AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Truecaller: ಗೂಗಲ್ ಹೊಸ ನಿಯಮಕ್ಕೆ ಬೆಚ್ಚಿಬಿದ್ದ ಟ್ರೂ ಕಾಲರ್: ಇನ್ಮುಂದೆ ಇರಲ್ಲ ಈ ಫೀಚರ್

Google New rule: ಗೂಗಲ್ ತಂದಿರುವ ಹೊಸ ನಿಯಮದಿಂದ ಟ್ರೂ ಕಾಲರ್​ಗೆ ದೊಡ್ಡ ಪೆಟ್ಟುಬಿದ್ದಿದೆ. ಅದೇನೆಂದರೆ ಟ್ರೂ ಕಾಲರ್‌ ಆ್ಯಪ್​ನಲ್ಲಿ ಮೇ 11ರಿಂದ ಕಾಲ್‌ ರೆಕಾರ್ಡಿಂಗ್‌ ಫೀಚರ್ ಕೆಲಸ ಮಡುವುದಿಲ್ಲ.

Truecaller: ಗೂಗಲ್ ಹೊಸ ನಿಯಮಕ್ಕೆ ಬೆಚ್ಚಿಬಿದ್ದ ಟ್ರೂ ಕಾಲರ್: ಇನ್ಮುಂದೆ ಇರಲ್ಲ ಈ ಫೀಚರ್
Truecaller
Follow us
TV9 Web
| Updated By: Vinay Bhat

Updated on:Apr 24, 2022 | 6:50 AM

ಟ್ರೂ ಕಾಲರ್ (Truecaller) ಎಂದರೆ ಇಂದು ಯಾರಿಗೆ ತಿಳಿದಿಲ್ಲ ಹೇಳಿ. ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್ ಬಳಕೆ ಮಾಡುತ್ತಿರುವ ಬಹುಪಾಲು ಜನರು ಈ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿ ಬಳಕೆ ಮಾಡುತ್ತಿದ್ದಾರೆ. ಮುಖ್ಯವಾಗಿ ಈ ಅಪ್ಲಿಕೇಶನ್ ಮೂಲಕ ಅಪರಿಚಿತ ಸಂಖ್ಯೆಯಿಂದ ಬರುವ ಕರೆ ಯಾರದ್ದು ಎಂದು ಕಂಡುಹಿಡಿಯಲು ಅಥವಾ ನಂಬರ್ ಬ್ಲಾಕ್ ಮಾಡಲು ಜೊತೆಗೆ ಟ್ರೂ ಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಲಭ್ಯವಿದ್ದು ಇದರಿಂದ ಅನೇಕರು ಕರೆಗಳನ್ನು ರೆಕಾರ್ಡಿಂಗ್‌ ಮಾಡುತ್ತಿದ್ದಾರೆ. ಆದರೀಗ ಗೂಗಲ್ (Google) ತಂದಿರುವ ಹೊಸ ನಿಯಮದಿಂದ ಟ್ರೂ ಕಾಲರ್​ಗೆ ದೊಡ್ಡ ಪೆಟ್ಟುಬಿದ್ದಿದೆ. ಅದೇನೆಂದರೆ ಟ್ರೂ ಕಾಲರ್‌ ಆ್ಯಪ್​ನಲ್ಲಿ ಮೇ 11ರಿಂದ ಕಾಲ್‌ ರೆಕಾರ್ಡಿಂಗ್‌ ಫೀಚರ್ ಕೆಲಸ ಮಡುವುದಿಲ್ಲ.

ಹೌದು, ಮೇ. 11ರ ಬಳಿಕ ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರು ಆ್ಯಪ್‌ ಬಳಸಿ ಕರೆ ರೆಕಾರ್ಡ್‌ ಮಾಡುವುದು ಸಾಧ್ಯವಾಗುವುದಿಲ್ಲ. ಆ್ಯಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ. ಇದರಲ್ಲಿ ಟ್ರೂ ಕಾಲರ್ ಕೂಡ ಒಳಗೊಂಡಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.

ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಮಹತ್ತರ ಬದಲಾವಣೆಗೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ. ಟ್ರೂ ಕಾಲರ್‌ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್‌ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರ,ಇನ್ಮುಂದೆ ಟ್ರೂ ಕಾಲರ್‌ ಕಾಲ್‌ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಕೆಲ ವರ್ಷಗಳಿಂದ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ವಿರುದ್ಧ ಗೂಗಲ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ವರ್ಷಗಳ ಹಿಂದೆ, Android 6 ನಲ್ಲಿ ಗೂಗಲ್ ನೈಜ-ಸಮಯದ ಕರೆ ರೆಕಾರ್ಡಿಂಗ್ ಅನ್ನು ನಿರ್ಬಂಧಿಸಿತ್ತು ಮತ್ತು Android 10 ನೊಂದಿಗೆ ಮೈಕ್ರೊಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಅನ್ನು ಮತ್ತಷ್ಟು ನಿರ್ಬಂಧಿಸಿತ್ತು. ಇದಾದ ನಂತರ Android 10 ಮತ್ತು ನಂತರದ ಆವೃತ್ತಿಗಳೊಂದಿಗೆ ಕರೆಗಳನ್ನು ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಪ್ರವೇಶಿಸುವಿಕೆಯನ್ನು ಪ್ರಾರಂಭಿಸಿದವು. ಆದರೆ, ಗೂಗಲ್ ಇದೀಗ ತನ್ನ ನೀತಿಯನ್ನು ನವೀಕರಿಸಿರುವುದರಿಂದ, ಇನ್ಮುಂದೆ ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ.

ಈ ಮಾರ್ಪಾಡು ಅಂತರ್ನಿರ್ಮಿತ ಅಪ್ಲಿಕೇಶನ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ಯಾಮ್​ಸಂಗ್, ಶವೋಮಿ, ಒನ್​ಪ್ಲಸ್ ಮತ್ತು ಒಪ್ಪೋ ದಂತಹ ಕಂಪನಿಗಳು ಒದಗಿಸಿದ ಕಸ್ಟಮ್ ಸ್ಕಿನ್‌ಗಳಲ್ಲಿ ಒಳಗೊಂಡಿರುವ ಇನ್-ಬಿಲ್ಟ್ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಈ ಬದಲಾವಣೆಯಿಂದ ಪ್ರಭಾವಿತವಾಗುವುದಿಲ್ಲ.

Samsung Galaxy M53 5G: 108MP ಕ್ಯಾಮೆರಾ ಫೋನ್ ಅಂದ್ರೆ ಇದು: ಭಾರತದಲ್ಲಿ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಬಿಡುಗಡೆ

Realme GT 2: 50MP ಕ್ಯಾಮೆರಾ, 65W ಫಾಸ್ಟ್ ಚಾರ್ಜರ್: ಭಾರತದಲ್ಲಿ ರಿಯಲ್‌ ಮಿ GT 2 ಸ್ಮಾರ್ಟ್‌ಫೋನ್‌ ಬಿಡುಗಡೆ

Published On - 6:36 am, Sun, 24 April 22

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ