WhatsApp: ಮುಂದಿನ ಅಪ್ಡೇಟ್ಗೆ ವಾಟ್ಸ್‌ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರಲಿದೆ ಅಚ್ಚರಿಯ ಫೀಚರ್
WhatsApp Update: ವಾಟ್ಸ್‌ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಕರ್ಷಕ ಫೀಚರ್ ಅನ್ನು ಸೇರ್ಪಡೆ ಮಾಡುವುದಾಗಿ ಘೋಷಿಸಿದೆ.
ಮೆಟಾ (Meta) ಮಾಲೀಕತ್ವದ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್‌ಆ್ಯಪ್ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ವಾರವಷ್ಟೆ ವಾಟ್ಸ್‌ಆ್ಯಪ್ ಕೆಲವೊಂದು ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿತ್ತು. ಸಾಲು ಸಾಲು ಅಪ್ಡೇಟ್ಗಳು ವಾಟ್ಸ್ಆ್ಯಪ್ನಲ್ಲಿ ಬರಲು ತಯಾರಿರುವಾಗ ಇದೀಗ ಮತ್ತೊಂದು ಅಚ್ಚರಿ ಫೀಚರ್ (Feature) ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ವಾಟ್ಸ್‌ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಕರ್ಷಕ ಫೀಚರ್ ಅನ್ನು ಸೇರ್ಪಡೆ ಮಾಡುವುದಾಗಿ ಘೋಷಿಸಿದೆ.
ಈಗಿರುವ ವಾಟ್ಸ್ಆ್ಯಪ್ನಲ್ಲಿ ಒಂದು ಸಮಯದಲ್ಲಿ ಎಂಟು ಸದಸ್ಯರಿಗೆ ಮಾತ್ರ ವಾಯಿಸ್ ಕರೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದರೆ ಗ್ರೂಪ್ ವಾಯಿಸ್ ಕರೆಗೆ 32 ಭಾಗವಹಿಸುವವರನ್ನು ಸೇರಿಸಲು ವಾಟ್ಸ್‌ಆ್ಯಪ್ ಫೀಚರ್ ಅನ್ನು ಹೊರತರಲು ಪ್ರಾರಂಭಿಸಿದೆ ಎಂದು Wabetainfo ಹಂಚಿಕೊಂಡಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರು ವಾಟ್ಸ್‌ಆ್ಯಪ್ v22.8.79 ವರ್ಷನ್ ಬಳಸುತ್ತಿದ್ದಾರೆ. ಇದರ ಮುಂದುವರೆದ ಅಪ್ಡೇಟ್ ಆಗಿ v22.8.80 ಬರಲಿದ್ದು, ಇದರಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಯ್ಕೆ ಇರಲಿದೆಯಂತೆ.
ಇನ್ನು ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ತಮ್ಮ ನಿರ್ದಿಷ್ಟ ಸಂಪರ್ಕದಿಂದ ಲಾಸ್ಟ್ ಸೀನ್ ಅನ್ನು ಮರೆಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಅಂದರೆ ಇದು ನಿರ್ದಿಷ್ಟ ಸಂಪರ್ಕಗಳಿಂದ ಲಾಸ್ಟ್ ಸೀನ್ ಸ್ಟೇಟಸ್ ಹೈಡ್ ಮಾಡಲು ಅನುಮತಿಸಲಿದೆ. ಈ ಅತ್ಯುತ್ತಮ ಫೀಚರ್ಸ ಅನ್ನು ಈಗ ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಸದ್ಯಕ್ಕೆ ವಾಟ್ಸ್‌ಆ್ಯಪ್ ನಿಮ್ಮ ಸಂಪರ್ಕಗಳಿಂದ ಲಾಸ್ಟ್ ಸೀನ್ ಅನ್ನು ಹೈಡ್ ಮಾಡಲು ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದರಲ್ಲಿ ಮೊದಲನೆಯ ಆಯ್ಕೆ ಎವೆರಿಒನ್- Everyone ಆಗಿದೆ. ಇದರರ್ಥ ನಿಮ್ಮ ಲಾಸ್ಟ್ ಸೀನ್ ಅನ್ನು ಎಲ್ಲರೂ ಕೂಡ ನೋಡಬಹುದು. ಎರಡನೆಯದು ಮೈ ಕಾಂಟೆಕ್ಟ್ಸ್, ಇದನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಫೋನ್ ಬುಕ್‌ನಲ್ಲಿ ಲಭ್ಯವಿರುವ ಕಾಂಟೆಕ್ಟ್‌ಗಳು ಮಾತ್ರ ನಿಮ್ಮ ಲಾಸ್ಟ್ ಸೀನ್ ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಮೂರನೇಯ ಆಯ್ಕೆ ನೋಬಡಿ, ಇದು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್ ಸೀನ್ ಯಾರಿಗೂ ಕಾಣದಂತೆ ಮಾಡಲು ಬಯಸಿದರೆ ಇದು ನಿಮಗೆ ಅನುಕೂಲವಾಗಲಿದೆ.
ಇದೀಗ ವಾಟ್ಸ್‌ಆ್ಯಪ್ ಈ ಮೂರು ಆಯ್ಕೆಗಳ ಜೊತೆಗೆ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಆಯ್ಕೆಯಲ್ಲಿ ನೀವು ನಿಮ್ಮ ಲಾಸ್ಟ್ ಸೀನ್ ಯಾರು ನೋಡಬಾರದು ಅಂತಾ ಬಯಸುತ್ತೀರೋ ಅಂತಹವರನ್ನು ಹೈಡ್ ಮಾಡಬಹುದಾಗಿದೆ. ಅದೇ ರೀತಿ, ವಾಟ್ಸ್‌ಆ್ಯಪ್ ಪ್ರೊಫೈಲ್ ಫೋಟೋ ವೀಕ್ಷಣೆ ಮತ್ತು ಅಬೌಟ್ ಬಗ್ಗೆ ಇದೇ ರೀತಿಯ ವೈಶಿಷ್ಟ್ಯವನ್ನು ಹೊರತರುವ ನಿರೀಕ್ಷೆಯಿದೆ. ಅಂದರೆ ಪ್ರೊಫೈಲ್ ಫೋಟೋವನ್ನು ನಿರ್ದಿಷ್ಟ ಆಯ್ಕೆ ಮಾಡಿದ ಬಳಕೆದಾರರು ಮಾತ್ರ ನೋಡುವ ಹಾಗೆ ಅಭಿವೃದ್ಧಿ ಪಡಿಸುತ್ತಿದೆ. ಈ ಬಗ್ಗೆ ಅನೇಕ ಬಳಕೆದಾರರು ಬೇಡಿಕೆ ಇಟ್ಟಿದ್ದು, ಇದು ಗೌಪ್ಯತೆಯ ದೊಡ್ಡ ಹೆಜ್ಜೆಯಾಗಲಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.
Published On - 1:27 pm, Sun, 24 April 22