AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ

Karnataka vs Jammu and Kashmir: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.

6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ
Ranji Final
ಝಾಹಿರ್ ಯೂಸುಫ್
|

Updated on:Feb 26, 2026 | 2:21 PM

Share

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 584 ರನ್​ ಕಲೆಹಾಕಿದೆ. ಇದೀಗ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಶುರು ಮಾಡಿದ್ದು, 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

ಫೆ.26 ರಂದು ಮೂರನೇ ದಿನದಾಟ ಚಾಲ್ತಿಯಲ್ಲಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭಿಕ ಆಘಾತಕ್ಕೆ ಒಳಗಾಗಿರುವ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲು ಇನ್ನೆರಡು ದಿನಗಳವರೆಗೆ ಬ್ಯಾಟಿಂಗ್ ಮುಂದುವರೆಸಲು ಪ್ಲ್ಯಾನ್ ರೂಪಿಸಲಿದ್ದಾರೆ.

ಒಂದು ವೇಳೆ ಕರ್ನಾಟಕ ತಂಡವು ಪಂದ್ಯದ ಕೊನೆಯ ದಿನದಾಟದವರೆಗೆ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಉಳಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ರಣಜಿ ಟೂರ್ನಿಯ ಫೈನಲ್​ನಲ್ಲಿ ಫಲಿತಾಂಶ ನಿರ್ಧರಿಸಲು ಎರಡು ತಂಡಗಳ ಮೊದಲು ಇನಿಂಗ್ಸ್ ಪೂರ್ಣಗೊಂಡಿರಬೇಕು.

ಒಂದು ವೇಳೆ 2ನೇ ಬ್ಯಾಟಿಂಗ್ ಆಡಿದ ತಂಡವು ಮೊದಲ ಇನಿಂಗ್ಸ್ ಪೂರ್ಣಗೊಳಿಸದೇ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಂದ್ಯದ ಅವಧಿ: ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಸಾಮಾನ್ಯವಾಗಿ 5 ದಿನಗಳವರೆಗೆ ನಡೆಯುತ್ತವೆ.
  • 6ನೇ ದಿನದ ಬಳಕೆ: ಒಂದು ವೇಳೆ ಮೊದಲ 5 ದಿನಗಳಲ್ಲಿ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಪಂದ್ಯದ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಆಗ 6ನೇ ದಿನವನ್ನು ಬಳಸಲಾಗುತ್ತದೆ.
  • ವಿಜೇತರ ನಿರ್ಧಾರ: ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಉದಾಹರಣೆಗೆ: ಕರ್ನಾಟಕ ತಂಡವು ಇದೀಗ ಮೊದಲ ಇನಿಂಗ್ಸ್ ಆಡುತ್ತಿದೆ. ಭಾನುವಾರದೊಳಗೆ ಜಮ್ಮು-ಕಾಶ್ಮೀರ ತಂಡಕ್ಕೆ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಆರನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಮೊದಲ ಇನಿಂಗ್ಸ್​ ಪೂರ್ಣಗೊಳಿಸಲೆಂದೇ ಇಂತಹದೊಂದು ನಿಯಮ ರೂಪಿಸಲಾಗಿದೆ. ಅಂದರೆ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಂಡರೆ ಒಂದು ತಂಡದ ಇನಿಂಗ್ಸ್​ನಲ್ಲಿ ಮುನ್ನಡೆ ಕಂಡು ಬರಲಿದೆ. ಹೀಗೆ ಮೊದಲ ಇನಿಂಗ್ಸ್ ಪೂರ್ಣಗೊಂಡಿದ್ದರೆ ಪ್ರಥಮ ಇನಿಂಗ್ಸ್​ನಲ್ಲಿ ಮುನ್ನಡೆ ಹೊಂದಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ರಣಜಿ ಟ್ರೋಫಿ ಫೈನಲ್ ‘ಡ್ರಾ’ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ಅಥವಾ ಆರು ದಿನಗಳ ಆಟದ ನಂತರವೂ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ 584 ರನ್ ಗಳಿಸಿದೆ. ಕರ್ನಾಟಕ ಈ ಮೊತ್ತವನ್ನು ದಾಟಿದರೆ ಮಾತ್ರ ಮುನ್ನಡೆಯ ಆಧಾರದ ಮೇಲೆ ಗೆಲ್ಲಲು ಸಾಧ್ಯ.
  • ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ: ಒಂದು ವೇಳೆ ಮಳೆ ಅಥವಾ ಇತರ ಕಾರಣಗಳಿಂದ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಅಂದರೆ ಕರ್ನಾಟಕ ತಂಡ  ತನ್ನ ಮೊದಲ ಇನಿಂಗ್ಸ್ ಮುಗಿಸುವ ಮೊದಲೇ ಪಂದ್ಯ ಅಂತ್ಯವಾದರೆ ಆಗ ಲೀಗ್ ಹಂತದ ಅಂಕಗಳನ್ನು ಪರಿಗಣಿಸಲಾಗುತ್ತದೆ.
  • ಲೀಗ್ ಹಂತದ ಅಂಕಗಳು ಸಮ: ಒಂದು ವೇಳೆ ಉಭಯ ತಂಡಗಳ ಲೀಗ್ ಹಂತದ ಅಂಕಗಳು ಸಮವಾಗಿದ್ದರೆ, ಈ ವೇಳೆ ಯಾವ ತಂಡಕ್ಕೆ ಹೆಚ್ಚು ಬೋನಸ್ ಅಂಕ ಸಿಕ್ಕಿದೆ ಎಂದು ನೋಡಲಾಗುತ್ತದೆ.
  • ಬೋನಸ್ ಅಂಕಗಳು ಸಮ: ಲೀಗ್ ಅಂಕಗಳು ಮತ್ತು  ಬೋನಸ್ ಅಂಕಗಳು ಸಮವಾಗಿದ್ದರೆ ಲೀಗ್ ಹಂತದಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ತಂಡ ಯಾವುದೆಂದು ನೋಡಲಾಗುತ್ತದೆ.
  • ಹೆಚ್ಚಿನ ಗೆಲುವುಗಳು ಸಮ: ಇನ್ನು ಲೀಗ್ ಹಂತದಲ್ಲಿ ಉಭಯ ತಂಡಗಳು ಸಮಾನವಾದ ಗೆಲುವು ದಾಖಲಿಸಿದ್ದರೆ ಕ್ವೋಶಿಯಂಟ್​​ನ ಮೊರೆ ಹೋಗಲಾಗುತ್ತದೆ.
  • ಕ್ವೋಶಿಯಂಟ್: ಲೀಗ್ ಹಂತದಲ್ಲಿ ಎರಡು ತಂಡಗಳ ಗೆಲುವುಗಳ ಸಂಖ್ಯೆಯೂ ಸಮನಾಗಿದ್ದರೆ, ಇಡೀ ಟೂರ್ನಿಯಲ್ಲಿ ತಂಡಗಳ ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ. ಈ ವೇಳೆ ಯಾವ ತಂಡದ ಕ್ವೋಶಿಯಂಟ್ ಹೆಚ್ಚಿರುತ್ತದೋ ಅವರೇ ಚಾಂಪಿಯನ್. ಕ್ವೋಶಿಯಂಟ್ ಎಂದರೆ- (ತಂಡದ ಒಟ್ಟು ರನ್ / ಒಟ್ಟು ವಿಕೆಟ್ ಪತನ) ÷ (ಎದುರಾಳಿ ತಂಡದ ಒಟ್ಟು ರನ್ / ಎದುರಾಳಿಯ ಒಟ್ಟು ವಿಕೆಟ್ ಪತನ)
  • ಕ್ವೋಶಿಯಂಟ್ ಸಮ: ಕ್ವೋಶಿಯಂಟ್ ಲೆಕ್ಕಾಚಾರ ಕೂಡ ಸಮವಾಗಿದ್ದರೆ ಪ್ರತಿ ವಿಕೆಟ್‌ಗೆ ಗಳಿಸಿದ ರನ್‌ಗಳ ಸರಾಸರಿಯನ್ನು ನೋಡಲಾಗುತ್ತದೆ. ಈ ವೇಳೆ ಯಾರು ಮುಂದಿರುತ್ತಾರೋ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
  • ಜಂಟಿ ವಿಜೇತರು: ಮೇಲೆ ತಿಳಿಸಿದ ಎಲ್ಲಾ ಮಾನದಂಡಗಳಲ್ಲೂ (Points, Wins, Quotient) ಉಭಯ ತಂಡಗಳು ಸಮಬಲ ಸಾಧಿಸಿದರೆ ಮಾತ್ರ, ರಣಜಿ ಟ್ರೋಫಿಯನ್ನು ಉಭಯ ತಂಡಗಳಿಗೆ ಹಂಚಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: IND vs ZIM: ಪಂದ್ಯ ಗೆಲ್ಲಲು ‘ಕೆಮಿಕಲ್’ ಮೊರೆ ಹೋದ ಟೀಮ್ ಇಂಡಿಯಾ?

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್​ ಐದನೇ ದಿನದಾಟದ ಮೊದಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಐದನೇ ದಿನದಾಟದ ಅಂತ್ಯದೊಳಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಇದ್ದರೆ ಮಾತ್ರ ಪಂದ್ಯವನ್ನು 6ನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಹೀಗಾಗಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಣ ಪಂದ್ಯದಲ್ಲಿ ಫಲಿತಾಂಶವನ್ನು ಎದುರು ನೋಡಬಹುದು.

Published On - 2:09 pm, Thu, 26 February 26

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ