ಕೇರಳಕ್ಕೆ ಕೊವಿಡ್ ಲಸಿಕೆ ಯಾವಾಗ ಕೊಡುತ್ತೀರಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

Kerala High Court: ರಷ್ಯಾ ಅಥವಾ ಕ್ಯೂಬಾದಿಂದ ತೆಗೆದುಕೊಂಡು ಬರುವುದಾದರೂ ಸರಿ, ನಮಗೆ ಸಾಧ್ಯವಾದಷ್ಟು ಲಸಿಕೆ ಬೇಕು ಎಂದು ರಾಜ್ಯ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಎಂಆರ್ ಅನಿತಾ ಅವರ ವಿಭಾಗೀಯ ಪೀಠವು ಕೊವಿಡ್ ಲಸಿಕೆಗಳನ್ನು ರಾಜ್ಯಕ್ಕೆ ಯಾವಾಗ ಪೂರೈಸುತ್ತೀರಿ? ಪೂರೈಸುವ ಕಾಲಾವಧಿ ಬಗ್ಗೆ ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತು.

ಕೇರಳಕ್ಕೆ ಕೊವಿಡ್ ಲಸಿಕೆ ಯಾವಾಗ ಕೊಡುತ್ತೀರಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ
ಕೇರಳ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: May 14, 2021 | 3:46 PM

ಕೊಚ್ಚಿ: ಕೇರಳ ಹೈಕೋರ್ಟ್ ಇಂದು ಸಾಫ್ಟ್‌ವೇರ್ ಕಾನೂನು ಕೇಂದ್ರದ ವಕೀಲರ ಮೂಲಕ ಸಲ್ಲಿಸಿದ ಪಿಐಎಲ್ ಅರ್ಜಿಯನ್ನು ಕೇಂದ್ರದ ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೊವಿಡ್ -19 ವ್ಯಾಕ್ಸಿನೇಷನ್ ಸ್ಟ್ರಾಟಜಿ (ಲಸಿಕೆ ನೀತಿ) ಯನ್ನು ಅದರ ಬೆಲೆ ಮತ್ತು ಉತ್ಪಾದನಾ ನೀತಿಗಾಗಿ ಪ್ರತಿಪಾದಿಸಿದೆ. ವಿಚಾರಣೆಯ ವೇಳೆ ಕೇರಳ ರಾಜ್ಯಕ್ಕೆ ಲಸಿಕೆಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ರಷ್ಯಾ ಅಥವಾ ಕ್ಯೂಬಾದಿಂದ ತೆಗೆದುಕೊಂಡು ಬರುವುದಾದರೂ ಸರಿ, ನಮಗೆ ಸಾಧ್ಯವಾದಷ್ಟು ಲಸಿಕೆ ಬೇಕು ಎಂದು ರಾಜ್ಯ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಎಂಆರ್ ಅನಿತಾ ಅವರ ವಿಭಾಗೀಯ ಪೀಠವು ಕೊವಿಡ್ ಲಸಿಕೆಗಳನ್ನು ರಾಜ್ಯಕ್ಕೆ ಯಾವಾಗ ಪೂರೈಸುತ್ತೀರಿ? ಪೂರೈಸುವ ಕಾಲಾವಧಿ ಬಗ್ಗೆ ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತು.

ಕಳೆದ ವಾರ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ಕೇರಳಕ್ಕೆ ಲಸಿಕೆಗಳು ಯಾವಾಗ ಸಿಗುತ್ತದೆ ಎಂದು ಕೇಳಿತ್ತು. ಈ ವಿಷಯದ ಬಗ್ಗೆ ಮುಂದಿನ ವಾರ ಶುಕ್ರವಾರದೊಳಗೆ ಹೇಳಿಕೆ ಸಲ್ಲಿಸಲು ಕೇಂದ್ರ ಸರ್ಕಾರದ ವಕೀಲ ಕೆ.ರಾಜ್‌ಕುಮಾರ್ ಸಮಯ ಕೋರಿದ್ದಾರೆ.

ಕೇರಳ ಸರ್ಕಾರ ರಚಿಸಿದ ಕೊವಿಡ್ -19 ಕುರಿತು ತಜ್ಞರ ಸಮಿತಿಯ ಸದಸ್ಯ ಡಾ.ಕೆ.ಅರವಿಂದನ್ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಪ್ರವೀಣ್ ಜಿ ಪೈ , ವಕೀಲ ಪ್ರಶಾಂತ್ ಎಸ್ ಮತ್ತು ಸಾಫ್ಟ್‌ವೇರ್ ಫ್ರೀಂ ಕಾನೂನು ಕೇಂದ್ರದ ವಕೀಲರು ಅರ್ಜಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅರ್ಜಿಯು ಪ್ರಾಥಮಿಕವಾಗಿ 18-45ರ ನಡುವಿನ ವ್ಯಾಕ್ಸಿನೇಷನ್‌ಗಳಿಗೆ ಶುಲ್ಕ ವಿಧಿಸುವ ನಿರ್ಧಾರವನ್ನು ಮತ್ತು ಕೇಂದ್ರ ಮತ್ತು ರಾಜ್ಯಗಳಿಗೆ ಸಿಗುವ ಲಸಿಕೆಯ ಬೆಲೆಯಲ್ಲಿನ ವ್ಯತ್ಯಾಸದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್. ಎಸ್. ಇಂದು ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ನಲ್ಲಿ ಒಳಗೊಂಡಿರುವ ತಂತ್ರಜ್ಞಾನ ಮತ್ತು ಪೇಟೆಂಟ್‌ಗಳನ್ನು ತಯಾರಕರು ಮತ್ತು ಸಮರ್ಥ ಉತ್ಪಾದಕರಿಗೆ ತೀವ್ರವಾಗಿ ಪ್ರಯತ್ನಿಸಿದರು. ಲಸಿಕೆ ತಯಾರಿಸಲು ಸಿದ್ಧರಿರುವ ತಯಾರಕರಿಗೆ ಹಾಗೆ ಮಾಡಲು ಅವಕಾಶವಿದೆ ಎಂದು ತೋರಿಸಲು ನೀತಿ ಆಯೋಗದ ವಿಕೆ ಪೌಲ್ ಅವರ ಸಂವಹನವನ್ನು ದಾಖಲೆಯಲ್ಲಿ ತರಲಾಯಿತು. 19 ತಯಾರಕರು ಲಸಿಕೆ ಉತ್ಪಾದಿಸಬಹುದೆಂದು ಅವರು ವಾದಿಸಿದರು. ಕೇರಳ ರಾಜ್ಯ ಡ್ರಗ್ಸ್ ಆಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ಸಹ ನಿಗದಿತ ಮಾರ್ಗಸೂಚಿಗಳ ಪ್ರಕಾರ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಾಕೆಟ್ ಸಯನ್ಸ್ ಏನೂ ಅಲ್ಲ ಎಂದು ಅವರು ಹೇಳಿದ್ದಾರೆ.

ಅಗತ್ಯವಿರುವ ಸೌಲಭ್ಯಗಳು ರಾಜ್ಯದ ಪ್ರಯೋಗಾಲಯಗಳೊಂದಿಗೆ ಲಭ್ಯವಿಲ್ಲದಿರಬಹುದು ಎಂದು ನ್ಯಾಯಮೂರ್ತಿ ರಾಜ ವಿಜಯ ರಾಘವನ್ ಗಮನಸೆಳೆದರು. ನೀತಿ ಆಯೋಗದ ಸರ್ಕಾರವಲ್ಲ ಎಂದು ಹೇಳಿದ ಕೇಂದ್ರ ಸರ್ಕಾರದ ವಕೀಲ ಕೆ.ರಾಜ್‌ಕುಮಾರ್ ಹೇಳಿದರು.

ರಾಜ್ಯ ಅಟಾರ್ನಿ ಕೆ.ವಿ.ಸೋಹನ್ ಅವರು ಉತ್ಪಾದನೆ ಮತ್ತು ಲಸಿಕೆ ವಿತರಣೆ ಮಾಡುವ ಬದಲು ಲಸಿಕೆ ಸಂಗ್ರಹಿಸುವುದು ಸವಾಲಾಗಿದೆ ಎಂದು ಸಲ್ಲಿಸಿದರು. ಈ ಹಂತದಲ್ಲಿ ಉತ್ಪಾದನೆಯು ಪ್ರಾಯೋಗಿಕವಲ್ಲ ಮತ್ತು ಲಸಿಕೆ ಉತ್ಪಾದನೆಯನ್ನು ಇದು ವಿಳಂಬಗೊಳಿಸುತ್ತದೆ. ಏಕೆಂದರೆ ಉತ್ಪಾದನೆಗಳನ್ನು ಮಾನ್ಯಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣ ಅಗತ್ಯವಾಗಿದೆ. ಅರ್ಜಿ ಸಲ್ಲಿಕೆ ನಂತರ ಲಸಿಕೆ ಲಭ್ಯತೆಯ ಕುರಿತು ಕೇಂದ್ರದ ಪ್ರತಿಕ್ರಿಯೆಯಾಗಿ ಈ ವಿಚಾರಣೆಯನ್ನು ಮೇ 21 ರ ಶುಕ್ರವಾರಕ್ಕೆ ಮುಂದೂಡಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು.

ಲಸಿಕೆ ಕಂಪೆನಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೇರೆ ಬೇರೆ ಬೆಲೆಯೊಂದಿಗೆ ಮೂರು ಹಂತದ ಬೆಲೆ ರಚನೆಯನ್ನು ಹೊಂದಲು ಅವಕಾಶ ನೀಡುವ ನಿರ್ಧಾರವು ಉದ್ದೇಶಿತ ಜನಸಂಖ್ಯೆಯ ಕಡಿಮೆ ವ್ಯಾಪ್ತಿಗೆ ಕಾರಣವಾಗುತ್ತದೆ. ಇದರಿಂದಾಗಿ ಭಾರತದ ಇಡೀ ಜನಸಂಖ್ಯೆಯು ಅಪಾಯಕ್ಕೆ ಸಿಲುಕುತ್ತದೆ,. ಇದು ಆರೋಗ್ಯದ ಹಕ್ಕನ್ನು ಮತ್ತು ಬದುಕಿನ ಹಕ್ಕನ್ನು ಸೂಚಿಸುತ್ತದೆ ಎಂದು ಡಾ.ಅರವಿಂದನ್ ಮತ್ತು ಡಾ.ಪೈ ಅವರ ಅರ್ಜಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:  ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ್ದ ಪ್ರಖ್ಯಾತ ಪ್ರಸೂತಿ ತಜ್ಞೆ ಡಾ.ಎಸ್.ಕೆ.ಭಂಡಾರಿ ಕೊವಿಡ್​ನಿಂದ ನಿಧನ