‘ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ’: ನಾಗಶೇಖರ್ ಗರಂ
‘ಡಿಂಪಲ್ ಕ್ವೀನ್’ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರ ಗರಂ ಆಗಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗಶೇಖರ್ ಅವರು ಹೇಳಿದ್ದಾರೆ.
ನಟಿ ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ವಿವಾದಕ್ಕೆ ಕಾರಣ ಆಗಿದೆ. ಆದ್ದರಿಂದ ರಚಿತಾ ರಾಮ್ (Rachita Ram) ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸುದೀಪ್, ದರ್ಶನ್, ನಾಗಾರ್ಜುನ, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ದೊಡ್ಡ ಕಲಾವಿದರು ಪ್ರಚಾರ ಮಾಡುತ್ತಾರೆ. ರಶ್ಮಿಕಾ ಮಂದಣ್ಣ (Rashmika Mandanna) ಕಾಲು ಪೆಟ್ಟಾಗಿದ್ದರೂ ಕೂಡ ಬಂದು ಪ್ರಮೋಷನ್ ಮಾಡುತ್ತಾರೆ. ಈ ಕಾಲಘಟ್ಟದಲ್ಲಿ ರಚಿತಾ ರಾಮ್ 3 ದಿನ ಬಿಡುವು ಮಾಡಿಕೊಂಡು ನಮ್ಮ ಸಿನಿಮಾದ ಪ್ರಚಾರಕ್ಕೆ ಬರಬಹುದಿತ್ತು’ ಎಂದು ನಾಗಶೇಖರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos