Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ

Fact check: ದೇಶದಲ್ಲಿ 5ಜಿ ತಂತ್ರಜ್ಞಾನ ಪರೀಕ್ಷೆಗೂ ಕೊರೊನಾ ಹರಡುತ್ತಿರುವುದಕ್ಕೂ ಸಂಬಂಧವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 11, 2021 | 6:12 PM

5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ ಎಂದು ದೂರಸಂಪರ್ಕ ಇಲಾಖೆಯ 5ಜಿ ತಂತ್ರಜ್ಞಾನ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. ಇಂತಹ ಆಧಾರರಹಿತ ಮತ್ತು ನಕಲಿ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿ, ಜನರನ್ನು ದಾರಿ ತಪ್ಪಿಸಬಾರದು ಎಂದು ಇಲಾಖೆ ಮನವಿ ಮಾಡಿದೆ. ಈ ವಾದ ‘ಸುಳ್ಳು’ ಮತ್ತು ದೇಶದಲ್ಲಿ 5ಜಿ ಪ್ರಯೋಗ ಅಥವಾ ನೆಟ್‌ವರ್ಕ್ ಮೂಲಕ ಕೋವಿಡ್ -19 ರೋಗ ಹರಡುತ್ತಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಸೋಮವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಗೆ 5ಜಿ ಮೊಬೈಲ್ ಟವರ್‌ಗಳ ಪ್ರಯೋಗಗಳು ಕಾರಣ ಎಂದು ಹೇಳುವ ಮೂಲಕ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ಸಂದೇಶಗಳನ್ನು ಪ್ರಸಾರ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈಗ ಹೇಳಿರುವ ಪ್ರಕಾರ, ಈ ಸಂದೇಶಗಳು ತಪ್ಪು ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿವೆ. 5ಜಿ ತಂತ್ರಜ್ಞಾನ ಮತ್ತು ಕೋವಿಡ್ -19 ರ ಹರಡುವಿಕೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ತಪ್ಪು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ವದಂತಿಗಳಿಂದ ತಪ್ಪುದಾರಿಗೆ ಎಳೆಯಬಾರದು ಎಂದು ಮನವಿ ಮಾಡಲಾಗಿದೆ. 5ಜಿ ತಂತ್ರಜ್ಞಾನ ಪರೀಕ್ಷೆಗೂ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದಕ್ಕೂ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ತಿಳಿಸಲಾಗಿದೆ.

PIB_INDIA ಸಂವಹನ ಸಚಿವಾಲಯವು ಟ್ವೀಟ್ ಮಾಡಿದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್ ಮಾಡುವ ಮೂಲಕ ಟೆಲಿಕಾಂ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಬಿಡುಗಡೆಯಲ್ಲಿ, ಮೊಬೈಲ್ ಟವರ್​ಗಳು ನಾನ್ ಅಯೋನೈಸಿಂಗ್ ರೇಡಿಯೊ ಫ್ರಿಕ್ವೆನ್ಸಿಗಳನ್ನು ಬಿಡುತ್ತವೆ. ಅದು ಮಾನವ ಸೇರಿದಂತೆ ಯಾವುದೇ ಜೀವಕೋಶಗಳಿಗೆ ಹಾನಿ ಉಂಟುಮಾಡುವುದಿಲ್ಲ. ದೂರಸಂಪರ್ಕ ಇಲಾಖೆಯು ರೇಡಿಯೊ ಫ್ರೀಕ್ವೆನ್ಸಿ ಫೀಲ್ಡ್ ಸೀಮಿತಗೊಳಿಸಿದೆ ಮತ್ತು ಟವರ್ ಅದಕ್ಕಿಂತ ಹೆಚ್ಚಿನ ರೇಡಿಯೊ ತರಂಗವನ್ನು ಬಿಡುತ್ತಿದೆ ಎಂದು ಯಾರಾದರೂ ಭಾವಿಸಿದರೆ, ಅದು ತರಂಗ್ ಸಂಚಾರ್ ಪೋರ್ಟಲ್ (https://tarangsanchar.gov.in/emfportal) ನಲ್ಲಿ ದೂರು ನೀಡಬಹುದು. ಆ ನಂತರ ತನಿಖೆ ಮಾಡಲಾಗುತ್ತದೆ.

5ಜಿ ಪರೀಕ್ಷೆಯಿಂದಾಗಿ ಕೋವಿಡ್ -19 ಸಾಂಕ್ರಾಮಿಕ ರೋಗ ಬಂದಿದೆ ಎಂದು ಹೇಳುತ್ತಾ ಈಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವು ತುಂಬಾ ವೈರಲ್ ಆಗುತ್ತಿದೆ. ಇದರೊಂದಿಗೆ ಆಡಿಯೋವನ್ನು ಸಹ ಪ್ರಸಾರ ಮಾಡಲಾಗುತ್ತಿದೆ. 5ಜಿ ಪರೀಕ್ಷೆಯಿಂದ ಜನರು ಸಾಯುತ್ತಿದ್ದಾರೆ ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ದೂರಸಂಪರ್ಕ ಇಲಾಖೆ ಮೊದಲು ಸಿಒಎಐ ಮತ್ತು ಪಿಐಬಿಗೆ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಆರೋಪವು ಸಂಪೂರ್ಣವಾಗಿ ಸುಳ್ಳು. ನೀವು ಅಂತಹ ವೈರಲ್ ಸಂದೇಶವನ್ನು ಸ್ವೀಕರಿಸಿದ್ದರೆ ಅದನ್ನು ನಂಬಬೇಡಿ ಮತ್ತು ಅದನ್ನು ಫಾರ್ವರ್ಡ್ ಮಾಡಬೇಡಿ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕೋವಿಡ್ 19 ಚಿಕಿತ್ಸೆಗೆ 2 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಪಾವತಿಸಲು ಸರ್ಕಾರದಿಂದ ಅವಕಾಶ

(PIB gave statement that, corona second wave not linked with 5G technology trial)

Published On - 6:09 pm, Tue, 11 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್