AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Iran conflict: ಇಸ್ರೇಲ್​​ನಲ್ಲಿ ಸಿಲುಕಿದ 40 ಸಾವಿರ ಪ್ರವಾಸಿಗರು, ಸೈರನ್ ಸದ್ದು, ಕ್ಷಿಪಣಿ ದಾಳಿಗೆ ಬೆದರಿದ ಜನ

ಇಸ್ರೇಲ್ ಹಾಗೂ ಇರಾನ್(Iran) ನಡುವಿನ ಉದ್ವಿಗ್ನತೆ ಹೆಚ್ಚಿದೆ . ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ. ಇಸ್ರೇಲ್​​ನಲ್ಲಿ 40 ಸಾವಿರ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಸದಾ ಸೈರನ್ ಸದ್ದು, ವಿಮಾನಗಳ ಹಾರಾಟ, ವಿಮಾನಗಳು ನೆಲಕ್ಕಪ್ಪಳಿಸುವ ರೀತಿ ಕಂಡು ಬೆಚ್ಚಿಬಿದ್ದಿದ್ದಾರೆ. ಮೊದಲು ಜೂನ್ 13ರಂದು ಇಸ್ರೇಲ್ ಇರಾನ್​​ನ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಸೇನಾ ನೆಲೆಗಳ ಮೇಲೂ ಕೂಡ ದಾಳಿ ಮಾಡಿತ್ತು.

Israel-Iran conflict: ಇಸ್ರೇಲ್​​ನಲ್ಲಿ ಸಿಲುಕಿದ 40 ಸಾವಿರ ಪ್ರವಾಸಿಗರು, ಸೈರನ್ ಸದ್ದು, ಕ್ಷಿಪಣಿ ದಾಳಿಗೆ ಬೆದರಿದ ಜನ
ಕ್ಷಿಪಣಿ ದಾಳಿ Image Credit source: Reuters
ನಯನಾ ರಾಜೀವ್
|

Updated on: Jun 16, 2025 | 9:37 AM

Share

ಜೆರುಸಲೇಂ, ಜೂನ್ 16: ಇಸ್ರೇಲ್(Israel) ಹಾಗೂ ಇರಾನ್(Iran) ನಡುವಿನ ಯುದ್ಧ ತೀವ್ರಗೊಂಡಿದೆ. ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ. ಇಸ್ರೇಲ್​​ನಲ್ಲಿ 40 ಸಾವಿರ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಸದಾ ಸೈರನ್ ಸದ್ದು, ವಿಮಾನಗಳ ಹಾರಾಟ, ವಿಮಾನಗಳು ನೆಲಕ್ಕಪ್ಪಳಿಸುವ ರೀತಿ ಕಂಡು ಬೆಚ್ಚಿಬಿದ್ದಿದ್ದಾರೆ. ಮೊದಲು ಜೂನ್ 13ರಂದು ಇಸ್ರೇಲ್ ಇರಾನ್​​ನ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಸೇನಾ ನೆಲೆಗಳ ಮೇಲೂ ಕೂಡ ದಾಳಿ ಮಾಡಿತ್ತು.

ಅದಕ್ಕೆ ಪ್ರತೀಕಾರವಾಗಿ ಇರಾನ್ ತನ್ನಲ್ಲಿರುವ ನೂರಾರು ಡ್ರೋನ್​ಗಳು ಕ್ಷಿಪಣಿಗಳನ್ನು ಇಸ್ರೇಲ್​ನ ಜೆರುಸಲೇಂ ಹಾಗೂ ಟೆಲ್ ಅವಿವ್​​ನತ್ತ ಎಸೆದಿದೆ. ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಹಿಂಸಾಚಾರದಿಂದಾಗಿ ಇಸ್ರೇಲ್‌ನಲ್ಲಿ ಸುಮಾರು 40,000 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

ಮುಂದಿನ ಸೂಚನೆ ಬರುವವರೆಗೂ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸುತ್ತಿವೆ. ಪ್ರಯಾಣಿಕರು ವಿಮಾನಗಳಿಗಾಗಿ ಕಾಯಬೇಕೆ ಅಥವಾ ಪಕ್ಕದ ದೇಶಗಳ ಮೂಲಕ ದುಬಾರಿ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೆ ಎಂದು ನಿರ್ಧರಿಸಲು ಬಿಡಲಾಗಿದೆ.

ಇರಾನ್​ ಮೇಲೆ ರಣಭೀಕರ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿ ಹಾಗೂ ಇಂಧನ ಕೈಗಾರಿಕೆಗಳನ್ನು ಗುರಿಯಾಗಿಸಿ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದ್ದು, ಈ ದೃಶ್ಯಗಳು ಎದೆ ನಡುಗಿಸುವಂತಿವೆ. ಇಸ್ರೇಲ್​ನ ಟೆಲ್​ ಅವೀವ್​, ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಕ್ಷಿಪಣಿಗಳ ಸುರಿಮಳೆಯನ್ನೇ ಗೈದಿದೆ, ಇರಾನ್​ ಜನವಸತಿ ಪ್ರದೇಶಗಳನ್ನ ಟಾರ್ಗೆಟ್​ ಮಾಡಿದ್ದು ದಾಳಿ ನಡೆಸಿದೆ.

ಮತ್ತಷ್ಟು ಓದಿ: ಇರಾನ್​ ಕ್ಷಿಪಣಿ ದಾಳಿಯಿಂದ ಅದಾನಿಯ ಹೈಫಾ ಬಂದರ್​ಗೆ ಯಾವುದೇ ಹಾನಿ ಇಲ್ಲ

ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರ ಉಭಯ ದೇಶಗಳಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಟ್ರಂಪ್​ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದಂತೆ, ಇರಾನ್​-ಇಸ್ರೇಲ್​ ಯುದ್ಧವನ್ನು ಕೊನೆಗೊಳ್ಳುವಂತೆ ಮಾಡ್ತೇನೆ ಎನ್ನುವ ಮೂಲಕ ಭಾರತ-ಪಾಕ್​ ಕದನ ವಿರಾಮದ ​ ದಾಳ ಉರುಳಿಸಿದ್ದಾರೆ.

ಎರಡೂ ದೇಶಗಳು ರಾಕೆಟ್, ಕ್ಷಿಪಣಿ, ಡ್ರೋನ್‌ಗಳಿಂದ ಪರಸ್ಪರ ದಾಳಿ ಮಾಡುತ್ತಿವೆ. ಏತನ್ಮಧ್ಯೆ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ .

ಇರಾನ್​-ಇಸ್ರೇಲ್​ನಲ್ಲಿ ಇರುವ ಭಾರತೀಯರಿಗೆ ಕೇಂದ್ರ ಸರ್ಕಾರ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಅನಗತ್ಯವಾಗಿ ಹೊರಗೆ ಬಾರದೆ ಸುರಕ್ಷಿತ ಸ್ಥಳಗಳಲ್ಲಿ ಇರಿ. ಹಾಗೂ ಭಾರತದ ಎಂಬಸಿ ಜೊತೆ ಸಂಪರ್ಕದಲ್ಲಿರಲು ತಿಳಿಸಿದೆ.

1,595 ಭಾರತೀಯ ವಿದ್ಯಾರ್ಥಿಗಳು ಇರಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ, ಅವರಲ್ಲಿ 140 ವಿದ್ಯಾರ್ಥಿಗಳು ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲದೆ, 183 ಭಾರತೀಯ ಯಾತ್ರಿಕರು ಸಹ ಇರಾಕ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಓವೈಸಿ ತಿಳಿಸಿದ್ದಾರೆ. ಇರಾನ್ ನಡೆಸಿದ ಈ ದಾಳಿಯಲ್ಲಿ ಇಸ್ರೇಲ್‌ನ ಅನೇಕ ವಸತಿ ಪ್ರದೇಶಗಳು ಹಾನಿಗೊಳಗಾಗಿವೆ.

ಅಧಿಕಾರಿಗಳ ಪ್ರಕಾರ, ಈ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಎರಡೂ ದೇಶಗಳ ನಡುವಿನ ವಾತಾವರಣವು ತುಂಬಾ ಬಿಸಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು