Kerala Lockdown: ಕೇರಳದಲ್ಲಿ ಮೇ 23ರ ವರೆಗೆ ಲಾಕ್​ಡೌನ್ ಮುಂದುವರಿಕೆ, ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್

Kerala Extended Lockdown: ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಲಾಕ್​ಡೌನ್ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಇದ್ದ ಲಾಕ್ ಡೌನ್ ಮೇ16ಕ್ಕೆ ಮುಗಿಯಲಿದ್ದು, ಕೊವಿಡ್ ನಿಯಂತ್ರಣಕ್ಕಾಗಿ ಮೇ23ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ

Kerala Lockdown: ಕೇರಳದಲ್ಲಿ ಮೇ 23ರ ವರೆಗೆ ಲಾಕ್​ಡೌನ್ ಮುಂದುವರಿಕೆ, ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:May 14, 2021 | 6:54 PM

ತಿರುವನಂತಪುರಂ: ಕೇರಳದಲ್ಲಿ ಲಾಕ್​ಡೌನ್ ಇನ್ನೊಂದು ವಾರ ಮುಂದುವರಿಸುವುದಾಗಿ ಸರ್ಕಾರ ಹೇಳಿದೆ. ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಲಾಕ್​ಡೌನ್ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಇದ್ದ ಲಾಕ್ ಡೌನ್ ಮೇ16ಕ್ಕೆ ಮುಗಿಯಲಿದ್ದು, ಕೊವಿಡ್ ನಿಯಂತ್ರಣಕ್ಕಾಗಿ ಮೇ23ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಈಗಿರುವ ನಿಯಮ, ನಿರ್ಬಂಧ ಕ್ರಮಗಳು ಇದೇ ರೀತಿ ಮುಂದುವರಿಯಲಿದೆ. ಲಾಕ್​ಡೌನ್ ಮುಂದುವರಿಸಬೇಕು ಎಂದು ಆರೋಗ್ಯ ವಿಭಾಗ ಮತ್ತು ಕೊವಿಡ್ ತಜ್ಞರ ಸಮಿತಿ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆವೆನ್ಯೂ, ವಿಪತ್ತು ನಿರ್ವಹಣಾ ಪ್ರಾಧಿಕಾರ,ಪೊಲೀಸ್ ಮೊದಲಾದ ಇಲಾಖೆಗಳು ಲಾಕ್ ಡೌನ್ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದವು.

ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಆಗದೇ ಇರುವ ತಿರುವನಂತಪುರಂ,ಎರ್ನಾಕುಳಂ, ತ್ರಿಶ್ಶೂರ್, ಮಲಪ್ಪುರಂ ಜಿಲ್ಲೆಗಳಲ್ಲಿ ಮೇ 16ರ ನಂತರ ಟ್ರಿಪಲ್ ಲಾಕ್​ಡೌನ್ ಇರಲಿದೆ. ಕೊವಿಡ್ ಎರಡನೇ ಅಲೆಯ ಸವಾಲು ಎದುರಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು.ಆಹಾರದ ಕಿಟ್ ಮುಂದಿನ ತಿಂಗಳೂ ಮುಂದುವರಿಯಲಿದೆ. ಪಿಂಚಣಿ ವಿತರಣೆ ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೇರಳದಲ್ಲಿ 34,694 ಜನರಿಗೆ ಕೊವಿಡ್ ದೃಢ  ಕೇರಳದಲ್ಲಿ ಶುಕ್ರವಾರ   34,694 ಜನರಿಗೆ ಕೊವಿಡ್ -19  ದೃಢಪಟ್ಟಿದೆ. ತಿರುವನಂತಪುರಂ- 4567, ಮಲಪ್ಪುರಂ -3997, ಎರ್ನಾಕುಲಂ -3855, ತ್ರಿಶೂರ್- 3162, ಕೊಲ್ಲಂ- 2992, ಪಾಲಕ್ಕಾಡ್ -2948, ಕೋಯಿಕ್ಕೋಡ್-  2760, ಕಣ್ಣೂರು- 2159, ಆಲಪ್ಪುಳ- 2149, ಕೊಟ್ಟಾಯಂ – 2043, ಇಡುಕ್ಕಿ -1284, ಪತ್ತನಂತಿಟ್ಟ-1204, ಕಾಸರಗೋಡು 1092 ಮತ್ತು ವಯನಾಡ್- 482 ಹೊಸ ಪ್ರಕರಣಗಳು ಪತ್ತೆಯಾಗಿದೆ

ಕಳೆದ 24 ಗಂಟೆಗಳಲ್ಲಿ 1,31,375 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಪಾಸಿಟಿವಿಟಿ ದರವು 26.41 ಆಗಿದೆ.  93 ಸಾವುಗಳು ವರದಿಯಾಗಿದ್ದು  ಒಟ್ಟು ಸಾವಿನ ಸಂಖ್ಯೆಯನ್ನು 6243 ಕ್ಕೇರಿದೆ. ಇಂದು,ರೋಗ ಪತ್ತೆಯಾದವರಲ್ಲಿ 258 ಜನರು ರಾಜ್ಯದ ಹೊರಗಿನವರು. ಸಂಪರ್ಕದ ಮೂಲಕ ಒಟ್ಟು 32,248 ಜನರಿಗೆ ಸೋಂಕು ತಗುಲಿದೆ.  2076  ಪ್ರಕರಣಗಳಲ್ಲಿ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.

ತಿರುವನಂತಪುರಂ- 4346, ಮಲಪ್ಪುರಂ -3775, ಎರ್ನಾಕುಳಂ- 3739, ತ್ರಿಶ್ಶೂರ್- 3148, ಕೊಲ್ಲಂ -2978, ಪಾಲಕ್ಕಾಡ್- 1578, ಕೋಯಿಕ್ಕೋಡ್- 2693, ಕಣ್ಣೂರು- 2014, ಆಲಪ್ಪುಳ- 2145, ಕೊಟ್ಟಾಯಂ- 1901, ಇಡುಕ್ಕಿ-  1245,  ಪತ್ತನಂತಿಟ್ಟ-  1163, ಕಾಸರಗೋಡು-1060 ವಯನಾಡ್ – 463 ಮಂದಿಗೆ ಸಂಪರ್ಕದಿಂದ ಕೊವಿಡ್ ತಗುಲಿದೆ .

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 10,14,454 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 9,77,257 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 37,197 ಆಸ್ಪತ್ರೆಗಳಲ್ಲಿವೆ. 4018 ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 9 ಹೊಸ ಹಾಟ್‌ಸ್ಪಾಟ್‌ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 844 ಹಾಟ್‌ಸ್ಪಾಟ್‌ಗಳಿವೆ.

ಇದನ್ನೂ ಓದಿ: ಕೇರಳಕ್ಕೆ ಕೊವಿಡ್ ಲಸಿಕೆ ಯಾವಾಗ ಕೊಡುತ್ತೀರಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

Published On - 6:25 pm, Fri, 14 May 21

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ