AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಗುರುವಾರ ಆತ್ಮೀಯರ ಸಹಾಯ, ಕಾರ್ಯದ ಗಣನೆ, ಗೊತ್ತಿಲ್ಲದ ನಿಮ್ಮ ವಿದ್ಯಮಾನ, ತಪ್ಪಿದ ಶಿಕ್ಷೆ ಇವೆಲ್ಲ ಈ ದಿನ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ
ಜೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 19, 2025 | 6:23 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಬ್ರಹ್ಮ, ಕರಣ: ಕೌಲವ, ಸೂರ್ಯೋದಯ – 06 : 05 am, ಸೂರ್ಯಾಸ್ತ – 07 : 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:11 – 15:48, ಯಮಘಂಡ ಕಾಲ 06:06 – 07:43, ಗುಳಿಕ ಕಾಲ 09:20 – 10:57

ತುಲಾ ರಾಶಿ: ಏಕಾಂಗಿಯಾಗಿ ಸಣ್ಣ ಉದ್ಯಮವನ್ನು ಆರಂಭಿಸುವಿರಿ. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ನಿಮ್ಮ ಪ್ರಯತ್ನಗಳು ಬದಲಾಗಲಿ. ಕುಟುಂಬದಲ್ಲಿ ಮನಸ್ತಾಪವು ಸ್ಫೋಟವಾಗಲಿದೆ. ಸಂಧಾನದ ಸಮಾಲೋಚನೆಗಳು ಫಲ ನೀಡದೇ ಹೋಗಬಹುದು. ನಿಮ್ಮ ಮಾನಸಿಕ ಹಿತಕ್ಕಾಗಿ ಕೆಲಸ ಕೆಲಸ ಮಾಡುವಿರಿ. ಕೆಲಸಗಳಲ್ಲಿ ವಿಶಿಷ್ಟ ಯಶಸ್ಸುಗಳು ಸಂಭವಿಸಬಹುದು. ಆದರೆ, ಕೆಲಸದ ಒತ್ತಡ ಜಾಸ್ತಿಯಾಗಬಹುದು. ಹಣದ ವ್ಯವಹಾರಗಳಲ್ಲಿ ನಿರ್ಣಯ ದೃಢವಾಗಿರಲಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ನಿಲುವನ್ನು ಬದಲಾಯಿಸಬೇಡಿ. ನಿಮಗೆ ಖುಷಿ ಎನಿಸಿದ್ದನ್ನು ಬೇರೆಯವರಿಗೆ ನೋವಾಗದಂತೆ ಮಾಡಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ಹೊಣೆಗಾರಿಕೆ ತಪ್ಪಬಹುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.

ವೃಶ್ಚಿಕ ರಾಶಿ: ಎಲ್ಲವೂ ಸಮಯಕ್ಕೆ ಸರಿಯಾಗಿ ಆಗುತ್ತಿದೆ ಎಂದರೆ ಎಲ್ಲಿಯೋ ಅಪಘಾತದ ಸೂಚನೆ. ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ‌. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ನಿರುತ್ಸಾಹದ ಮಾತಿಗೆ ಕಿವಿಯಾಗದೇ ಇದ್ದರೆ ಒಳ್ಳೆಯದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಯೋಜನೆಯಂತೆ ಕೆಲಸವು ಯಶಸ್ವಿಯಾಗುತ್ತದೆ. ಸಹೋದರರಿಂದ ಬೆಂಬಲ ಸಿಗುತ್ತದೆ. ನಿಮ್ಮ ವಿರೋಧಿಗಳ ಮೇಲೆ ನೀವು ವಿಜಯಶಾಲಿಯಾಗುತ್ತೀರಿ. ಇಂದು ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ಕಾರ್ಯದಲ್ಲಿ ವೇಗವಿಲ್ಲದೇ ನಿಧನಾವಾಗುವುದು. ಬಂಧುಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಬೇಸರವಾಗಿ ಎಲ್ಲವೂ ಅಶಾಶ್ವತ ಎಂದೆನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.‌ ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ನಿಮ್ಮ ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ.

ಧನು ರಾಶಿ: ಕ್ಷಮೆ ಕೇಳುವ ಮೂಲಕ ವಿಶ್ವಾಸ ಸಂಪಾದನೆ ಮಾಡುವಿರಿ. ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಮನೆಗೆ ಖರ್ಚು ಮಾಡುವಾಗ ನಿಮ್ಮ ಆರ್ಥಿಕ‌ಸ್ಥಿತಿಯನ್ನೂ ಗಮನಿಸಿ. ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಇಂದಿನ‌ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾಗಬಹುದು.‌ ನಿಮ್ಮ ಕಾರ್ಯಕ್ಷಮತೆ ಇತರರನ್ನು ಪ್ರಭಾವಿತ ಮಾಡುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ಪರಿಸ್ಥಿತಿ ಸಮೃದ್ಧವಾಗಬಹುದು. ವಾಹನ ಚಾಲನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು ಉತ್ತಮ. ನಿಮ್ಮ ನಿರ್ಧಾರಗಳು ನಿಮ್ಮ ಭವಿಷ್ಯ ರೂಪಿಸುತ್ತದೆ. ಮಕ್ಕಳು ನಿಮಗೆ ಸಂತೋಷವನ್ನು ಕೊಡುವರು. ಅವರ ಜೊತೆ ಸಮಯವನ್ನು ಕಳೆಯಿರಿ. ಅತಿಯಾದ ಆಸೆಬುರುಕುತನ ಒಳ್ಳೆಯದಲ್ಲ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಖರ್ಚಿನ ಬಗ್ಗೆ ಅಂದಾಜು ಇಲ್ಲದೇ ಕಾರ್ಯವನ್ನು ಒಪ್ಪಿಕೊಳ್ಳುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು.

ಮಕರ ರಾಶಿ: ಒತ್ತಡವನ್ನು ನಿಭಾಯಿಸುವ ಪ್ರಯತ್ನ ಪೂರ್ಣ ಸಫಲವಾಗದು. ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಇನ್ನೊಬ್ಬರನ್ನು ನಿಂದಿಸುವುದು ಬೇಡ. ಅವರೇ ಕರ್ಮದ ಫಲವನ್ನು ಉಣ್ಣುವರು. ನೀವಾಡುವ ಮಾತುಗಳು ನಿಮಗೆ ಖುಷಿ ಕೊಡಬಹುದು. ಇಂದು ನಿಮಗೆ ಸಿಗುವ ಬೆಂಬಲ ಇಲ್ಲವಾಗುವುದು. ಕೆಲಸದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಪ್ರಯಾಣ ಯೋಚನೆ ಇದ್ದರೆ ಮುಂದೂಡುವುದು ಉತ್ತಮ. ಸಂಬಂಧಗಳಲ್ಲಿ ಸ್ಪಷ್ಟತೆ ಇರಲಿ. ದೇವರ ಸ್ತೋತ್ರಾದಿಗಳನ್ನು ಮಾಡಿ. ವಿದೇಶಕ್ಕೆ ಹೋಗುವ ಅವಕಾಶವು ತಪ್ಪಿಹೋಗುವುಸು. ಅಗತ್ಯವಿದ್ದಷ್ಟೇ ಖರ್ಚು ಮಾಡಿ. ಎಲ್ಲವೂ ಬೇಕೆನಿಸಬಹುದು. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ.

ಕುಂಭ ರಾಶಿ: ಯಾರೇ ಒತ್ತಡ ಹಾಕಿದರೂ ನಿಮ್ಮ ದಾರಿಯಲ್ಲಿ ಇರುವಿರಿ. ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ನಿಮ್ಮಲ್ಲಿ ದೃಢತೆ ಇದ್ದರೆ ಅದು ಸಾಧ್ಯವಿಲ್ಲ. ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಸ್ನೇಹಿತರಿಂದ ನೆರವು ಸಿಗಬಹುದು. ಏನೇ ಮಾಡಿದರೂ ವಿರೋಧಿಗಳ ಮೀರಿಸುವ ಸಾಮರ್ಥ್ಯ ಬರದು. ಭವಿಷ್ಯದ ಬಗ್ಗೆ ಚಿಂತೆ ಮಾಡದಿರಿ, ಕಾಲ ಸರಿದಂತೆ ಪರಿಹಾರ ಸಿಗುತ್ತದೆ. ಕೆಲವು ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬಹುದು. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನಲ್ಲಿಯೇ ಸಂಕಟಪಡುವ ಬದಲು ಅದನ್ನು ಆಪ್ತರಿಗೆ ಹೇಳಿ ಹಗುರಾಗಿ. ಕೃಷಿಕರಿಗೆ ಲಾಭವಾಗುವ ಸಾಧ್ಯತೆ ಇದೆ. ಇಂದು ಸಹಾಯವನ್ನು ಕೇಳಿದವರಿಗೆ ಇಲ್ಲವೆನ್ನದೇ ಮಾಡಿ. ಆಯಾಸವಾದರೆ ವಿಶ್ರಾಂತಿಯ ಜೊತೆ ಕೆಲಸವನ್ನು ಮಾಡಿ. ಗುರಿಯೆಡಗೆ ಪ್ರಯತ್ನವು ನಿರಂತರವಾಗಿರಲಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ.

ಮೀನ ರಾಶಿ: ದಾಂಪತ್ಯದ ಅನಿರೀಕ್ಷಿತ ಬೆಳವಣಿಗೆಗೆ ಕುಗ್ಗುವಿರಿ. ಚಿಂತಿಸಿದ ಕೆಲಸವನ್ನು ಪೂರ್ಣಗೊಳಿಸುವ ಸಂತೋಷವು ನಿಮ್ಮದಾಗಲಿದೆ. ಅನ್ಯರಿಗೆ ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಕೆಲವರು ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಇನ್ನೊಬ್ಬರ ಬಗ್ಗೆ ಅಂದುಕೊಂಡಿದ್ದು ಸತ್ಯವಾಗಲಿದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕುಟುಂಬದ ವಿಚಾರಗಳಲ್ಲಿ ಸಮಾಧಾನಕರ ದಿನ. ಮಿತವಾಗಿ ಮಾತನಾಡಿ, ಬೇರೆಯವರಿಗೆ ವಿಷಯಗಳು ತಪ್ಪಾಗಿ ಅರ್ಥವಾಗಬಹುದು. ಯಾವುದನ್ನೂ ಹಠದ ಮೂಲಕ ಪಡೆದುಕೊಳ್ಳುವುದು ಬೇಡ. ಹೊಸದಾಗಿ ಸೇರಿದ ಕೆಲಸದಲ್ಲಿ ಗೊಂದಲಗಳಿದ್ದು ಅದನ್ನು ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು. ಹಳೆಯ ಸಮಾಚಾರವನ್ನು ಪುನಃ ನೆನಪಿಸಿಕೊಳ್ಳುವಿರಿ. ಮಾತನ್ನು ಕಡಿಮೆ‌ ಮಾಡಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ.

Published On - 1:52 am, Thu, 19 June 25

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ