AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಗಣರಾಜ್ಯೋತ್ಸವ ಪ್ರಯುಕ್ತ ಫೋನ್‌ ಪೇ 639 ರೂ. ಗಳ ಕ್ಯಾಶ್​ಬ್ಯಾಕ್ ನೀಡುತ್ತಿರುವುದು ನಿಜವೇ?

ನಮ್ಮ ತನಿಖೆಯಲ್ಲಿ ಗಣರಾಜ್ಯೋತ್ಸವದ ಮೊದಲು ಫೋನ್ ಪೇ ಆಫರ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ. ಪೋಸ್ಟ್‌ನಲ್ಲಿ ನೀಡಲಾದ ಆಫರ್ ಮತ್ತು ಲಿಂಕ್ ಎರಡೂ ನಕಲಿ. ಗಣರಾಜ್ಯೋತ್ಸವದಂದು ಫೋನ್ ಪೇನಿಂದ ಅಂತಹ ಯಾವುದೇ ಕೊಡುಗೆಯನ್ನು ನೀಡಲಾಗುತ್ತಿಲ್ಲ. ನೀವುಕೂಡ ಇಂತನ ಲಿಂಕ್ಗಳನ್ನು ಕಂಡರೆ ಅದರ ಮೇಲೆ ಕ್ಲಿಕ್ ಮಾಡಬೇಡಿ.

Fact Check: ಗಣರಾಜ್ಯೋತ್ಸವ ಪ್ರಯುಕ್ತ ಫೋನ್‌ ಪೇ 639 ರೂ. ಗಳ ಕ್ಯಾಶ್​ಬ್ಯಾಕ್ ನೀಡುತ್ತಿರುವುದು ನಿಜವೇ?
Republic Day Offer Fact Check
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Jan 18, 2025 | 5:06 PM

Share

ದೇಶದಲ್ಲಿ ಇದೇ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲು ತಯಾರಿ ನಡೆಸಲಾಗುತ್ತದೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಲಿಂಕ್ ವೈರಲ್ ಆಗುತ್ತಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಖಾತೆಗೆ 639 ರೂ. ಗಳನ್ನು ಜಮಾ ಮಾಡಲಾಗುತ್ತದೆ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.

ವೈರಲ್ ಆಗುತ್ತಿರುವುದು ಏನು?:

ಫೇಸ್‌ಬುಕ್ ಬಳಕೆದಾರರೊಬ್ಬರು ರಿಪಬ್ಲಿಕ್ ಡೇ ಕ್ಯಾಶ್‌ಬ್ಯಾಕ್ ಎಂದು ಜನವರಿ 10, 2025 ರಂದು ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ತ್ರಿವರ್ಣ ಧ್ವಜವನ್ನು ಸ್ಪರ್ಶಿಸಿ ಮತ್ತು 700 ರೂ. ವರೆಗೆ ಬಹುಮಾನಗಳನ್ನು ಗೆಲ್ಲಿರಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಪೋಸ್ಟರ್ ಮೇಲೆ 639 ರೂ. ಗಳ ಕ್ಯಾಶ್​ಬ್ಯಾಕ್ ಎಂದು ಬರೆಯಲಾಗಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಬಂದಿದೆ. ಪೋಸ್ಟ್‌ನಲ್ಲಿ ನೀಡಲಾದ ಆಫರ್ ಮತ್ತು ಲಿಂಕ್ ಎರಡೂ ನಕಲಿ ಆಗಿದೆ. ಗಣರಾಜ್ಯೋತ್ಸವದಂದು ಫೋನ್‌ಪೇ ಅಂತಹ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ. ನಕಲಿ ಲಿಂಕ್ ಅನ್ನು ನಕಲಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Fact Check: ಮಹಾಕುಂಭ ಮೇಳಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಬಂದಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ವೈರಲ್ ಕ್ಲೈಮ್‌ನ ಸತ್ಯವನ್ನು ಕಂಡುಹಿಡಿಯಲು ನಾವು ಪೋಸ್ಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಆಫರ್ ಫೋನ್ ಪೇಯಿಂದ ಬಂದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ. ಪೋಸ್ಟ್ ಮೇಲೆ ಬರೆಯಲಾಗಿದೆ, ಫ್ಲ್ಯಾಗ್ ಮೇಲೆ ಕ್ಲಿಕ್ ಮಾಡಿ ಮತ್ತು ಫೋನ್ ಪೇನಲ್ಲಿ 639 ರೂ. ಗಳನ್ನು ಪಡೆಯಿರಿ ಎಂದು ಬರೆಯಲಾಗಿದೆ.

ಹೀಗಾಗಿ ನಾವು ಫೋನ್ ಪೇನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ. ಆದರೆ ಈ ವೈರಲ್ ಪೋಸ್ಟ್​ಗೆ ಸಂಬಂಧಿಸಿದ ಯಾವುದೇ ಮಾಹಿತಿ ನಮಗೆ ಕಂಡುಬಂದಿಲ್ಲ. ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು, ವೈರಲ್ ಪೋಸ್ಟ್‌ನಲ್ಲಿ ನೀಡಲಾದ ಲಿಂಕ್ ಅನ್ನು ನಾವು ಕ್ಲಿಕ್ ಮಾಡಿದ್ದೇವೆ.

ಈ ಲಿಂಕ್ ಅನ್ನು ತೆರೆದಾಗ ಇದು ಅಪಾಯಕಾರಿ ಲಿಂಕ್ ಎಂದು ನಮ್ಮ ಸಿಸ್ಟಮ್ ನಮಗೆ ಎಚ್ಚರಿಕೆ ನೀಡಿದೆ. ಈ ಲಿಂಕ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ನಮ್ಮ ಸಿಸ್ಟಂನಲ್ಲಿರುವ ಸುರಕ್ಷತಾ ಸಾಧನಗಳು ನಮಗೆ ತಿಳಿಸಿವೆ. ನಿಮ್ಮ ಸಿಸ್ಟಮ್ ಅನ್ನು ಹ್ಯಾಕ್ ಮಾಡುವ ಮೂಲಕ ಹ್ಯಾಕರ್‌ಗಳು ನಿಮಗೆ ಹಾನಿ ಮಾಡಬಹುದು ಎಂದಿದೆ.

ಈ ಪೋಸ್ಟ್​ನ ಕುರಿತು ನಾವು ಇನ್ನಷ್ಟು ಹುಡುಕಿದಾಗ ಖಾಸಗಿ ವೆಬ್​ಸೈಟ್ ಒಂದು ಇದೇ ಲೇಖನವನ್ನು ಸುಳ್ಳು ಎಂದು ಬರೆದಿರುವುದು ಕಂಡುಬಂತು. ಹಾಗೆಯೆ ಅವರು ಸೈಬರ್ ತಜ್ಞ ಅನುಜ್ ಅಗರ್ವಾಲ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿರುವುದು ಅದರಲ್ಲಿದೆ. ಅವರು ಹೇಳಿರುವ ಪ್ರಕಾರ, ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುವುದು ಹಲವು ರೀತಿಯಲ್ಲಿ ಅಪಾಯಕಾರಿ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಅವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಬಳಕೆದಾರರ ಸಿಸ್ಟಮ್ ಅನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಆಕರ್ಷಕ ಆಫರ್​ಗಳೆಂದು ಆಮಿಷಕ್ಕೆ ಒಳಗಾಗಬೇಡಿ ಮತ್ತು ಜಾಗರೂಕರಾಗಿರಿ ಎಂದು ಹೇಳಿದರು ಎಂದಿದೆ.

ಹೀಗಾಗಿ ನಮ್ಮ ತನಿಖೆಯಲ್ಲಿ ಗಣರಾಜ್ಯೋತ್ಸವದ ಮೊದಲು ಫೋನ್ ಪೇ ಆಫರ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ. ಪೋಸ್ಟ್‌ನಲ್ಲಿ ನೀಡಲಾದ ಆಫರ್ ಮತ್ತು ಲಿಂಕ್ ಎರಡೂ ನಕಲಿ. ಗಣರಾಜ್ಯೋತ್ಸವದಂದು ಫೋನ್​ ಪೇನಿಂದ ಅಂತಹ ಯಾವುದೇ ಕೊಡುಗೆಯನ್ನು ನೀಡಲಾಗುತ್ತಿಲ್ಲ. ನೀವುಕೂಡ ಇಂತನ ಲಿಂಕ್​ಗಳನ್ನು ಕಂಡರೆ ಅದರ ಮೇಲೆ ಕ್ಲಿಕ್ ಮಾಡಬೇಡಿ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ