AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ… ಆಟಗಾರರ ನಡುವೆ ಮಾತಿನ ಚಕಮಕಿ

Ranji Trophy Final 2026: ರಣಜಿ ಟ್ರೋಫಿ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮುಂಬೈ ತಂಡ. ಮುಂಬೈ 42 ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಕರ್ನಾಟಕ. ಕರುನಾಡ ಪಡೆ ಈವರೆಗೆ 8 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ 9ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಕನಸು ಬಹುತೇಕ ಕಮರಿದೆ.

ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ... ಆಟಗಾರರ ನಡುವೆ ಮಾತಿನ ಚಕಮಕಿ
Vyshak And Qamran
ಝಾಹಿರ್ ಯೂಸುಫ್
|

Updated on: Feb 28, 2026 | 9:53 AM

Share

ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಆಟಗಾರರ ನಡುವೆ ಮಾತಿನ ಚಕಮಕಿ ಮುಂದುವರೆದಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಪರಸ್ ಡೋಗ್ರಾ ಹಾಗೂ ಕೆವಿ ಅನೀಶ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ಕರ್ನಾಟಕ ವೇಗಿ ವೈಶಾಕ್ ವಿಜಯಕುಮಾರ್ ಹಾಗೂ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ನಾಲ್ಕನೇ ದಿನದಾಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡನೇ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ವೈಶಾಕ್ ವಿಜಯಕುಮಾರ್ ಎಸೆದ ಬೌನ್ಸರ್ ಎಸೆದಿದ್ದರು. ಈ ಎಸೆತಕ್ಕೆ ಪ್ರತ್ಯುತ್ತರ ನೀಡಲು ಖಮ್ರಾನ್​ಗೆ ಸಾಧ್ಯವಾಗಿರಲಿಲ್ಲ. ಈ ವೇಳೆ ವೈಶಾಕ್ ಸ್ಟ್ರೈಕರ್​ನತ್ತ ಗುರಾಯಿಸುವ ಮೂಲಕ ಕೆಣಕಿದ್ದರು.

ಈ ವೇಳೆ ಖಮ್ರಾನ್ ಇಕ್ಬಾಲ್  “ಹೋಗಿ ಬೌಲಿಂಗ್ ಮಾಡು” ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದಾಗ್ಯೂ ವೈಶಾಕ್ ವಿಜಯಕುಮಾರ್ ಗುರಾಯಿಸುವಿಕೆ ಮುಂದುವರೆಸಿದ್ದರು. ಈ ವೇಳೆ ಖಮ್ರಾನ್ ಇಕ್ಬಾಲ್, ನೀನು ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ, ಅಷ್ಟೊಂದು ನಿಧಾನವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ವೈಶಾಕ್ ಮತ್ತಷ್ಟು ವೇಗದಲ್ಲಿ ಚೆಂಡೆಸೆದರು ಆದರೆ ಈ ಎಸೆತದಲ್ಲಿ ಇಕ್ಬಾಲ್ ಅದ್ಭುತವಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ತಿರುಗೇಟು ನೀಡಿದರು.

ಇದಾದ ಬಳಿಕ ಕೂಡ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಂಪೈರ್ ರೋಹನ್ ಪಂಡಿತ್ ಅವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ಇನ್ನು ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವು ಗೆಲುವಿನತ್ತ ದಾಪುಗಾಲಿಟ್ಟಿದೆ. ಮೊದಲ ಇನಿಂಗ್ಸ್​ನಲ್ಲಿ 584 ರನ್​ ಪೇರಿಸಿದ್ದ ಕಾಶ್ಮೀರಿ ಪಡೆ ಕರ್ನಾಟಕ ತಂಡವನ್ನು ಕೇವಲ 293 ರನ್​ಗಳಿಗೆ ಆಲೌಟ್ ಮಾಡಿದ್ದರು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಇದಾಗ್ಯೂ ಫಾಲೋ ಆನ್ ಹೇರದೆ ಜಮ್ಮು-ಕಾಶ್ಮೀರ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ನಾಲ್ಕನೇ ದಿನದಾಟದ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 186 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಖಮ್ರಾನ್ ಇಕ್ಬಾಲ್ ಹಾಗೂ ಸಾಹಿಲ್ ಲೋಟ್ರ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಇದನ್ನೂ ಓದಿ: 12.4, 13.2, 13.5: ಹೀಗಿದೆ ಪಾಕಿಸ್ತಾನ್ ತಂಡದ ಸೆಮಿಫೈನಲ್ ಲೆಕ್ಕಾಚಾರ

ಇದೀಗ ಐದನೇ ದಿನದಾಟವು ನಡೆಯುತ್ತಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಕೊನೆಗೊಳ್ಳುವುದು ಖಚಿತ. ಹೀಗಾಗಿ ಮೊದಲ ಇನಿಂಗ್ಸ್ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡವು ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ