Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಫೇಕ್.

Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ
ವೈರಲ್ ಆಗಿರುವ ಸ್ಕ್ರೀನ್​ಶಾಟ್
Follow us
ರಶ್ಮಿ ಕಲ್ಲಕಟ್ಟ
|

Updated on: May 14, 2021 | 5:53 PM

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಪಕ್ಷಗಳಲ್ಲೊಂದಾದ ಇಂದು ಮಕ್ಕಳ್ ಕಟ್ಚಿ ಈ ಸ್ಕ್ರೀನ್​ಶಾಟ್​ನ್ನು ಶೇರ್ ಮಾಡಿದ್ದು, ಇದು ನಿಜವೇ? ಯಾರಾದರೂ ದೃಢೀಕರಿಸಿ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕಟ್ಟಾ ಬೆಂಬಲಿಗ ಎಂದು ಟ್ವಿಟರ್ ನಲ್ಲಿ ಬರೆದಿರುವ ಟ್ವೀಟಿಗ ಎಂ.ಶ್ರೀನಿವಾಸುಲು ರೆಡ್ಡಿ ಇದನ್ನು ಟ್ವೀಟ್ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಈ ಗ್ರಾಫಿಕ್ಸ್ ವ್ಯಾಪಕವಾಗಿ ಶೇರ್ ಆಗಿದೆ.

ಫ್ಯಾಕ್ಟ್ ಚೆಕ್ ವೈರಲ್ ಆಗಿರುವ ಈ ಸ್ಕ್ರೀನ್​​ಶಾಟ್ ಬಗ್ಗೆ ಆಲ್ಟ್ ನ್ಯೂಸ್  ಫ್ಯಾಕ್ಟ್​ಚೆಕ್ ಮಾಡಿದ್ದು ಈ ಚಿತ್ರ ಫೇಕ್ ಎಂದಿದೆ. ವೈರಲ್ ಆಗಿರುವ ಸ್ಕ್ರೀನ್​ಶಾಟ್​ನಲ್ಲಿ ಸುದ್ದಿಮೂಲ ಹಿಂದೂಸ್ತಾನ್ ಟೈಮ್ಸ್ ಎಂದು ಇದೆ. ಆದರೆ ಹಿಂದೂಸ್ತಾನ್ ಟೈಮ್ಸ್​ನಲ್ಲಿ ಈ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಫೋಟೊ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದು, ಕೇರಳದ ದಂಪತಿ ಬಗ್ಗೆ ಇರುವ ಸುದ್ದಿಯಲ್ಲಿ ಅಲ್ಲ. ಕೊವಿಡ್ ಹೈಲೈಟ್ಸ್ ಸುದ್ದಿಗಾಗಿ ಈ ಫೋಟೊ ಬಳಸಲಾಗಿದೆ. ಇತರ ಯಾವುದೇ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಪ್ರಕಟ ಆಗಿಲ್ಲ.

ಫೋಟೊ ಬೆಂಗಳೂರಿನದ್ದು 2021 ರ ಮೇ 8 ರಂದು ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾನೈಟ್ ಕಲ್ಲುಗಣಿಯೊಳಗೆ ಕೊರೊನಾವೈರಸ್ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ತೆರೆದ ಸ್ಮಶಾನದಲ್ಲಿ ಕೊರೊನಾವೈರಸ್‌ನಿಂದ ಮೃತಪಟ್ಟ ಸಂತ್ರಸ್ತೆಯ ಶವವನ್ನು ಕುಟುಂಬ ಸದಸ್ಯರು ಮತ್ತು ಕೆಲಸಗಾರರು ಒಯ್ಯುತ್ತಿರುವುದು ಎಂದು ಹಿಂದುಸ್ತಾನ್ ಟೈಮ್ಸ್ ಚಿತ್ರದ ಅಡಿಬರಹ ನೀಡಿದೆ. ಎಎಫ್​ಪಿ ಸುದ್ದಿಸಂಸ್ಥೆಯ ಮಂಜುನಾಥ್ ಕಿರಣ್ ಕ್ಲಿಕ್ಕಿಸಿದ ಚಿತ್ರ ಇದಾಗಿದ್ದು, ಆಂಬುಲೆನ್ಸ್ ಮೇಲೆ ಪ್ರಸನ್ನ ಆಂಬುಲೆನ್ಸ್ ಎಂದು ಇದೆ. ಈ ಆಂಬುಲೆನ್ಸ್ ಸೇವೆ ಬೆಂಗಳೂರಿನಲ್ಲಿರುವುದರಿಂದ ಇದು ಬೆಂಗಳೂರಲ್ಲಿ ಸೆರೆ ಹಿಡಿದ ಚಿತ್ರ ಎಂಬುದು ಸ್ಪಷ್ಟ.

ಇನ್​ಶಾರ್ಟ್ಸ್​ನಲ್ಲಿ ಅಂತಹ ಯಾವುದೇ ಸುದ್ದಿ ಕಂಡುಬಂದಿಲ್ಲ. ಇದಲ್ಲದೆ, ವೈರಲ್ ಗ್ರಾಫಿಕ್ಸ್​ನ ಸ್ವರೂಪವು ಇನ್​ಶಾರ್ಟ್ಸ್ ಗ್ರಾಫಿಕ್ಸ್ ಗೆ ಹೊಂದಿಕೆಯಾಗುವುದಿಲ್ಲ. ಆಲ್ಟ್ ನ್ಯೂಸ್ ವೈರಲ್ ಗ್ರಾಫಿಕ್ಸ್​ ಅನ್ನು ನಿಜವಾದ ಇನ್​ಶಾರ್ಟ್ಸ್ ಗ್ರಾಫಿಕ್ಸ್ ನೊಂದಿಗೆ ಹೋಲಿಸಿದೆ. ಸಾರಾಂಶದ ಪಠ್ಯವು ನಿಜವಾದ ಗ್ರಾಫಿಕ್ಸ್​ನಲ್ಲಿ​ರುವುದಕ್ಕಿಂತ ಹೆಚ್ಚು ಗಾಢವಾಗಿದೆ. ವೈರಲ್ ಗ್ರಾಫಿಕ್ಸ್​ನಲ್ಲಿ ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್​ಶಾರ್ಟ್ಸ್ ಪ್ರತಿನಿಧಿಯೊಬ್ಬರು ಆಲ್ಟ್ ನ್ಯೂಸ್‌ ಜತೆ ಮಾತನಾಡಿದ್ದು ಈ ಸುದ್ದಿಯನ್ನು ನಾವು ಇನ್​ಶಾರ್ಟ್ಸ್ನಲ್ಲಿ ಪ್ರಕಟಿಸಿಲ್ಲ. ಇದು ನಕಲಿ ಚಿತ್ರ ಎಂದಿದ್ದಾರೆ.

ಇದನ್ನೂ ಓದಿ: Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ

Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್