ಬೆಳಗಾವಿ: ಕಾರ್ ಮೇಲೆ ಉರುಳಿ ಬಿದ್ದ ಭಾರೀ ಗಾತ್ರದ ಮರ, ದೂಷಣೆ ಧಾರಾಕಾರವಾಗಿ ಸುರಿದ ಮಳೆಗೆ
ಕಾರಿನ ಮೇಲೆ ಉರುಳಿ ಬಿದ್ದ ಮರವನ್ನು ತೆಗೆಯಲು ಮಷೀನ್ ಚಾಲಿತ ಗರಗಸವನ್ನು ಉಪಯೋಗಿಸಲಾಗುತ್ತಿದೆ. ಮರ ನಿಸ್ಸಂದೇಹವಾಗಿ ಭಾರಿ ಗಾತ್ರದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕಾರಿನ ಸ್ಥಿತಿ ನೋಡಿ ಅಯ್ಯೋ ಅನಿಸುತ್ತದೆ. ಕಾರಿನ ಮಾಲೀಕರಿಗಾದರೂ ಹೀಗೆ ಸಂಭವಿಸಬಹುದು ಅನ್ನೋದು ಹೇಗೆ ಗೊತ್ತಾದೀತು. ಅವರು ಅಪಾಯಕ್ಕೀಡಾಗುದಿರುವುದೇ ದೊಡ್ಡ ಸಂಗತಿ.
ಬೆಳಗಾವಿ, ಜೂನ್ 18: ಮಳೆಗಾಲದಲ್ಲಿ ಭಾರೀ ಮಳೆಗೆ ಭಾರೀ ಗಾತ್ರದ ಮರಗಳು ಉರುಳಿ ವಾಹನಗಳ ಮೇಲೆ ಬೀಳುವುದು ಅದನ್ನು ಜಖಂಗೊಳಿಸುವುದು ಕೇವಲ ಬೆಂಗಳೂರಲ್ಲಿ (Bengaluru) ನಡೆಯುವ ವಿದ್ಯಮಾನವೇನೂ ಅಲ್ಲ, ಬೆಳಗಾವಿಯಲ್ಲೂ ನಡೆಯುತ್ತವೆ. ಇಲ್ಲಿ ನೋಡಿ, ನಗರದ ಒಂದು ಭಾಗದಲ್ಲಿ ಪಾರ್ಕ್ ಮಾಡಿದ್ದ ಕಾರೊಂದರ ಮೇಲೆ ಮರ ಉರುಳಿಬಿದ್ದು ವಾಹನ ನಜ್ಜುಗುಜ್ಜಾಗಿದೆ. ಕಾರನ್ನು ಗ್ಯಾರೇಜ್ ಒಯ್ದರೂ ಸರಿಯಾಗದಷ್ಟು ಜಖಂಗೊಂಡಿದೆ. ಅದೃಷ್ಟವಶಾತ್ ದುರ್ಘಟನೆ ನಡೆದಾಗ ಕಾರಲ್ಲಿ ಯಾರೂ ಇರಲಿಲ್ಲ.
ಇದನ್ನೂ ಓದಿ: ಮೈಸೂರು: ಮಳೆಯಿಂದಾಗಿ ಮರ ಉರುಳಿ ಬಿದ್ದು ಆಟೋ ಚಾಲಕ ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ