15 ದಿನಗಳಲ್ಲಿ ಮತದಾರರಿಗೆ ಸಿಗಲಿದೆ ವೋಟರ್ ಐಡಿ; ಚುನಾವಣಾ ಆಯೋಗದಿಂದ ಮಹತ್ವದ ಕ್ರಮ
ಮತದಾರರ ಗುರುತಿನ ಚೀಟಿಯ ವಿತರಣೆಯನ್ನು ವೇಗಗೊಳಿಸಲು ಚುನಾವಣಾ ಆಯೋಗವು 15 ದಿನಗಳ SOP ಅನ್ನು ಪ್ರಾರಂಭಿಸಿದೆ. ಭಾರತೀಯ ಚುನಾವಣಾ ಆಯೋಗದ ಹೊಸ ವ್ಯವಸ್ಥೆಯ ಮೂಲಕ ಮತದಾರರು 15 ದಿನಗಳಲ್ಲಿ ಮತದಾರರ ಫೋಟೋ ಗುರುತಿನ ಚೀಟಿಗಳನ್ನು ಪಡೆಯಬಹುದಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ ಮತ್ತು ಗುರುತಿನ ಚೀಟಿಯ ವಿವರವನ್ನು ನವೀಕರಣ ಮಾಡಲು ಬಯಸುವವರಿಗೆ ಕೂಡ ಇದು ಅನ್ವಯವಾಗುತ್ತದೆ.

ನವದೆಹಲಿ, ಜೂನ್ 18: ಮತದಾರರ ಗುರುತಿನ ಚೀಟಿಗಳನ್ನು (Voter ID) ಇನ್ಮುಂದೆ 15 ದಿನಗಳಲ್ಲಿ ಮತದಾರರಿಗೆ ತಲುಪಿಸಲಾಗುವುದು ಎಂದು ಚುನಾವಣಾ ಆಯೋಗವು (Election Commission) ಇಂದು (ಬುಧವಾರ) ತಿಳಿಸಿದೆ. ಈ ಮೂಲಕ ವೋಟರ್ ಐಡಿ (Voter ID) ತೆಗೆದುಕೊಳ್ಳುವ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಇದುವರೆಗೆ, ಮತದಾರರ ಫೋಟೋ ಗುರುತಿನ ಚೀಟಿ (EPIC) ಮತದಾರರಿಗೆ ತಲುಪಲು 1 ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತಿತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಮತದಾರರ ಹೊಸ ನೋಂದಣಿ ಮಾಡಿಕೊಳ್ಳುವವರಿಗೆ ಅಥವಾ ಅಸ್ತಿತ್ವದಲ್ಲಿರುವ ಮತದಾರರ ವಿವರಗಳಲ್ಲಿ ಬದಲಾವಣೆಯನ್ನು ಮಾಡಲು ಬಯಸುವವರಿಗೆ 15 ದಿನಗಳಲ್ಲಿ ವೋಟರ್ ಕಾರ್ಡ್‌ಗಳನ್ನು ತಲುಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ಪರಿಚಯಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಆಯೋಗದ ಹೊಸ ವ್ಯವಸ್ಥೆಯು ಚುನಾವಣಾ ನೋಂದಣಿ ಅಧಿಕಾರಿ (ERO) EPIC ಸಿದ್ಧಗೊಳ್ಳುವುದರಿಂದ ಹಿಡಿದು ಅಂಚೆ ಇಲಾಖೆ ಮೂಲಕ ಮತದಾರರಿಗೆ ವೋಟರ್ ಕಾರ್ಡ್ ತಲುಪಿಸುವವರೆಗೆ ಪ್ರತಿ ಹಂತದ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಈ ವ್ಯವಸ್ಥೆಯ ಮೂಲಕ ಮಾಡಬಹುದು ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.
The Election Commission (@ECISVEEP) has decided to fast track Electors Photo Identity Cards (EPICs) delivery to the electors.
Now, the electors will get EPICs within 15 days of the update in the electoral rolls. The Commission has introduced a new Standard Operating Procedure… pic.twitter.com/DE0EXkSQIg
— All India Radio News (@airnewsalerts) June 18, 2025
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೂ ಮುನ್ನ ದಿಢೀರನೆ 70 ಲಕ್ಷ ಹೊಸ ಮತದಾರರ ಸೇರ್ಪಡೆ; ರಾಹುಲ್ ಗಾಂಧಿ ಆರೋಪ
ಮತದಾರರು ಪ್ರತಿ ಹಂತದಲ್ಲಿ SMS ಮೂಲಕ ನೋಟಿಫಿಕೇಷನ್ ಸ್ವೀಕರಿಸುತ್ತಾರೆ. ಅವರ ಮತದಾರರ ಫೋಟೋ ಗುರುತಿನ ಚೀಟಿ (EPIC) ಸ್ಥಿತಿಯ ಬಗ್ಗೆ ಮತದಾರರಿಗೆ ತಿಳಿಯುತ್ತದೆ. ಈ ಉದ್ದೇಶಕ್ಕಾಗಿ, ಚುನಾವಣಾ ಆಯೋಗ ಇತ್ತೀಚೆಗೆ ಪ್ರಾರಂಭಿಸಲಾದ ECINet ವೇದಿಕೆಯಲ್ಲಿ ಮೀಸಲಾದ ಐಟಿ ಮಾಡ್ಯೂಲ್ ಅನ್ನು ಪರಿಚಯಿಸಿದೆ. ಇದು ಕೆಲಸವನ್ನು ಸುಗಮಗೊಳಿಸುವ ಮೂಲಕ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ. ಈ ಉಪಕ್ರಮವು ಡೇಟಾ ಸುರಕ್ಷತೆಯನ್ನು ಕಾಪಾಡಿಕೊಳ್ಳುವಾಗ ಸೇವಾ ವಿತರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕಳೆದ 4 ತಿಂಗಳುಗಳಲ್ಲಿ ಚುನಾವಣಾ ಆಯೋಗವು ಮತದಾರರ ಪ್ರಯೋಜನಕ್ಕಾಗಿ ವಿವಿಧ ಉಪಕ್ರಮಗಳನ್ನು ತೆಗೆದುಕೊಂಡಿದೆ.
#ECI to fast track #EPIC delivery; Electors to get EPIC within 15 days of an update in the #ElectoralRolls, including new enrolment of an elector or change in any particulars of an existing elector.
Read in detail: https://t.co/ExVWLjyRms #ECI pic.twitter.com/6REfos7qWv
— Election Commission of India (@ECISVEEP) June 18, 2025
“ಮತದಾರರಿಗೆ EPICಗಳನ್ನು ವೇಗವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಅನ್ನು ಪರಿಚಯಿಸಲಾಗಿದೆ. ಇದು ಮತದಾರರ ಹೊಸ ನೋಂದಣಿ ಅಥವಾ ಅಸ್ತಿತ್ವದಲ್ಲಿರುವ ಮತದಾರರ ಯಾವುದೇ ವಿವರಗಳಲ್ಲಿನ ಬದಲಾವಣೆ ಸೇರಿದಂತೆ ಮತದಾರರ ಪಟ್ಟಿಯಲ್ಲಿ ನವೀಕರಣಗೊಂಡ 15 ದಿನಗಳಲ್ಲಿ ಮತದಾರರ ಫೋಟೋ ಗುರುತಿನ ಚೀಟಿಗಳನ್ನು ತಲುಪಿಸಲು ಸಹಾಯ ಮಾಡಿಕೊಡುತ್ತದೆ” ಎಂದು ಚುನಾವಣಾ ಸಮಿತಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Wed, 18 June 25




