Google: ಇಂದಿನಿಂದ ಗೂಗಲ್ ಹೊಸ ನಿಯಮ ಜಾರಿ: ಇನ್ಮುಂದೆ ಕಾರ್ಯನಿರ್ವಹಿಸಲ್ಲ ಈ ಆ್ಯಪ್​ಗಳು

Google New Rule: ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.

Google: ಇಂದಿನಿಂದ ಗೂಗಲ್ ಹೊಸ ನಿಯಮ ಜಾರಿ: ಇನ್ಮುಂದೆ ಕಾರ್ಯನಿರ್ವಹಿಸಲ್ಲ ಈ ಆ್ಯಪ್​ಗಳು
Google Play Store
Follow us
TV9 Web
| Updated By: Vinay Bhat

Updated on: May 11, 2022 | 6:04 AM

ಮೇ. 11ರ ಬಳಿಕ ಅಂದರೆ ಇಂದಿನಿಂದ ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರು ಆ್ಯಪ್‌ ಬಳಸಿ ಕರೆ ರೆಕಾರ್ಡ್‌ (Call recording) ಮಾಡುವುದು ಸಾಧ್ಯವಾಗುವುದಿಲ್ಲ. ಆ್ಯಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ. ಈ ಹೊಸ ನೀತಿಯನ್ನು ಹೇಗೆ ಕಾರ್ಯಗತಗೊಳಿಸಲು ಗೂಗಲ್‌ (Google) ಪ್ಲಾನ್‌ ಮಾಡಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಅಂದರೆ, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಿದೆಯಾ ಅಥವಾ ಪ್ಲಾಟ್‌ಫಾರ್ಮ್‌ನಿಂದ ತಮ್ಮ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಡೆವಲಪರ್‌ಗಳನ್ನು ಕೇಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರಲ್ಲಿ ಟ್ರೂ ಕಾಲರ್ (True Caller) ಕೂಡ ಒಳಗೊಂಡಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.

ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಮಹತ್ತರ ಬದಲಾವಣೆಗೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ. ಟ್ರೂ ಕಾಲರ್‌ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್‌ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರ,ಇನ್ಮುಂದೆ ಟ್ರೂ ಕಾಲರ್‌ ಕಾಲ್‌ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲಿದೆ.

ಹಾಗಂತೆ ಎಲ್ಲಾ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ಬ್ಯಾನ್‌ ಆಗುವುದಿಲ್ಲ. ಅಂದರೆ ಒನ್‌ಪ್ಲಸ್‌, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳು ನೀಡುವ ಇಂಟರ್‌ಬಿಲ್ಟ್‌ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಬ್ಯಾನ್‌ ಆಗುವುದಿಲ್ಲ. ಇದಲ್ಲದೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸ್ವಂತ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಸಹ ಲಭ್ಯವಿರುತ್ತದೆ.

ಇದನ್ನೂ ಓದಿ
Image
SonyLIV ಫ್ರೀ: ವೊಡಾಫೋನ್-ಐಡಿಯಾದಿಂದ ಬಂಪರ್ ಆಫರ್: ಜಿಯೋ-ಏರ್ಟೆಲ್ ಶಾಕ್
Image
Vivo Y15c: ಸೈಲೆಂಟ್ ಆಗಿ ಬಿಡುಗಡೆ ಆಯಿತು ವಿವೋ Y15c ಸ್ಮಾರ್ಟ್‌ಫೋನ್‌: ಏನು ವಿಶೇಷತೆ?
Image
Vivo V23e 5G: ವಿವೋದ ಈ ಬೊಂಬಾಟ್ ಸ್ಮಾರ್ಟ್​​ಫೋನ್ ಮೇಲೆ 5,000 ರೂ. ಡಿಸ್ಕೌಂಟ್: ಇಂದೇ ಕೊನೆಯ ದಿನ
Image
Smartphone Tips: ಹೊಸ ಸ್ಮಾರ್ಟ್​​ಫೋನ್ ಖರೀದಿಸುವಾಗ ತಪ್ಪಿಯೂ ಹೀಗೆ ಮಾಡಬೇಡಿ

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಕೆಲ ವರ್ಷಗಳಿಂದ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ವಿರುದ್ಧ ಗೂಗಲ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ವರ್ಷಗಳ ಹಿಂದೆ, Android 6 ನಲ್ಲಿ ಗೂಗಲ್ ನೈಜ-ಸಮಯದ ಕರೆ ರೆಕಾರ್ಡಿಂಗ್ ಅನ್ನು ನಿರ್ಬಂಧಿಸಿತ್ತು ಮತ್ತು Android 10 ನೊಂದಿಗೆ ಮೈಕ್ರೊಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಅನ್ನು ಮತ್ತಷ್ಟು ನಿರ್ಬಂಧಿಸಿತ್ತು. ಇದಾದ ನಂತರ Android 10 ಮತ್ತು ನಂತರದ ಆವೃತ್ತಿಗಳೊಂದಿಗೆ ಕರೆಗಳನ್ನು ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಪ್ರವೇಶಿಸುವಿಕೆಯನ್ನು ಪ್ರಾರಂಭಿಸಿದವು. ಆದರೆ, ಗೂಗಲ್ ಇದೀಗ ತನ್ನ ನೀತಿಯನ್ನು ನವೀಕರಿಸಿರುವುದರಿಂದ, ಇನ್ಮುಂದೆ ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ