AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google I/O 2022 event: ಆಂಡ್ರಾಯ್ಡ್​​ 13, ಪಿಕ್ಸೆಲ್ 6A ಪರಿಚಯಿಸಲಿದೆಯೇ ಗೂಗಲ್? ಇಂದು ಸಿಗಲಿದೆ ಉತ್ತರ

ಎರಡು ದಿನಗಳ Google I/O 2022 ಕಾರ್ಯಕ್ರಮದಲ್ಲಿ ಗೂಗಲ್ ತನ್ನ ಕ್ಲೌಡ್ ಮೂಲಸೌಕರ್ಯಗಳು, ಇತರ ಪ್ಲ್ಯಾಟ್‌ಫಾರ್ಮ್‌ಗಳು ಹಾಗೂ ತನ್ನ ಸಾಧನಗಳಿಗೆ ಹೊಸ ಅಪ್ಡೇಟ್​ಗಳನ್ನು ಘೋಷಿಸುತ್ತದೆ.​ ಜತೆಗೆ ಗ್ರಾಹಕರಿಗೆ ಹೊಸ ತನ್ನ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತದೆ. ಇದರಲ್ಲಿ ಆಂಡ್ರಾಯ್ಡ್ ಓಎಸ್, ಕ್ರೋಮ್ ಓಎಸ್, ಗೂಗಲ್ ಪ್ಲೇ ಮತ್ತು ಮ್ಯಾಪ್​ಗಳಿಗೆ ವಿಶೇಷ ಫೀಚರ್​ಗಳು ಕೂಡ ಸೇರಿವೆ.

Google I/O 2022 event: ಆಂಡ್ರಾಯ್ಡ್​​ 13, ಪಿಕ್ಸೆಲ್ 6A ಪರಿಚಯಿಸಲಿದೆಯೇ ಗೂಗಲ್? ಇಂದು ಸಿಗಲಿದೆ ಉತ್ತರ
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on:May 11, 2022 | 9:39 AM

Share

Google I/O 2022: ಅಮೇರಿಕಾ ಮೂಲದ ಟೆಕ್ ದೈತ್ಯ ಗೂಗಲ್​ನ (Google) ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ ಇಂದಿನಿಂದ ಅಂದರೆ ಮೇ 11ರಿಂದ ಪ್ರಾರಂಭವಾಗಲಿದ್ದು, ನಾಳೆ ಅಂದರೆ ಮೇ 12ರಂದು ಮುಕ್ತಾಯವಾಗಲಿದೆ. ಕಂಪನಿ ತಿಳಿಸಿರುವ ಮಾಹಿತಿಯಂತೆ ಮೇ 11 ರ 10 AM PDT (ಭಾರತೀಯ ಕಾಲಮಾನ 10:30PM)ಕ್ಕೆ ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ (Sundar Pichai) ಅವರ ಮುಖ್ಯ ಭಾಷಣದೊಂದಿಗೆ ಸಂಕಿರಣ ಆರಂಭವಾಗಲಿದೆ. ನೀವು ಈವೆಂಟ್​ನಲ್ಲಿ ಭಾಗಿಯಾಗಲು ಬಯಸಿದ್ದರೆ io.google/2022 ನಲ್ಲಿ ನೋಂದಾಯಿಸಿಕೊಳ್ಳಬಹುದು. ಏನಿದು ಸಮ್ಮೇಳನ? ಇದರಲ್ಲಿ ಏನೆಲ್ಲಾ ಘೋಷಣೆಗಳು ಆಗಲಿವೆ? ಈ ಕುರಿತ ಮಾಹಿತಿ ಇಲ್ಲಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಗೂಗಲ್ ತನ್ನ ಕ್ಲೌಡ್ ಮೂಲಸೌಕರ್ಯಗಳು, ಇತರ ಪ್ಲ್ಯಾಟ್‌ಫಾರ್ಮ್‌ಗಳು ಹಾಗೂ ತನ್ನ ಸಾಧನಗಳಿಗೆ ಹೊಸ ಅಪ್ಡೇಟ್​ಗಳನ್ನು ಘೋಷಿಸುತ್ತದೆ.​ ಜತೆಗೆ ಗ್ರಾಹಕರಿಗೆ ಹೊಸ ತನ್ನ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತದೆ. ಇದರಲ್ಲಿ ಆಂಡ್ರಾಯ್ಡ್ ಓಎಸ್, ಕ್ರೋಮ್ ಓಎಸ್, ಗೂಗಲ್ ಪ್ಲೇ ಮತ್ತು ಮ್ಯಾಪ್​ಗಳಿಗೆ ವಿಶೇಷ ಫೀಚರ್​​ಗಳು ಕೂಡ ಸೇರಿವೆ.

ಗೂಗಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಮೇ 11-12 ರಂದು ಯಾವ ಅಪ್ಡೇಟ್​ಗಳನ್ನು ನೀವು ನೋಡಲು ಕಾತರರಾಗಿದ್ದೀರಿ?’ ಎಂದು ಗ್ರಾಹಕರಿಗೆ ಪ್ರಶ್ನೆ ಕೇಳಿದೆ. ಈ ಮೂಲಕ ತನ್ನ ಹೊಸ ಅಪ್ಡೇಟ್​ಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಪ್ರೈವಸಿ ಪಾಲಿಸಿ, ಸೆಕ್ಯುರಿಟಿ ಅಪ್ಡೇಟ್ಸ್, ಸಂದೇಶ ಕಳುಹಿಸುವಿಕೆಯಲ್ಲಿ ಅಪ್ಡೇಟ್​ಗಳು, ಗೂಗಲ್​ನ ಹೊಸ ಪಾಲುದಾರಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ಹೊಸತನ್ನು ನಿರೀಕ್ಷಿಸಲಾಗುತ್ತಿದೆ.

ಗೂಗಲ್ ಈಗಾಗಲೇ ತನ್ನ ಮುಂಬರುವ ಆಂಡ್ರಾಯ್ಡ್ 13 ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಬಿಡುಗಡೆಯ ತಾತ್ಕಾಲಿಕ ಟೈಮ್‌ಲೈನ್ ಹಂಚಿಕೊಂಡಿದೆ. ಕಂಪನಿಯು ಕಳೆದ ತಿಂಗಳು Android 13 OSನ ಮೊದಲ ಬೀಟಾ ಪ್ರಿವ್ಯೂ ಹಂಚಿಕೊಂಡಿತ್ತು. ಓಎಸ್‌ನ ಎರಡನೇ ಬೀಟಾ ಆವೃತ್ತಿಯ ಬಿಡುಗಡೆ ಮತ್ತು ಅದರ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಸಮ್ಮೇಳನದಲ್ಲಿ ಗೂಗಲ್ ತಿಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ
Image
National Technology Day 2022: ಇದನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವ ಮತ್ತು ಈ ವರ್ಷದ ಥೀಮ್​: ಇಲ್ಲಿದೆ ಮಾಹಿತಿ
Image
Google: ಇಂದಿನಿಂದ ಗೂಗಲ್ ಹೊಸ ನಿಯಮ ಜಾರಿ: ಇನ್ಮುಂದೆ ಕಾರ್ಯನಿರ್ವಹಿಸಲ್ಲ ಈ ಆ್ಯಪ್​ಗಳು
Image
ಆಂಡ್ರಾಯ್ಡ್ ಮತ್ತು ಐಒಎಸ್​​ನಲ್ಲಿ m-Aadhaar ಆ್ಯಪ್ ಹೇಗೆ ಬಳಸುವುದು?: ಇಲ್ಲಿದೆ ನೋಡಿ
Image
Vivo Y15c: ಸೈಲೆಂಟ್ ಆಗಿ ಬಿಡುಗಡೆ ಆಯಿತು ವಿವೋ Y15c ಸ್ಮಾರ್ಟ್‌ಫೋನ್‌: ಏನು ವಿಶೇಷತೆ?

ಗೂಗಲ್ ಸಾಮಾನ್ಯವಾಗಿ ತನ್ನ ಮಧ್ಯಮ ಬಜೆಟ್​ನ ಸ್ಮಾರ್ಟ್‌ಫೋನ್ ಅನ್ನು ಜನರಿಗೆ ಪರಿಚಯಿಸಲು ಹಾಗೂ ಬಿಡುಗಡೆ ಮಾಡಲು Google I/O ಕಾರ್ಯಕ್ರಮವನ್ನು ಉಪಯೋಗಿಸಿಕೊಳ್ಳುತ್ತದೆ. ಈ ವರ್ಷ ‘ಪಿಕ್ಸೆಲ್ 6A’ ಸ್ಮಾರ್ಟ್‌ಫೋನ್ ಬಿಡುಗಡೆಯೊಂದಿಗೆ ಈ ಪ್ರವೃತ್ತಿಯನ್ನು ಮುಂದುವರಿಸುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಗೂಗಲ್‌ನ ಪಿಕ್ಸೆಲ್ ವಾಚ್ ಸಹ ರಿಲೀಸ್ ಆಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್ ವಾಚ್​ನಲ್ಲಿ ಹತ್ತುಹಲವು ಹೊಸ ವೈಶಿಷ್ಟ್ಯಗಳು ಇರುವ ನಿರೀಕ್ಷೆಗಳಿವೆ.

ಇದರ ಜೊತೆಗೆ, ಗೂಗಲ್ ಕಾರ್ಯಕ್ರಮದಲ್ಲಿ ತನ್ನ ಗೂಗಲ್ ಅಸಿಸ್ಟೆಂಟ್, ಕ್ರೋಮ್ ಓಎಸ್, ಗೂಗಲ್ ಪ್ಲೇ ಸ್ಟೋರ್ ಮತ್ತು ಗೂಗಲ್ ಮ್ಯಾಪ್‌ಗಳಿಗೆ ನೂತನ ನವೀಕರಣಗಳನ್ನು ಬಳಕೆದಾರರಿಗೆ ಪರಿಚಯಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮ ತೀವ್ರ ಕುತೂಹಲ ಸೃಷ್ಟಿಸಿದೆ.

ಅಂದಹಾಗೆ ಐ/ಒ ಅಂದರೆ ಏನು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಸಾಮಾನ್ಯವಾಗಿ ಐ/ಒ ಎಂದರೆ ಇನ್​ಪುಟ್ ಹಾಗೂ ಔಟ್​ಪುಟ್. ಹಾಗೆಯೇ ಗೂಗಲ್​ನ ಸ್ಲೋಗನ್​ ಆದ ‘ಇನ್ನೋವೇಶನ್ ಇನ್ ದಿ ಓಪನ್’ ಎನ್ನುವುದನ್ನೂ ಐ/ಒ ಸೂಚಿಸುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:29 am, Wed, 11 May 22

ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್