ಪೇಟಿಎಮ್ ಕೊಟ್ಟ ಆಫರ್​ಗೆ ನಡುಗಿದ ಅಮೆಜಾನ್, ಫ್ಲಿಪ್​ಕಾರ್ಟ್: ಸ್ವಾತಂತ್ರ್ಯ ದಿನಾಚರಣೆಗೆ ಬಂಪರ್ ಡಿಸ್ಕೌಂಟ್

Paytm Mall Independence Day Sale 2021: ಜನಪ್ರಿಯ ಪೇಟಿಎಮ್ ಆಯೋಜಿಸಿರುವ ಐದು ದಿನಗಳ ಸೇಲ್ ನಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿದೆ. ಆಗಸ್ಟ್ 15ರ ವರೆಗೆ ಈ ಸೇಲ್ ನಡೆಯಲಿದ್ದು, ಮುಖ್ಯವಾಗಿ ಸ್ಮಾರ್ಟ್‌ಫೋನ್​ಗಳು ಭಾರೀ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ.

ಪೇಟಿಎಮ್ ಕೊಟ್ಟ ಆಫರ್​ಗೆ ನಡುಗಿದ ಅಮೆಜಾನ್, ಫ್ಲಿಪ್​ಕಾರ್ಟ್: ಸ್ವಾತಂತ್ರ್ಯ ದಿನಾಚರಣೆಗೆ ಬಂಪರ್ ಡಿಸ್ಕೌಂಟ್
PAYTM Mall Independence Day Sale 2021
Follow us
TV9 Web
| Updated By: Vinay Bhat

Updated on: Aug 13, 2021 | 2:55 PM

ಸ್ವಾತಂತ್ರ್ಯ ದಿನಾಚರಣಗೆ ಇನ್ನೇನು ಕೇವಲ ಎರಡು ದಿನಗಳಷ್ಟೆ ಬಾಕಿಯಿದೆ. ಈ ಪ್ರಯುಕ್ತ ಪ್ರಸಿದ್ಧ ಇ ಕಾಮರ್ಸ್​ ತಾಣವಗಳು ಬಂಪರ್ ಆಫರ್​ಗಳನ್ನು ಘೋಷಿಸಿದೆ. ಈಗಾಗಲೇ ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್​ನಲ್ಲಿ ಮೇಳ ನಡೆಯುತ್ತಿದ್ದರೆ, ಇತ್ತ ಪೇಟಿಎಮ್ ಮಾಲ್ ಕೂಡ ಸ್ವಾತ್ರಂತ್ರ್ಯ ದಿನಾಚರಣೆಯ ಪ್ರಯುಕ್ತ ಅಧಿಕ ರಿಯಾಯಿತಿ ಕೊಡುಗೆಗಳನ್ನು ನೀಡಿದೆ. ಕಡಿಮೆ ಬೆಲೆಗೆ ಆಕರ್ಷಕ ಉಪಕರಣಗಳನ್ನು ಪರಿಚಯಿಸಿರುವ ಪೇಟಿಎಮ್ ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಸವಾಲೊಡ್ಡಿದೆ.

ಜನಪ್ರಿಯ ಪೇಟಿಎಮ್ ಆಯೋಜಿಸಿರುವ ಐದು ದಿನಗಳ ಸೇಲ್ ನಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿದೆ. ಆಗಸ್ಟ್ 15ರ ವರೆಗೆ ಈ ಸೇಲ್ ನಡೆಯಲಿದ್ದು, ಮುಖ್ಯವಾಗಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ಬ್ಯಾಂಡ್, ಸ್ಮಾರ್ಟ್‌ ವಾಚ್, ಟ್ಯಾಬ್ಲೆಟ್ ಸೇರಿದಂತೆ ಇತರೆ ಗ್ಯಾಜೆಟ್ಸ್‌ಗಳು ಭಾರೀ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ.

ನೀವು ಸ್ಮಾರ್ಟ್​ಫೋನ್ ಕೊಂಡುಕೊಳ್ಳುವ ಪ್ಲಾನ್​ನಲ್ಲಿದ್ದರೆ ಇದಕ್ಕೆ ಶೇ. 40 ರಷ್ಟು ರಿಯಾಯಿತಿ ಸಿಗುತ್ತಿದೆ. ಪೇಟಿಎಮ್ ಮಾಲ್​​ನಲ್ಲಿ ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು, ಐಫೋನ್‌ಗಳು ಮತ್ತು ಹೆಚ್ಚಿನದನ್ನು ರಿಯಾಯಿತಿಗಳಲ್ಲಿ ಪಡೆಯಬಹುದು.

ಅಂತೆಯೆ ನೀವು ಫೀಚರ್ ಫೋನ್‌ಗಳನ್ನು ಖರೀದಿಸಲು ಬಯಸುತ್ತಿದ್ದರೆ, ನೀವು ಈ ವಿಭಾಗದ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪೇಟಿಎಮ್​ ಮಾಲ್‌ನಲ್ಲಿ ಪರಿಶೀಲಿಸಬೇಕು. ಫೀಚರ್ ಫೋನ್‌ಗಳು 50% ರಿಯಾಯಿತಿಯಲ್ಲಿ ಲಭ್ಯವಿದೆ.

ನೀವು ಟ್ಯಾಬ್ಲೆಟ್ ಸಾಧನಗಳನ್ನು ಖರೀದಿಸಲು ಎದುರು ನೋಡುತ್ತಿದ್ದೀರಾ, ನಂತರ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಪೇಟಿಎಮ್ ಮಾಲ್ ಖರೀದಿಗೆ ಸರಿಯಾದ ಆಯ್ಕೆಯಾಗಿದೆ. ಏಕೆಂದರೆ ಇವುಗಳು ಬರೋಬ್ಬರಿ 50% ರಿಯಾಯಿತಿಯಲ್ಲಿ ಲಭ್ಯವಿದೆ. ಬಳಸಿದ ಸ್ಮಾರ್ಟ್‌ಫೋನ್‌ಗಳ ಮೇಲೆ ಶೆ. 70ರ ವರೆಗೆ ರಿಯಾಯಿತಿ ನೀವು ಬಳಸಿದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸಿದಲ್ಲಿ, ಪೇಟಿಎಮ್ ಮಾಲ್ ಅನ್ನು ಪರಿಶೀಲಿಸಿ ಏಕೆಂದರೆ ನೀವು ಈ ಪೂರ್ವ ಮಾಲೀಕತ್ವದ ಸಾಧನಗಳನ್ನು 70% ರಿಯಾಯಿತಿಯಲ್ಲಿ ಪಡೆಯಬಹುದು.

ಇತ್ತ ಫ್ಲಿಪ್​ಕಾರ್ಟ್​ನಲ್ಲಿ ಗ್ರ್ಯಾಂಡ್ ಫರ್ನಿಚರ್ ಸೇಲ್ ನಡೆಯುತ್ತಿದೆ. ಶೇ. 75 ರಷ್ಟು ರಿಯಾಯಿತಿ ದರದಲ್ಲಿ ಬೆಡ್, ಸೋಫಾ, ಟಿವಿ ಯುನಿಟ್ ಸೇರಿದಂತೆ ಅನೇಕ ಪ್ರಾಡಕ್ಟ್​ಗಳು ಸಿಗುತ್ತಿದೆ. ಕೆಲ ಆಯ್ದ ಬ್ಯಾಂಕುದಾರರು ಮತ್ತಷ್ಟು ಡಿಸ್ಕೌಂಟ್ ಪಡೆಯಬಹುದು.

WhatsApp: ವಾಟ್ಸ್​ಆ್ಯಪ್ ಚಾಟ್ ಅನ್ನು ಶಾಶ್ವತವಾಗಿ ಹೈಡ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Moto G60S: 6000mAh ಬ್ಯಾಟರಿ, 50W ಟರ್ಬೋ ಚಾರ್ಜ್: ಮೋಟೋದಿಂದ ಜಿ60ಎಸ್ ಫೋನ್ ಬಿಡುಗಡೆ: ಬೆಲೆ?

(Paytm Mall Independence Day Sale 2021 Discount Offers On Best Latest Smartphones and Basic Mobiles)