ಬೆಂಗಳೂರಿನ ಮೆಟ್ರೋ ಸ್ಟೇಶನ್ಗಳಲ್ಲಿ ಅಮುಲ್ ಡೈರಿ ಉತ್ಪನ್ನಗಳ ಕಿಯಾಸ್ಕ್ ಇವೆ, ನಂದಿನಿ ಕಿಯಾಸ್ಕ್ ಇಲ್ಲ
ಬಿಎಂಅರ್ಸಿಎಲ್ ಅಧಿಕಾರಿಗಳು ನೀಡುವ ವಿವರಣೆ ಪ್ರಕಾರ ಟೆಂಡರ್ ಪ್ರಕ್ರಿಯೆ ಮೂಲಕ ಅಮುಲ್ ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ, ನಂದಿನಿ ಅದರಲ್ಲಿ ಭಾಗಿಯಾಗಿರಲಿಲ್ಲ. ಅಮುಲ್ ಅತಿ ಹೆಚ್ಚು ಬಿಡ್ಡಿಂಗ್ ಮೊತ್ತ ನಮೂದಿಸಿರುವುದರಿಂದ ಅದಕ್ಕೆ 5 ವರ್ಷಗಳ ಅವಧಿಗೆ ಮಾಸಿಕ 7 ಲಕ್ಷ ರೂ. ಬಾಡಿಗೆಯಂತೆ ಒಟ್ಟು 10 ಕಿಯಾಸ್ಕ್ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ.
ಬೆಂಗಳೂರು, ಜೂನ್ 18 : ಅಮುಲ್ ಮತ್ತು ನಂದಿನಿ ಡೈರಿ ಉತ್ಪನ್ನ ಸಂಸ್ಥೆಗಳ ನಡುವಿನ ಜಗಳ ಬೆಳೆಯುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ನಗರದ ಹತ್ತು ಮೆಟ್ರೋ ಸ್ಟೇಶನ್ಗಳಲ್ಲಿ ಕಿಯಾಸ್ಕ್ ಓಪನ್ ಮಾಡಲು ಬಿಎಂಅರ್ಸಿಎಲ್ (BMRCL) ಈಗಾಗಲೇ ಅಮುಲ್ ಸಂಸ್ಥೆಗೆ ಅನುಮತಿಯನ್ನು ನೀಡಿದೆ ಮತ್ತು ನಮ್ಮ ವರದಿಗಾರ ವಿವೇಕಾನಂದ ಮೆಟ್ರೋ ಸ್ಟೇಶನ್ ನಿಂದ ವರದಿ ಮಾಡುತ್ತಿದ್ದಾರೆ. ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ರೈತರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಜೆಡಿಎಸ್ ಮುಖಂಡರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ, ನಮ್ಮದೇ ನಂದಿನಿ ಇರುವಾಗ ಗುಜರಾತ್ ಮೂಲದ ಅಮುಲ್ ಗೆ ಯಾಕೆ ಮಣೆಹಾಕಿದ್ದು ಎಂದು ಪ್ರಶ್ನಿಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ, ಅಮುಲ್ ಸಂಸ್ಥೆಗೆ ಪರವಾನಗಿ ನೀಡಿದ್ದನ್ನು ಕಾಂಗ್ರೆಸ್ ಉಗ್ರವಾಗಿ ವಿರೋಧಿಸಿತ್ತು, ಈಗ್ಯಾಕೆ ಅದಕ್ಕೆ ಅವಕಾಶ ಎಂದು ಜೆಡಿಎಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಅಮುಲ್, ಮದರ್ ಡೈರಿಗೆ ಪೈಪೋಟಿ ನೀಡಲು ದೆಹಲಿ ಮಾರುಕಟ್ಟೆಗೂ ಲಗ್ಗೆಯಿಡಲಿದೆ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ