ರಿಹ್ಯಾಬ್ ಸೆಂಟರ್ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ: ವ್ಯಸನಿಗಳಲ್ಲದವರು ಪತ್ತೆ
ಬೆಂಗಳೂರಿನ ಐದು ಖಾಸಗಿ ಪುನರ್ವಸತಿ ಕೇಂದ್ರಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದೆ. ದಾಳಿಯಲ್ಲಿ ವ್ಯಸನಿಗಳಲ್ಲದವರನ್ನು ಇರಿಸಿಕೊಳ್ಳುವುದು, ದೈಹಿಕ ಹಿಂಸೆ, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನಿಯಮಾವಳಿ ಉಲ್ಲಂಘನೆಗಳು ಬಯಲಾಗಿದೆ. ಆಯೋಗ ವರದಿ ಸಿದ್ಧಪಡಿಸುತ್ತಿದೆ. ಈ ಘಟನೆಯಿಂದ ಪುನರ್ವಸತಿ ಕೇಂದ್ರಗಳಲ್ಲಿನ ಅಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ ಐದು ಖಾಸಗಿ ಪುನರ್ವಸತಿ ಕೇಂದ್ರ (Rehab Center)ಗಳ ಮೇಲೆ
ಮಾನವ ಹಕ್ಕುಗಳ ಆಯೋಗ (Human Rights Commission) ದಾಳಿ ಮಾಡಿದೆ. ಮಾಕಳಿ ಮುಖ್ಯ ರಸ್ತೆಯಲ್ಲಿನ ಯೂನಿಟಿ ಸೋಷಿಯಲ್ ಸರ್ವೀಸ್ ಸೊಸೈಟಿ, ಚಿಕ್ಕಬಾಣವರದ ಕೆಂಪಾಪುರದಲ್ಲಿರುವ ಸಂಜೀವಿನಿ ಟ್ರಸ್ಟ್, ದಾಸನಪುರದಲ್ಲಿರುವ ಬೆಳಕು ಸೋಶಿಯಲ್ ಸರ್ವಿಸ್ ಸೊಸೈಟಿ, ಮದರ್ ಅಮ್ಮು ಫೌಂಡೇಶನ್ ಮತ್ತು ಮಾಗಡಿ ಮುಖ್ಯ ರಸ್ತೆ ಬಳಿ ಇರುವ ಗುಡ್ ಲೈಫ್ ಟ್ರಸ್ಟ್ಗಳ ಮೇಲೆ ಮಾನವ ಹಕ್ಕುಗಳ ಆಯೋಗದ ಎಡಿಜಿಪಿ ದೇವಜ್ಯೋತಿ ರೇ, ಡಿವೈಎಸ್ಪಿಗಳಾದ ಸುಧೀರ್ ಹೆಗ್ಡೆ, ಮೋಹನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ದಾಳಿ ವೇಳೆ ಕೆಲವು ಪುನರ್ವಸತಿ ಕೇಂದ್ರಗಳಲ್ಲಿ ವ್ಯಸನಿಗಳಲ್ಲದವರನ್ನು ಇಟ್ಟುಕೊಂಡಿರುವುದು, ದೈಹಿಕವಾಗಿ ಹಿಂಸೆ ನೀಡುವುದು, ಮೂಲಭೂತ ಸೌಕರ್ಯ, ಮೆಡಿಕಲ್ ಕಿಟ್ ಇಲ್ಲದೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಪುನರ್ವಸತಿ ಕೇಂದ್ರಗಳ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಾನವ ಹಕ್ಕುಗಳ ಆಯೋಗ ವರದಿ ಸಿದ್ದಪಡಿಸಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ