PM Modi Croatia Visit: ಕ್ರೊಯೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವೇದ ಮಂತ್ರಗಳ ಸ್ವಾಗತ
ಭಾರತದ ಪ್ರಧಾನಿ ನರೇಂದ್ರ ಮೋದಿ ಸೈಪ್ರಸ್, ಕೆನಡಾ ಪ್ರವಾಸ ಮುಗಿಸಿ ಇಂದು ಕ್ರೊಯೇಷಿಯಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿಗೆ ಅಲ್ಲಿನ ಜನರು ವೇದ ಮಂತ್ರಗಳೊಂದಿಗೆ ಸ್ವಾಗತಿಸಿದ್ದಾರೆ. ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಕ್ರೊಯೇಷಿಯಾದ ಜಾಗ್ರೆಬ್‌ನಲ್ಲಿರುವ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಭಾರತೀಯ ವಲಸಿಗರ ಜೊತೆ ಸಂವಾದ ನಡೆಸಿದರು. ಕಥಕ್ ಕಲಾವಿದರು ಪ್ರಧಾನಿ ಮೋದಿ ಅವರ ಮುಂದೆ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರದ ಲಯಬದ್ಧ ಲಯಗಳೊಂದಿಗೆ ಪ್ರದರ್ಶನ ನೀಡಿದರು.

ನವದೆಹಲಿ, ಜೂನ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೆನಡಾದಿಂದ ಕ್ರೊಯೇಷಿಯಾಕ್ಕೆ (Croatia) ಆಗಮಿಸಿದ್ದಾರೆ. ಇದು ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಕ್ರೊಯೇಷಿಯಾದ (PM Modi in Croatia) ನಾಯಕರೊಂದಿಗೆ ಮಾತುಕತೆ ನಡೆಸಲು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ. ನಂತರ ಭಾರತೀಯ ಪ್ರಧಾನಿಗಾಗಿ ಸಂಸ್ಕೃತ ಶ್ಲೋಕಗಳನ್ನು ಘೋಷಿಸಿ, ಸಂಸ್ಕೃತ ಶ್ಲೋಕಗಳ ಮೂಲಕ ಸ್ವಾಗತಿಸಲಾಯಿತು.
ಪ್ರಧಾನಿ ಮೋದಿಯನ್ನು ಕ್ರೊಯೇಷಿಯನ್ನರು ಗಾಯತ್ರಿ ಮಂತ್ರ ಮತ್ತು ಇತರ ವೇದ ಮಂತ್ರಗಳೊಂದಿಗೆ ಸ್ವಾಗತಿಸಿದರು. ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮೂವರು ಕ್ರೊಯೇಷಿಯಾದ ಮಹಿಳೆಯರು ಮತ್ತು ಮೂವರು ಪುರುಷರು ಭಾರತೀಯ ಉಡುಪನ್ನು ಧರಿಸಿರುವುದನ್ನು ನೋಡಬಹುದು. ಮಹಿಳೆಯರು ಬಿಳಿ ಸೀರೆಯನ್ನು ಉಟ್ಟುಕೊಂಡು, ಪುರುಷರು ಬಿಳಿ ಕುರ್ತಾಗಳನ್ನು ಧರಿಸಿ, ಹಣೆಯ ಮೇಲೆ ವಿಭೂತಿಯನ್ನು ಹಚ್ಚಿಕೊಂಡು ಶ್ಲೋಕಗಳನ್ನು ಹೇಳುತ್ತಿರುವುದನ್ನು ನೋಡಬಹುದು. ಸಾಂಪ್ರದಾಯಿಕ ಭಾರತೀಯ ರೀತಿಯಲ್ಲಿ ಮೋದಿಯವರಿಗೆ ಕೈ ಮುಗಿದು ನಮಸ್ಕಾರ ಮಾಡಿ, ಅವರು ವೇದ ಮಂತ್ರಗಳನ್ನು ಪಠಿಸುವುದನ್ನು ಕಾಣಬಹುದು.
The bonds of culture are strong and vibrant! Here is a part of the welcome in Zagreb. Happy to see Indian culture has so much respect in Croatia… pic.twitter.com/G749A952wP
— Narendra Modi (@narendramodi) June 18, 2025
ಇದನ್ನೂ ಓದಿ: ತಪ್ಪು ತಿಳೀಬೇಡಿ ನಿಮ್ಮ ಸಹಕಾರ ಬೇಕು ಆದ್ರೆ ಮಧ್ಯಸ್ಥಿಕೆ ಬೇಡ: ಟ್ರಂಪ್‌ಗೆ ಮೋದಿ ಹೇಳಿದ್ದೇನು?
ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಸಂಸ್ಕೃತಿಯ ಬಂಧಗಳು ಬಲವಾದವು ಮತ್ತು ರೋಮಾಂಚಕವಾದುದು! ಜಾಗ್ರೆಬ್‌ನಲ್ಲಿ ನನಗೆ ದೊರೆತ ಸ್ವಾಗತದ ಒಂದು ಭಾಗ ಇಲ್ಲಿದೆ. ಕ್ರೊಯೇಷಿಯಾದಲ್ಲಿ ಭಾರತೀಯ ಸಂಸ್ಕೃತಿಗೆ ಇಷ್ಟೊಂದು ಗೌರವವಿದೆ ಎಂದು ನೋಡಿ ಸಂತೋಷವಾಯಿತು” ಎಂದು ಪೋಸ್ಟ್ ಮಾಡುವ ಮೂಲಕ ಅವರು ಎಕ್ಸ್ನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೊವನ್ನು ಪೋಸ್ಟ್ ಮಾಡಿದ ಅರ್ಧ ಗಂಟೆಗಿಂತ ಕಡಿಮೆ ಅವಧಿಯಲ್ಲಿ 1.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
A short while ago, landed in Zagreb, Croatia. This is a special visit, the first ever by an Indian Prime Minister to a valued European partner. I am grateful to Prime Minister Andrej Plenković for the special gesture of welcoming me at the airport.@AndrejPlenkovic pic.twitter.com/1qlA8sca1V
— Narendra Modi (@narendramodi) June 18, 2025
ಇದೇ ವೇಳೆ ಪ್ರಧಾನಿ ಮೋದಿ ಅವರ ಮುಂದೆ ಕ್ರೊಯೇಷಿಯಾದ ಪ್ರಜೆಗಳು ಕಥಕ್ ಪ್ರದರ್ಶಿಸಿ ಸ್ವಾಗತಿಸಿದ್ದಾರೆ. ಇದಾದ ನಂತರ, ಪ್ರಧಾನಿ ಮೋದಿ ಅವರು ತಂಗಿರುವ ಹೋಟೆಲ್ ಹೊರಗೆ ಪ್ರಧಾನಿ ಮೋದಿ ಅವರನ್ನು ದೇಶದಲ್ಲಿನ ಭಾರತೀಯ ವಲಸಿಗರು “ವಂದೇ ಮಾತರಂ” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆಗಳೊಂದಿಗೆ ಸ್ವಾಗತಿಸಿದರು.
Croatia’s Indian community has contributed to Croatia’s progress and also remained in touch with their roots in India. In Zagreb, I interacted with some members of the Indian community, who accorded me an unforgettable welcome. There is immense enthusiasm among the Indian… pic.twitter.com/fCrXzHHXzv
— Narendra Modi (@narendramodi) June 18, 2025
ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಕ್ರೊಯೇಷಿಯಾದ ಜಾಗ್ರೆಬ್‌ನಲ್ಲಿರುವ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಭಾರತೀಯ ವಲಸಿಗರ ಜೊತೆ ಸಂವಾದ ನಡೆಸಿದರು. ಕಥಕ್ ಕಲಾವಿದರು ಪ್ರಧಾನಿ ಮೋದಿ ಅವರ ಮುಂದೆ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರದ ಲಯಗಳೊಂದಿಗೆ ಪ್ರದರ್ಶನ ನೀಡಿದರು. ಕೆನಡಾದಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಅದಕ್ಕೂ ಮೊದಲು ಸೈಪ್ರಸ್ಗೆ ಭೇಟಿ ನೀಡಿದ್ದರು. ಇಂದು ಅವರು ಕ್ರೊಯೇಷಿಯಾಕ್ಕೆ ಭೇಟಿ ನೀಡಿದ್ದಾರೆ.
#WATCH | Zagreb, Croatia | Prime Minister Narendra Modi greets and interacts with members of the Indian diaspora as he arrives at a hotel in Zagreb, Croatia.
At the invitation of the Prime Minister of the Republic of Croatia, Andrej Plenković, PM Modi is paying an official… pic.twitter.com/nQLtPngZpx
— ANI (@ANI) June 18, 2025
ಕ್ರೊಯೇಷಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಸಹಕಾರದ ಹೊಸ ಕ್ಷೇತ್ರಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಈ ಭೇಟಿಯನ್ನು ಭಾರತ-ಕ್ರೊಯೇಷಿಯಾ ಸಂಬಂಧಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಶ್ಲಾಘಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಜೋರನ್ ಮಿಲನೋವಿಕ್ ಅವರನ್ನು ಭೇಟಿ ಮಾಡಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Wed, 18 June 25








