ಕೆಎನ್ ರಾಜಣ್ಣಗೆ ಅಮೃತಮಹೋತ್ಸವ ಜನ್ಮದಿನ, ಭರ್ಜರಿ ಆಚರಣೆಗೆ ಮಗ ರಾಜೇಂದ್ರ ಉಸ್ತುವಾರಿಯಲ್ಲಿ ಸಿದ್ಧತೆ!
ರಾಜಣ್ಣ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಂದೆಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಿದ್ಧತೆಗಳ ಉಸ್ತುವಾರಿ ವಹಿಸಿಕೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೆಲದಿನಗಳ ಹಿಂದೆ ರಾಜಣ್ಣ ಮತ್ತು ರಾಜೇಂದ್ರ ಇಬ್ಬರೂ ಸುದ್ದಿಯಲ್ಲಿದ್ದರು. ರಾಜಣ್ಣ ತಮ್ಮನ್ನು ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಅಂತ ಆರೋಪಿಸಿದರೆ ರಾಜೇಂದ್ರ ತನ್ನ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದಿದ್ದರು.
ತುಮಕೂರು, ಜೂನ್ 18: ಕ್ಯಾತಸಂದ್ರ ನಂಜಪ್ಪ ರಾಜಣ್ಣ ರಾಜ್ಯದಲ್ಲಿ ಕೆಎನ್ ರಾಜಣ್ಣ ಎಂದೇ ಜನಪ್ರಿಯರು. ಹಾಗೆ ನೋಡಿದರೆ ಅವರ ಹುಟ್ಟುಹಬ್ಬ ಏಪ್ರಿಲ್ 13ರಂದೇ ನೆರವೇರಿದೆ. ಅದರೆ, ಅಮೃತ ಮಹೋತ್ಸವ ಜನ್ಮದಿನವನ್ನು (platinum jubilee) ಜೂನ್ 21 ನಗರದ ಬಿಹೆಚ್ ರಸ್ತೆಯಲ್ಲಿರುವ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಸಿದ್ಧತೆಗಳು ಯದ್ಧೋಪಾದಿಯಲ್ಲಿ ನಡೆಯುತ್ತಿವೆ. ರಾಜಣ್ಣ ಬರ್ತ್ಡೇ ಜೊತೆ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಸಹ ಇಟ್ಟುಕೊಳ್ಳಲಾಗಿದೆ ಎಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ. ಸುಮಾರು 45,000 ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆಯಂತೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ರನ್ನು ಭೇಟಿಯಾಗಿ ಕುತೂಹಲ ಕೆರಳುವಂತೆ ಮಾಡಿದ ಎಮ್ಮೆಲ್ಸಿ ರಾಜೇಂದ್ರ ರಾಜಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
