AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಕರ್ನಾಟಕದ ಕರಾವಳಿಯಲ್ಲಿ ಮಳೆ ಜೋರು, ಉಳಿದೆಡೆ ಸಾಧಾರಣ ಮಳೆ

ಕರ್ನಾಟಕದಾದ್ಯಂತ ಜೂನ್ 24ರವರೆಗೂ ಮಳೆಯ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾಗಮಂಡಲ, ಗೇರುಸೊಪ್ಪ, ಆಗುಂಬೆ, ಸಿದ್ದಾಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಳ್ಯ, ಕಾರ್ಕಳ, ಕೋಟಾ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ, ಉಪ್ಪಿನಂಗಡಿ, ಕುಂದಾಪುರ, ಹೊನ್ನಾವರ, ಕ್ಯಾಸಲ್​​ರಾಕ್, ಉಡುಪಿ, ಮಾಣಿ, ಮಂಕಿ, ಕಮ್ಮರಡಿ, ನಾಪೋಕ್ಲು, ಜಯಪುರ, ಶೃಂಗೇರಿ, ಪೊನ್ನಂಪೇಟೆ, ಕೊಟ್ಟಿಗೆಹಾರ, ವಿರಾಜಪೇಟೆ, ಪುತ್ತೂರು, ಮಂಗಳೂರು, ಕುಮಟಾ, ಸೋಮವಾರಪೇಟೆಯಲ್ಲಿ ಮಳೆಯಾಗಿದೆ. ಪಣಂಬೂರು, ಕಾರವಾರ, ಕಳಸ, ಕೊಪ್ಪ, ಹುಂಚದಕಟ್ಟೆ, ತ್ಯಾಗರ್ತಿ, ಬನವಾಸಿ, ಲೋಂಡಾ, ಖಾನಾಪುರ್, ಮುಲ್ಕಿ, ಶಿರಾಲಿ, ಬಾಳೆಹೊನ್ನೂರು, ಎನ್​ಆರ್​ ಪುರ, ಕೋಣನೂರು, ಮುಂಡಗೋಡು, ಕಿರವತ್ತಿ, ಹಾರಂಗಿ, ಅರಕಲಗೂಡು, ಬೇಲೂರು, ಅಜ್ಜಂಪುರ, ರಾಯಚೂರು, ಲಕ್ಷ್ಮೇಶ್ವರ, ಹಾವೇರಿಯಲ್ಲಿ ಮಳೆಯಾಗಿದೆ.

Karnataka Rains: ಕರ್ನಾಟಕದ ಕರಾವಳಿಯಲ್ಲಿ ಮಳೆ ಜೋರು, ಉಳಿದೆಡೆ ಸಾಧಾರಣ ಮಳೆ
ಮಳೆ Image Credit source: PTI
ನಯನಾ ರಾಜೀವ್
|

Updated on:Jun 18, 2025 | 7:34 AM

Share

ಬೆಂಗಳೂರು, ಜೂನ್ 18: ಕರ್ನಾಟಕದ ಬಹುತೇಕ ಕಡೆ ಮುಂಗಾರು ಅಬ್ಬರ ಹೆಚ್ಚಿದೆ. ಇಂದಿನಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆ(Rain)ಯಾಗುವ ಸಾಧ್ಯತೆ ಇದೆ.ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​, ಬೆಳಗಾವಿ, ಹಾಸನ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್​​ನಲ್ಲಿ ಸಾಧಾರಣ ಮಳೆಯಾಗಲಿದೆ.

ಭಾಗಮಂಡಲ, ಗೇರುಸೊಪ್ಪ, ಆಗುಂಬೆ, ಸಿದ್ದಾಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಳ್ಯ, ಕಾರ್ಕಳ, ಕೋಟಾ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ, ಉಪ್ಪಿನಂಗಡಿ, ಕುಂದಾಪುರ, ಹೊನ್ನಾವರ, ಕ್ಯಾಸಲ್​​ರಾಕ್, ಉಡುಪಿ, ಮಾಣಿ, ಮಂಕಿ, ಕಮ್ಮರಡಿ, ನಾಪೋಕ್ಲು, ಜಯಪುರ, ಶೃಂಗೇರಿ, ಪೊನ್ನಂಪೇಟೆ, ಕೊಟ್ಟಿಗೆಹಾರ, ವಿರಾಜಪೇಟೆ, ಪುತ್ತೂರು, ಮಂಗಳೂರು, ಕುಮಟಾ, ಸೋಮವಾರಪೇಟೆಯಲ್ಲಿ ಮಳೆಯಾಗಿದೆ.

ಪಣಂಬೂರು, ಕಾರವಾರ, ಕಳಸ, ಕೊಪ್ಪ, ಹುಂಚದಕಟ್ಟೆ, ತ್ಯಾಗರ್ತಿ, ಬನವಾಸಿ, ಲೋಂಡಾ, ಖಾನಾಪುರ್, ಮುಲ್ಕಿ, ಶಿರಾಲಿ, ಬಾಳೆಹೊನ್ನೂರು, ಎನ್​ಆರ್​ ಪುರ, ಕೋಣನೂರು, ಮುಂಡಗೋಡು, ಕಿರವತ್ತಿ, ಹಾರಂಗಿ, ಅರಕಲಗೂಡು, ಬೇಲೂರು, ಅಜ್ಜಂಪುರ, ರಾಯಚೂರು, ಲಕ್ಷ್ಮೇಶ್ವರ, ಹಾವೇರಿಯಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಂಗಳವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಎಚ್​​ಎಎಲ್​​ನಲ್ಲಿ 27.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 20.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 27.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​ಪೋರ್ಟ್​​ನಲ್ಲಿ 25.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,23.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: ಕರ್ನಾಟಕದ ಕರಾವಳಿ ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆ

ಬೆಳಗಾವಿಯಲ್ಲಿ 25.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್​​ನಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 31.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರವಾಡದಲ್ಲಿ26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 31.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 25.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 29.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:33 am, Wed, 18 June 25

Follow Us
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?