ನಮ್ಮ ಮೇಲೆ ಕ್ಷಿಪಣಿ ದಾಳಿ ಮುಂದುವರಿದರೆ ಟೆಹ್ರಾನ್ ಹೊತ್ತಿ ಉರಿಯುತ್ತದೆ; ಇರಾನ್‌ಗೆ ಇಸ್ರೇಲ್ ಎಚ್ಚರಿಕೆ
ಇರಾನ್ ಮೇಲೆ ಇಸ್ರೇಲ್ ಶುಕ್ರವಾರ ಭಯಾನಕ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸಿತ್ತು. ಹೀಗಾಗಿ, ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರಿದರೆ "ಟೆಹ್ರಾನ್ ಉರಿಯುತ್ತದೆ" ಎಂದು ಇಸ್ರೇಲ್ ರಕ್ಷಣಾ ಸಚಿವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಮಾರಕ ದಾಳಿಯ ನಂತರ ಅವರ ಈ ಹೇಳಿಕೆ ಹೊರಬಿದ್ದಿದೆ. ಎರಡೂ ಕಡೆಗಳಲ್ಲಿ ಸಾವುನೋವುಗಳು ಹೆಚ್ಚುತ್ತಿರುವುದರಿಂದ ಉದ್ವಿಗ್ನತೆಗಳು ವ್ಯಾಪಕ ಸಂಘರ್ಷದತ್ತ ಸಾಗುತ್ತಿದೆ. ಹೀಗಾಗಿ, ಜಾಗತಿಕ ಶಕ್ತಿಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿವೆ.

ಜೆರುಸಲೇಂ, ಜೂನ್ 14: ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಂದು ಇರಾನ್‌ಗೆ ಕಟು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಮೇಲಿನ ಇರಾನ್ ಕ್ಷಿಪಣಿ ದಾಳಿ ಮುಂದುವರಿದರೆ “ಟೆಹ್ರಾನ್ ಉರಿಯುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ. ಶುಕ್ರವಾರ ಬೆಳಿಗ್ಗೆ ಇರಾನ್‌ನ (Iran) ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ರಾತ್ರಿಯಿಡೀ ಕ್ಷಿಪಣಿ ದಾಳಿ ನಡೆಸಿದ ನಂತರ ಕ್ಯಾಟ್ಜ್ ಅವರ ಹೇಳಿಕೆಗಳು ಬಂದಿವೆ. ಭದ್ರತಾ ಮೌಲ್ಯಮಾಪನದ ಸಮಯದಲ್ಲಿ ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಮತ್ತು ಮೊಸಾದ್ ನಿರ್ದೇಶಕ ಡೇವಿಡ್ ಬಾರ್ನಿಯಾ ಅವರೊಂದಿಗೆ ಮಾತನಾಡಿದ ಕ್ಯಾಟ್ಜ್, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದರು. “ಇರಾನಿನ ಸರ್ವಾಧಿಕಾರಿ ಇರಾನ್ ನಾಗರಿಕರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದು ಕ್ಯಾಟ್ಜ್ ಹೇಳಿದರು. ಹಾಗೇ, “ಟೆಹ್ರಾನ್ ನಿವಾಸಿಗಳು ಇಸ್ರೇಲಿ ನಾಗರಿಕರ ಮೇಲಿನ ಕ್ರಿಮಿನಲ್ ದಾಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಇಸ್ರೇಲಿ ಸೇನೆಯು ಇಂದು ರೈಸಿಂಗ್ ಲಯನ್ ಎಂಬ ಹೆಸರಿನ ತನ್ನ ಕಾರ್ಯಾಚರಣೆಯು 9 ಹಿರಿಯ ಇರಾನಿನ ಪರಮಾಣು ವಿಜ್ಞಾನಿಗಳನ್ನು ಹತ್ಯೆ ಮಾಡಿದೆ ಎಂದು ದೃಢಪಡಿಸಿತು. ಐಡಿಎಫ್ ಪ್ರಕಾರ, ಈ ವಿಜ್ಞಾನಿಗಳು ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ನೇರವಾಗಿ ಭಾಗಿಯಾಗಿದ್ದರು. “ಈ ದಾಳಿಗಳನ್ನು ನಿಖರವಾದ ಗುಪ್ತಚರ ಆಧಾರದ ಮೇಲೆ ನಡೆಸಲಾಯಿತು” ಎಂದು ಮಿಲಿಟರಿ ಹೇಳಿದೆ.
ಇದನ್ನೂ ಓದಿ: Israel-Iran Conflict: ಇಸ್ರೇಲ್ ದಾಳಿಗೆ ಪ್ರತೀಕಾರ; 2 ಇಸ್ರೇಲಿ F-35 ಜೆಟ್‌ಗಳ ಧ್ವಂಸ
ಡ್ರೋನ್‌ಗಳು ಮತ್ತು ಯುದ್ಧವಿಮಾನಗಳೊಂದಿಗೆ ನಡೆಸಲಾದ ವೈಮಾನಿಕ ದಾಳಿಗಳು ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಸೂಕ್ಷ್ಮ ಪರಮಾಣು ಸೌಲಭ್ಯಗಳನ್ನು ಹೊಡೆದು ವ್ಯಾಪಕ ಹಾನಿಯನ್ನುಂಟುಮಾಡಿವೆ ಎಂದು ವರದಿಯಾಗಿದೆ. ಇದಕ್ಕೆ ಪ್ರತೀಕಾರವಾಗಿ, ಇರಾನ್ ಶುಕ್ರವಾರ ರಾತ್ರಿ ಇಸ್ರೇಲಿ ಪ್ರದೇಶದ ಮೇಲೆ ಡಜನ್ಗಟ್ಟಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಇಸ್ರೇಲ್‌ನ ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಮತ್ತು ಯುಎಸ್ ಸರಬರಾಜು ಮಾಡಿದ ಇಂಟರ್‌ಸೆಪ್ಟರ್‌ಗಳು ಒಳಬರುವ ಬೆದರಿಕೆಗಳನ್ನು ತಟಸ್ಥಗೊಳಿಸಲು ಕೆಲಸ ಮಾಡುತ್ತಿರುವಾಗ ಜೆರುಸಲೆಮ್ ಮತ್ತು ಟೆಲ್ ಅವಿವ್ ಮೇಲೆ ಆಕಾಶದಲ್ಲಿ ಸ್ಫೋಟಗಳು ಸಂಭವಿಸಿದವು.
ಈ ದಾಳಿಯಿಂದ ಇಸ್ರೇಲಿ ಅಧಿಕಾರಿಗಳು 3 ಸಾವುಗಳು ಮತ್ತು ಡಜನ್ಗಟ್ಟಲೆ ಜನರಿಗೆ ಗಾಯಗಳಾಗಿವೆ. ಹಾಗೇ, ಇಸ್ರೇಲ್ ನಡೆಸಿದ ದಾಳಿಯಲ್ಲಿ 78 ಇರಾನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 320ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ವಿಶ್ವಸಂಸ್ಥೆಯ ರಾಯಭಾರಿ ವರದಿ ಮಾಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








