್ ಲೇಖನಗಳಿಗೆ ಫೇಸ್ಬುಕ್ ಹೇಳಿದೆ.

ರೆಡ್​ಇಟ್, ಮೀಡಿಯಾ, change.org, medapply.co.uk ಇವುಗಳಲ್ಲಿಯೂ ತಪ್ಪಾದ ಲೇಖನ ಹಾಗೂ ಅರ್ಜಿಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಆ ನಂತರ ಕುತಂತ್ರ ಬಳಸಿ, ಅವೇ ಲೇಖನಗಳನ್ನು ಫೇಸ್​ಬುಕ್​ ಮತ್ತು ಇನ್​ಸ್ಟಾ ಗ್ರಾಮ್​ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಅಭಿಯಾನದ ಮೂಲಕವಾಗಿ ಈಗಾಗಲೇ ಪ್ರಭಾವಿಸಿರುವಂಥವರನ್ನು ಇನ್​ಸ್ಟಾಗ್ರಾಮ್, ಯೂಟ್ಯೂಬ್​, ಟಿಕ್​ಟಾಕ್​ನಂಥವುಗಳಲ್ಲಿ ನಿರ್ದಿಷ್ಟ ಹ್ಯಾಶ್​ಟ್ಯಾಗ್​ನಲ್ಲಿ ಮೂಲ ಗುರುತು ಬಿಟ್ಟುಕೊಡದೆ ಕಂಟೆಂಟ್ ಪೋಸ್ಟ್​ ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಫೇಸ್​ಬುಕ್ ಹೇಳಿದೆ.

“ವಿದೇಶೀಯರೇ ಆಗಿರಲಿ ಅಥವಾ ಸ್ವದೇಶೀಯರೇ ಆಗಿರಲಿ ವಂಚನೆ ಅಭಿಯಾನದಲ್ಲಿ ತೊಡಗಿಕೊಂಡವರನ್ನು ನಮ್ಮ ತಂಡವು ನಿರಂತರವಾಗಿ ನಿರ್ಮೂಲನೆ ಮಾಡುವ ಕಡೆಗೆ ಗಮನ ಹರಿಸುತ್ತದೆ. ನಮ್ಮ ಜಾರಿಗೆ ಪ್ರತಿಯಾಗಿ ಪ್ರಭಾವಿಸುವಂಥ ಕಾರ್ಯಾಚರಣೆ ನಡೆಯುತ್ತಿದೆ ಎಂದು ನಮಗೆ ಗೊತ್ತಿದೆ, ಹೊಸ ಮೋಸದ ನಡವಳಿಕೆಗಳು ಹೊರಹೊಮ್ಮುತ್ತವೆ,” ಎಂದು ಫೇಸ್​ಬುಕ್​ ಹೇಳಿದೆ.​

ಇದನ್ನೂ ಓದಿ: Fact Check ಕೊವಿಡ್ ರೂಪಾಂತರಿ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ದಿನಾಂಕ ತೋರಿಸುವ ವೈರಲ್ ಪೋಸ್ಟ್ ಫೇಕ್

ಇದನ್ನೂ ಓದಿ: Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ

(Facebook Removes Hundreds Of Accounts Which Were Spreading Fake News About Vaccination)

Published On - 6:21 pm, Fri, 13 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ