ಇರಾನ್ ಕ್ಷಿಪಣಿ ದಾಳಿಯಿಂದ ಅದಾನಿಯ ಹೈಫಾ ಬಂದರ್ಗೆ ಯಾವುದೇ ಹಾನಿ ಇಲ್ಲ
ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನಲ್ಲಿನ ಹೈಫಾ ಬಂದರಿಗೆ ಯಾವುದೇ ಹಾನಿಯಾಗಿಲ್ಲ. ಅದಾನಿ ಗ್ರೂಪ್‌ಗೆ ಸೇರಿದ ಈ ಬಂದರಿನಲ್ಲಿ ಸರಕು ಸಾಗಣಿಕೆ ಎಂದಿನಂತೆ ಸುಗಮವಾಗಿ ನಡೆಯುತ್ತಿದೆ. ಕೆಲವು ವರದಿಗಳ ಪ್ರಕಾರ ಬಂದರಿನ ಸಮೀಪದ ತೈಲ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿರಬಹುದು. ಆದರೆ, ಅಧಿಕೃತವಾಗಿ ದೃಢೀಕರಣಗೊಂಡಿಲ್ಲ.

ಜೆರುಸಲೆಮ್, ಜೂನ್ 15: ಇರಾನಿನ (Iran) ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನಲ್ಲಿರುವ (Israel) ಗೌತಮ್ ಅದಾನಿ ಗ್ರೂಪ್ನ ಹೈಫಾ ಬಂದರಿಗೆ (Haifa port) ಯಾವುದೇ ಹಾನಿಯಾಗಿಲ್ಲ. ಮತ್ತು ಸರಕು ಸಾಗಣಿಕೆ ಎಂದಿನಂತೆ ಯಾವುದೇ ಅಡಚಣೆ ಇಲ್ಲದೆ ನಡೆಯುತ್ತಿದೆ ಎಂದು ಪಿಟಿಐ ತಿಳಿಸಿದೆ.
ಈ ವಾರದ ಆರಂಭದಲ್ಲಿ ಇರಾನ್ ದೇಶದ ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿರುವ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಶನಿವಾರ ತಡರಾತ್ರಿ ಇರಾನ್, ಇಸ್ರೇಲ್‌ನಲ್ಲಿನ ಹೈಫಾ ಬಂದರು ಮತ್ತು ಹತ್ತಿರದ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಬಂದರಿನಲ್ಲಿರುವ ರಾಸಾಯನಿಕ ಟರ್ಮಿನಲ್‌ನಲ್ಲಿ ಶಾರ್ಪ್‌ನೆಲ್ ಶೆಲ್ಗಳು ಬಿದ್ದಿವೆ. ಮತ್ತು ತೈಲ ಸಂಸ್ಕರಣಾ ಘಟಕದ ಮೇಲೆ ಇತರ ಕೆಲವು ಸ್ಪೋಟಕಗಳು ಬಿದ್ದಿವೆ ಎಂದು ವರದಿಯಾಗಿತ್ತು. ಆದರೆ, ಹೈಫಾ ಬಂದರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಕಿಶನ್ ವೆಸ್ಟ್ (ಹೈಫಾ ಬಂದರು) ನಲ್ಲಿ ಇಂಟರ್ ಸೆಪ್ಟರ್ ಶಾರ್ಪ್ ನೆಲ್ನ ಚೂರುಗಳು ಕಂಡುಬಂದಿವೆ. ಆದರೆ ಯಾವುದೇ ರೀತಿಯ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಅದಾನಿ ಗ್ರೂಪ್ನ ಬಂದರಿನಲ್ಲಿ ಸರಕು ಸಾಗಾಣಿಕೆಗೆ ಯಾವುದೇ ಅಡೆತಡೆ ಉಂಟಾಗಿಲ್ಲ. “ಬಂದರಿನಲ್ಲಿ ಈಗ ಎಂಟು ಹಡಗುಗಳಿವೆ. ಸರಕು ಸಾಗಣಿಕೆ ನಡೆಯುತ್ತಿದೆ” ಎಂದು ಮೂಲಗಳು ತಿಳಿಸಿವೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯು ಅದಾನಿ ಗ್ರೂಪ್ನ ಬಂದರಿಗೆ ಅಥವಾ ಅದರ ಕಾರ್ಯಗಳಿಗಳಿಗೆ ಯಾವುದೇ ಹಾನಿಯನ್ನುಂಟುಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಅದಾನಿ ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲ್‌ನ ಸರ್ಕಾರಿ ಅಧಿಕಾರಿಗಳು ಕೂಡ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಹೈಫಾ ಬಂದರು ನಿರ್ಣಾಯಕ ಕಡಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಸ್ರೇಲ್‌ನ ಆಮದುಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತದೆ. ಇದು ಅದಾನಿ ಪೋರ್ಟ್ಸ್ ಒಡೆತನಲ್ಲಿದ್ದು, ಶೇಕಡಾ 70 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಕ್ಷಿಪಣಿಗಳು ಬಂದರಿಗೆ ಸಮೀಪವಿರುವ ಪ್ರಮುಖ ತೈಲ ಸಂಸ್ಕರಣಾ ಘಟಕಕ್ಕೆ ಹಾನಿ ಮಾಡಿರಬಹುದು, ಆದರೆ ಬಂದರು ಮೇಲಿನ ಹಾನಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ: ನಮ್ಮ ಮೇಲೆ ಕ್ಷಿಪಣಿ ದಾಳಿ ಮುಂದುವರಿದರೆ ಟೆಹ್ರಾನ್ ಹೊತ್ತಿ ಉರಿಯುತ್ತದೆ; ಇರಾನ್‌ಗೆ ಇಸ್ರೇಲ್ ಎಚ್ಚರಿಕೆ
ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ನಂತರ ಇರಾನ್ ಪ್ರತಿಕಾರವಾಗಿ ಇಸ್ರೇಲ್ ಮೇಲೆ ದಾಳಿ ಮಾಡಿದೆ. ನಮ್ಮ ಎರಡು ತೈಲ ಸಂಸ್ಕರಣಾ ಘಟಕಗಳನ್ನು ಇಸ್ರೇಲ್ ಹೊಡೆದುರುಳಿಸಿದೆ ಎಂದು ಇರಾನ್ ಹೇಳಿದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ಇರಾನಿನ ಕ್ಷಿಪಣಿಗಳು ಇಸ್ರೇಲ್ ದೇಶದ ಹೃದಯಭಾಗದಲ್ಲಿರುವ ಕಟ್ಟಡಗಳನ್ನು ಹೊಡೆದುರುಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.








