Gujarat Rains: ಗುಜರಾತ್‌ನಲ್ಲಿ ಭಾರೀ ಮಳೆಯಿಂದ 48 ಗಂಟೆಗಳಲ್ಲಿ 22 ಜನ ಸಾವು, ಎನ್ಡಿಆರ್ಎಫ್ನಿಂದ ರಕ್ಷಣಾ ಕಾರ್ಯಾಚರಣೆ
ಗುಜರಾತ್ ರಾಜ್ಯದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ರಾಜ್ಯಾದ್ಯಂತ ಧಾರಾಕಾರ ಮಳೆಯಿಂದ 48 ಗಂಟೆಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ. ಇನ್ನೂ NDRF ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಗುಜರಾತ್‌ನ ಹಲವಾರು ಜಿಲ್ಲೆಗಳಲ್ಲಿ ಮುಖ್ಯವಾಗಿ ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ತಲುಪಿದೆ ಎಂಬುದು ಖಚಿತವಾಗಿದೆ.

ಗಾಂಧಿನಗರ, ಜೂನ್ 18: ಗುಜರಾತ್‌ನ (Gujarat floods) ಬೊಟಾಡ್ ಜಿಲ್ಲೆಯಲ್ಲಿ 9 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾರು ನದಿಯಲ್ಲಿ ಕೊಚ್ಚಿ ಹೋದ ನಂತರ ಇಂದು ಒಂದೇ ದಿನದಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರು ಅಪಘಾತದಲ್ಲಿ ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಇನ್ನೂ ತೀವ್ರ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಮಂಗಳವಾರ ಗುಜರಾತ್ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 18 ಜನರು ಸಾವನ್ನಪ್ಪಿದ್ದು, ಇದೀಗ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಸೌರಾಷ್ಟ್ರ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭಾರಿ ಮಳೆಯು ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಬಲವಾದ ಪ್ರವಾಹದಿಂದ ನಿವಾಸಿಗಳು ಕೊಚ್ಚಿ ಹೋಗುತ್ತಿರುವುದನ್ನು ತೋರಿಸುವ ಆತಂಕಕಾರಿ ದೃಶ್ಯಗಳು ಕಂಡುಬರುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಧಿಕಾರಿಗಳು ಜನರನ್ನು ತುರ್ತು ಸ್ಥಳಾಂತರಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಜೀವಗಳನ್ನು ಉಳಿಸುವುದು, ಆಸ್ತಿಯನ್ನು ರಕ್ಷಿಸುವುದು ಮತ್ತು ಅಗತ್ಯ ಸಾಮಗ್ರಿಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಅಧಿಕಾರಿಗಳು ಗಮನ ಹರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಗುಜರಾತ್‌ನ ಭಾವನಗರ ಜಿಲ್ಲೆಯ ಶಾಲೆಗಳನ್ನು ಮುಚ್ಚಲಾಗಿದೆ.
ಇದನ್ನೂ ಓದಿ: ಗುಜರಾತ್: ಸಂಜೆ ಹೊತ್ತು ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಸಾವು
ಜುನಾಗಢ, ದ್ವಾರಕಾ, ಪೋರಬಂದರ್, ಅಮ್ರೇಲಿ, ರಾಜ್‌ಕೋಟ್, ಭಾವನಗರ, ಕಚ್, ವಲ್ಸಾದ್, ಗಾಂಧಿನಗರ, ಸೂರತ್ ಮತ್ತು ಪಠಾಣ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ 12 ತಂಡಗಳನ್ನು ನಿಯೋಜಿಸಲಾಗಿದೆ ಎಂದು ವಡೋದರಾದಲ್ಲಿರುವ ಎನ್‌ಡಿಆರ್‌ಎಫ್‌ನ 6ನೇ ಬೆಟಾಲಿಯನ್ ತಿಳಿಸಿದೆ. 4 ಶವಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಭಾಟಿ ದೃಢಪಡಿಸಿದ್ದಾರೆ. ಆದರೆ ಕಾಣೆಯಾದ ಮೂವರು ಪ್ರಯಾಣಿಕರಿಗಾಗಿ ಶೋಧ ಪ್ರಯತ್ನಗಳು ಮುಂದುವರೆದಿವೆ. ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಧಿಕಾರಿಗಳು NDRFಗೆ ಸಹಾಯ ಮಾಡುತ್ತಿದ್ದಾರೆ.
#Monsoon2025 #FloodRescue #18/06/25 ♦️#Team6NDRF rescued 22 citizens trapped in flood waters at Pipaliya village in Botad district of Gujarat & shifted them to a safe shelter. The rescue operation was carried out from evening till midnight yesterday@NDRFHQ@Collectorbotad@ANI pic.twitter.com/10KuohXfbG
— 06 NDRF VADODARA (@06NDRF) June 18, 2025
ಇದನ್ನೂ ಓದಿ: Ahmedabad Plane Crash: ಗುಜರಾತ್‌ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನ
ಗುಜರಾತ್‌ನಲ್ಲಿ ಹವಾಮಾನ ವೈಪರೀತ್ಯ:
ಗುಜರಾತ್‌ನಾದ್ಯಂತ ವ್ಯಾಪಕ ಹವಾಮಾನ ಸಂಬಂಧಿತ ಅಡಚಣೆಯ ನಡುವೆ ದುರಂತ ಸಂಭವಿಸಿದೆ. ಮಂಗಳವಾರ ರಾಜ್ಯಾದ್ಯಂತ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ 18 ಜನರು ಪ್ರಾಣ ಕಳೆದುಕೊಂಡರು. ಎಲ್ಲಾ ಜಿಲ್ಲೆಗಳಲ್ಲಿ NDRF ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ನಿಯೋಜಿಸಲಾಗಿದೆ. ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Wed, 18 June 25