‘ಥಗ್ ಲೈಫ್’ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇವೆ: ಪ್ರವೀಣ್ ಶೆಟ್ಟಿ
‘ಕನ್ನಡ ಚಿತ್ರರಂಗದ ಅಳಿವು-ಉಳಿವಿನ ಪ್ರಶ್ನೆ ಇದು. ಹಾಗೆಯೇ ಕನ್ನಡ ಹೋರಾಟದ ಅಳಿವು ಉಳಿವಿನ ಪ್ರಶ್ನೆ ಉದ್ಭವ ಆಗಿದೆ ಎಂದರೂ ತಪ್ಪಾಗಲ್ಲ’ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ‘ಥಗ್ ಲೈಫ್ ಸಿನಿಮಾದ ಬಿಡುಗಡೆಗೆ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರವೀಣ್ ಶೆಟ್ಟಿ ಅವರು ಈ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ‘ಥಗ್ ಲೈಫ್’ (Thug Life) ರಿಲೀಸ್ ಮಾಡಲು ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ‘ಥಗ್ ಲೈಫ್ ಸಿನಿಮಾವನ್ನು ತಡೆಯಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ನಾವು ಇನ್ನೂ ಮಾಡಿಲ್ಲ. ಅದಕ್ಕೂ ಮೊದಲೇ ರಾತ್ರಿಯಿಂದ ಪೊಲೀಸರು ನಮ್ಮ ಮನೆ ಬಳಿ ಬಂದು ಹೋಗಿದ್ದಾರೆ. ಕಾನೂನಿನಲ್ಲಿ ನಮಗೆ ಸ್ವಾತಂತ್ರ್ಯ ಇಲ್ಲವೇ ಎಂಬ ಪ್ರಶ್ನೆಯನ್ನು ನಾವು ಹಾಕಬೇಕಾಗುತ್ತದೆ. ನಾನು ಕನ್ನಡಿಗರಲ್ಲಿ, ಕನ್ನಡಪರ ಹೋರಾಟಗಾರರಲ್ಲಿ ಮನವಿ ಮಾಡುತ್ತೇನೆ. ಎಲ್ಲರೂ ಥಗ್ ಲೈಫ್ ಸಿನಿಮಾವನ್ನು ಬಹಿಷ್ಕಾರ ಮಾಡಿದ್ದಾರೆ. ಒಂದು ವೇಳೆ ಬಿಡುಗಡೆ ಆದರೆ ಎಲ್ಲ ಕನ್ನಡಪರ ಹೋರಾಟಗಾರರು ಟಿಕೆಟ್ ಪಡೆದು ಸಿನಿಮಾ ನೋಡುತ್ತೇವೆ’ ಎಂದು ಪ್ರವೀಣ್ ಶೆಟ್ಟಿ (Praveen Shetty) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.