AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Iran Conflict: ಇರಾನ್ ಶರಣಾಗುವುದಿಲ್ಲ, ಅಮೆರಿಕ ಮಧ್ಯಪ್ರವೇಶಿಸಿದರೆ ದೊಡ್ಡ ಹಾನಿಯಾಗುತ್ತದೆ; ಟ್ರಂಪ್‌ಗೆ ಖಮೇನಿ ಎಚ್ಚರಿಕೆ

ಇಸ್ರೇಲ್‌ನೊಂದಿಗಿನ ಸಂಘರ್ಷದ ನಡುವೆ ಟ್ರಂಪ್ ಇರಾನ್‌ನ "ಬೇಷರತ್ತಾದ ಶರಣಾಗತಿ"ಗೆ ಕರೆ ನೀಡಿದ ಒಂದು ದಿನದ ನಂತರ ಇಂದು ದೂರದರ್ಶನದ ಸಂದೇಶದಲ್ಲಿ ಇರಾನ್ ಇಸ್ರೇಲ್ ಹೇರಿದ ಯುದ್ಧದ ವಿರುದ್ಧ ದೃಢವಾಗಿ ನಿಲ್ಲುತ್ತದೆ ಎಂದು ಖಮೇನಿ ಹೇಳಿದ್ದಾರೆ. "ಇರಾನ್ ರಾಷ್ಟ್ರವು ಶರಣಾಗುವುದಿಲ್ಲ. ಯಾವುದೇ ಯುಎಸ್ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತದೆ ಎಂದು ಅಮೆರಿಕನ್ನರು ತಿಳಿದಿರಬೇಕು" ಎಂದು ಸುಪ್ರೀಂ ಲೀಡರ್ ಖಮೇನಿ ಹೇಳಿದ್ದಾರೆ.

Israel-Iran Conflict: ಇರಾನ್ ಶರಣಾಗುವುದಿಲ್ಲ, ಅಮೆರಿಕ ಮಧ್ಯಪ್ರವೇಶಿಸಿದರೆ ದೊಡ್ಡ ಹಾನಿಯಾಗುತ್ತದೆ; ಟ್ರಂಪ್‌ಗೆ ಖಮೇನಿ ಎಚ್ಚರಿಕೆ
Khamenei
ಸುಷ್ಮಾ ಚಕ್ರೆ
|

Updated on:Jun 18, 2025 | 5:34 PM

Share

ಜೆರುಸಲೇಂ, ಜೂನ್ 18: ಇಸ್ರೇಲ್ ಜೊತೆ ಇರಾನ್ ಕದನವಿರಾಮ ಮಾಡಿಕೊಳ್ಳಬೇಕೆಂದು ಅಮೆರಿಕ ಈ ಹಿಂದೆ ನೀಡಿದ್ದ ಸಲಹೆಯನ್ನು ಇರಾನ್ (Israel-Iran War) ತಳ್ಳಿಹಾಕಿತ್ತು. ಇದಾದ ನಂತರ ಅಮೆರಿಕ ಇರಾನ್ ವಿರುದ್ಧ ಇಸ್ರೇಲ್ ಜೊತೆ ಕೈಜೋಡಿಸಲಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಅದಕ್ಕೆ ಸರಿಯಾಗಿ ನಿನ್ನೆ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯನ್ನು (G7 Summit) ಅರ್ಧಕ್ಕೇ ಬಿಟ್ಟು ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಕದನವಿರಾಮದ ಮಾತೇ ಇಲ್ಲ. ದೊಡ್ಡ ಅಂತ್ಯವೇ ಸಿಗಲಿದೆ ಎಂದು ಸುಳಿವು ನೀಡಿದ್ದರು. ಇಂದು ಇರಾನ್​ನ ಸುಪ್ರೀಂ ನಾಯಕ ಖಮೇನಿ ಎಲ್ಲಿ ಅಡಗಿದ್ದಾರೆಂದು ಅಮೆರಿಕಕ್ಕೆ ತಿಳಿದಿದೆ. ಆದರೆ, ನಾವು ಅವರನ್ನು ಕೊಲ್ಲುವುದಿಲ್​ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಇದೆಲ್ಲದರ ಬಳಿಕ ಇದೀಗ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಟಿವಿಯಲ್ಲಿನ ಸಂದೇಶದಲ್ಲಿ, ಇರಾನ್ ಇದೀಗ ನಡೆಯುತ್ತಿರುವ ಯುದ್ಧದ ವಿರುದ್ಧ ದೃಢವಾಗಿ ನಿಲ್ಲುತ್ತದೆ. ನಾವು ಶರಣಾಗುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಬೇಷರತ್ತಾದ ಶರಣಾಗತಿಗಾಗಿ ಟ್ರಂಪ್ ಅವರ ಕರೆಯನ್ನು ತಿರಸ್ಕರಿಸಿದ್ದಾರೆ.

ಇರಾನ್ ಜನರನ್ನು ಉದ್ದೇಶಿಸಿ ತನ್ನ ರಹಸ್ಯ ಅಡಗುತಾಣದಿಂದ ಶತ್ರುಗಳಿಗೆ ಸಂದೇಶವನ್ನು ಕಳುಹಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಟೆಹ್ರಾನ್ “ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ ಸ್ಪಷ್ಟ ಸಂದೇಶದಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಶರಣಾಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಯಾವುದೇ ಅಮೇರಿಕನ್ ಮಿಲಿಟರಿ ಹಸ್ತಕ್ಷೇಪವು ಸರಿಪಡಿಸಲಾಗದ ಹಾನಿಯನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Israel-Iran conflict: ಇಸ್ರೇಲ್​​ನಲ್ಲಿ ಸಿಲುಕಿದ 40 ಸಾವಿರ ಪ್ರವಾಸಿಗರು, ಸೈರನ್ ಸದ್ದು, ಕ್ಷಿಪಣಿ ದಾಳಿಗೆ ಬೆದರಿದ ಜನ

ಇದನ್ನೂ ಓದಿ
Image
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
Image
ಇರಾನ್ ಮೇಲೆ ದಾಳಿ; ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು
Image
ಇಸ್ರೇಲ್ ಹಠಾತ್ ದಾಳಿಗೆ ಬೆಚ್ಚಿಬಿದ್ದ ಇರಾನ್: ಪರಮಾಣು ನೆಲೆಗಳೇ ಗುರಿ
Image
ರಾತ್ರೋರಾತ್ರಿ ಉಕ್ರೇನ್ ಮೇಲೆ 479 ಡ್ರೋನ್ ದಾಳಿ ನಡೆಸಿದ ರಷ್ಯಾ

“ಇರಾನ್ ನಮ್ಮ ರಾಷ್ಟ್ರ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ಧಿವಂತ ಜನರು ಈ ರಾಷ್ಟ್ರದೊಂದಿಗೆ ಎಂದಿಗೂ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದಿಲ್ಲ. ಏಕೆಂದರೆ ಇರಾನ್ ರಾಷ್ಟ್ರವು ಶರಣಾಗುವುದಿಲ್ಲ. ಯಾವುದೇ ಯುಎಸ್ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತದೆ ಎಂದು ಅಮೆರಿಕನ್ನರು ತಿಳಿದಿರಬೇಕು” ಎಂದು ಸುಪ್ರೀಂ ಲೀಡರ್ ಖಮೇನಿ ಹೇಳಿದ್ದಾರೆ.

ಇಸ್ರೇಲ್‌ನ “ಭಯೋತ್ಪಾದಕ ಜಿಯೋನಿಸ್ಟ್ ಆಡಳಿತ”ಕ್ಕೆ ನೀಡಿದ ಎಚ್ಚರಿಕೆಯನ್ನು ಹೆಚ್ಚಿಸಿದ ಖಮೇನಿ, ಇಸ್ಲಾಮಿಕ್ ಗಣರಾಜ್ಯದ ಮೇಲೆ ಶಾಂತಿ ಅಥವಾ ಯುದ್ಧವನ್ನು ಹೇರಲು ಸಾಧ್ಯವಿಲ್ಲ ಎಂದು ಹೇಳಿದರು. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹತ್ತಿಕ್ಕುವ ಮಿಲಿಟರಿ ಕಾರ್ಯಾಚರಣೆಯಾದ ‘ರೈಸಿಂಗ್ ಸಿಂಹ’ದಲ್ಲಿ ಅಮೆರಿಕ ಇಲ್ಲಿಯವರೆಗೆ ನೇರವಾಗಿ ಭಾಗಿಯಾಗಿಲ್ಲವಾದರೂ ಅಮೆರಿಕದ ತಾಳ್ಮೆ ಕ್ಷೀಣಿಸುತ್ತಿದೆ ಎಂದು ಟ್ರಂಪ್ ಸೂಚಿಸಿದ್ದಾರೆ.

ಇದನ್ನೂ ಓದಿ: Israel-Iran Conflict: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನ ಸಾವು, ಟೆಲ್ ಅವೀವ್ ಮೇಲೆ 400 ಕ್ಷಿಪಣಿಗಳ ದಾಳಿ

ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ 1 ದಿನ ಮುಂಚಿತವಾಗಿ ನಿರ್ಗಮಿಸಿದಾಗ ಟ್ರಂಪ್ ಅವರ ಹೇಳಿಕೆಗಳ ಸರಮಾಲೆ ಬಂದಿದ್ದು, ಈ ಸಂಘರ್ಷದಲ್ಲಿ ಯುಎಸ್ ಮಿಲಿಟರಿ ಹಸ್ತಕ್ಷೇಪ ಮಾಡಬಹುದು ಎಂಬ ಊಹಾಪೋಹಗಳಿಗೆ ನಾಂದಿ ಹಾಡಿದೆ. ಇಂದು ಸತತ ಆರನೇ ದಿನವೂ ಇಸ್ರೇಲ್ ಮತ್ತು ಇರಾನ್ ಕ್ಷಿಪಣಿಗಳ ದಾಳಿ ಮುಂದುವರೆಸಿದ್ದು, 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್ ಗರಿಷ್ಠ ಹಾನಿಯನ್ನು ಅನುಭವಿಸಿದೆ, ಇರಾನ್​ನಲ್ಲಿ ಸಾವಿನ ಸಂಖ್ಯೆ 585ಕ್ಕೆ ಏರಿದೆ. ಇರಾನ್ ಇಸ್ರೇಲ್ ಮೇಲೆ ಫತ್ತಾಹ್-1 ಹೈಪರ್‌ಸಾನಿಕ್ ಕ್ಷಿಪಣಿಯನ್ನು ಹಾರಿಸಿರುವುದಾಗಿ ಹೇಳಿಕೊಂಡಿದೆ. ಇದು ನಡೆಯುತ್ತಿರುವ ಸಂಘರ್ಷದಲ್ಲಿ ಮೊದಲನೆಯದಾಗಿದೆ. ಟೆಲ್ ಅವಿವ್‌ನಲ್ಲೂ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಇರಾನಿನ ದಾಳಿಯಲ್ಲಿ ಇದುವರೆಗೆ 24 ಜನರು ಸಾವನ್ನಪ್ಪಿದ್ದಾರೆ ಮತ್ತು 1,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:34 pm, Wed, 18 June 25