AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್ ಲಾಸ್ಟ್​ ಸೀನ್​ನಲ್ಲಿ ಊಹಿಸಲಾಗದ ಫೀಚರ್: ಬಳಕೆದಾರರು ಫುಲ್ ಖುಷ್

WhatsApp Last Seen: ಮೆಟಾ (Meta) ಮಾಲೀಕತ್ವದ ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ತಮ್ಮ ನಿರ್ದಿಷ್ಟ ಸಂಪರ್ಕದಿಂದ ‘ಲಾಸ್ಟ್ ಸೀನ್’ (Last Seen) ಅನ್ನು ಮರೆಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಲು ಮುಂದಾಗಿದೆ

WhatsApp: ವಾಟ್ಸ್​ಆ್ಯಪ್ ಲಾಸ್ಟ್​ ಸೀನ್​ನಲ್ಲಿ ಊಹಿಸಲಾಗದ ಫೀಚರ್: ಬಳಕೆದಾರರು ಫುಲ್ ಖುಷ್
WhatsApp New Feature
TV9 Web
| Edited By: |

Updated on: Apr 19, 2022 | 1:58 PM

Share

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ವಾರವಷ್ಟೆ ವಾಟ್ಸ್​ಆ್ಯಪ್​​ ಕೆಲವೊಂದು ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಚ್ಚರಿ ಅಪ್ಡೇಟ್ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ತಮ್ಮ ನಿರ್ದಿಷ್ಟ ಸಂಪರ್ಕದಿಂದ ‘ಲಾಸ್ಟ್ ಸೀನ್’ (Last Seen) ಅನ್ನು ಮರೆಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಅಂದರೆ ಇದು ನಿರ್ದಿಷ್ಟ ಸಂಪರ್ಕಗಳಿಂದ ಲಾಸ್ಟ್‌ ಸೀನ್‌ ಸ್ಟೇಟಸ್‌ ಹೈಡ್‌ ಮಾಡಲು ಅನುಮತಿಸಲಿದೆ. ಇದರಿಂದ ಬಳಕೆದಾರರಂತು ಸಖತ್ ಖುಷಿಯಾಗಿದ್ದಾರೆ.

ಈ ಅತ್ಯುತ್ತಮ ಫೀಚರ್ಸ ಅನ್ನು ಈಗ ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಿದವರು ಈ ಫೀಚರ್ಸ್‌ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ವಾಟ್ಸ್​ಆ್ಯಪ್ ಹೇಳಿದೆ. ಲಾಸ್ಟ್ ಸೀನ್ ನಿರ್ದಿಷ್ಟ ವ್ಯಕ್ತಿಗೆ ಕೊನೆಯದಾಗಿ ನೋಡಿದ ಸ್ಥಿತಿ ಮರೆಮಾಡುವುದನ್ನು ವಾಟ್ಸ್‌ಆ್ಯಪ್‌ ಮೂಲಕ ಆ್ಯಂಡ್ರಾಯ್ಡ್ ಮತ್ತು iOS ಬೀಟಾ ಆವೃತ್ತಿಗಳಲ್ಲಿ ಪರೀಕ್ಷಿಸಲಾಗುತ್ತಿದೆ. ‘ಕೊನೆಯದಾಗಿ ನೋಡಿದ’ ಸ್ಥಿತಿಯನ್ನು ನಿರ್ದಿಷ್ಟ ಸಂಪರ್ಕಗಳಿಗೆ ಮಾತ್ರ ಸೀಮಿತಗೊಳಿಸಲು ವಾಟ್ಸ್‌ಆ್ಯಪ್‌ ಅನುಮತಿಸುತ್ತದೆ. ನೀವು ಲಾಸ್ಟ್ ಸೀನ್ ಸ್ಥಿತಿಯನ್ನು ಮರೆಮಾಡಲು ಬಯಸುವ ವ್ಯಕ್ತಿಯನ್ನು ಬಳಕೆದಾರರು ಆಯ್ಕೆ ಮಾಡಬಹುದು ಎಂದು WABetaInfo ತನ್ನ ವರದಿಯಲ್ಲಿ ಪ್ರಕಟಿಸಿದೆ.

ಸದ್ಯಕ್ಕೆ ವಾಟ್ಸ್​ಆ್ಯಪ್​ ನಿಮ್ಮ ಸಂಪರ್ಕಗಳಿಂದ ಲಾಸ್ಟ್ ಸೀನ್ ಅನ್ನು ಹೈಡ್‌ ಮಾಡಲು ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದರಲ್ಲಿ ಮೊದಲನೆಯ ಆಯ್ಕೆ ಎವೆರಿಒನ್‌-  Everyone ಆಗಿದೆ. ಇದರರ್ಥ ನಿಮ್ಮ ಲಾಸ್ಟ್‌ ಸೀನ್‌ ಅನ್ನು ಎಲ್ಲರೂ ಕೂಡ ನೋಡಬಹುದು. ಎರಡನೆಯದು ಮೈ ಕಾಂಟೆಕ್ಟ್ಸ್‌, ಇದನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಫೋನ್‌ ಬುಕ್‌ನಲ್ಲಿ ಲಭ್ಯವಿರುವ ಕಾಂಟೆಕ್ಟ್‌ಗಳು ಮಾತ್ರ ನಿಮ್ಮ ಲಾಸ್ಟ್‌ ಸೀನ್‌ ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಮೂರನೇಯ ಆಯ್ಕೆ ನೋಬಡಿ, ಇದು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌ ಯಾರಿಗೂ ಕಾಣದಂತೆ ಮಾಡಲು ಬಯಸಿದರೆ ಇದು ನಿಮಗೆ ಅನುಕೂಲವಾಗಲಿದೆ.

ಇದೀಗ ವಾಟ್ಸ್​ಆ್ಯಪ್ ಈ ಮೂರು ಆಯ್ಕೆಗಳ ಜೊತೆಗೆ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಆಯ್ಕೆಯಲ್ಲಿ ನೀವು ನಿಮ್ಮ ಲಾಸ್ಟ್‌ ಸೀನ್‌ ಯಾರು ನೋಡಬಾರದು ಅಂತಾ ಬಯಸುತ್ತೀರೋ ಅಂತಹವರನ್ನು ಹೈಡ್‌ ಮಾಡಬಹುದಾಗಿದೆ. ಅದೇ ರೀತಿ, ವಾಟ್ಸ್‌ಆ್ಯಪ್‌ ಪ್ರೊಫೈಲ್ ಫೋಟೋ ವೀಕ್ಷಣೆ ಮತ್ತು ಅಬೌಟ್ ಬಗ್ಗೆ ಇದೇ ರೀತಿಯ ವೈಶಿಷ್ಟ್ಯವನ್ನು ಹೊರತರುವ ನಿರೀಕ್ಷೆಯಿದೆ. ಅಂದರೆ ಪ್ರೊಫೈಲ್ ಫೋಟೋವನ್ನು ನಿರ್ದಿಷ್ಟ ಆಯ್ಕೆ ಮಾಡಿದ ಬಳಕೆದಾರರು ಮಾತ್ರ ನೋಡುವ ಹಾಗೆ ಅಭಿವೃದ್ಧಿ ಪಡಿಸುತ್ತಿದೆ. ಈ ಬಗ್ಗೆ ಅನೇಕ ಬಳಕೆದಾರರು ಬೇಡಿಕೆ ಇಟ್ಟಿದ್ದು, ಇದು ಗೌಪ್ಯತೆಯ ದೊಡ್ಡ ಹೆಜ್ಜೆಯಾಗಲಿದೆ ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

ಅಂತೆಯೆ ವಾಟ್ಸ್​ಆ್ಯಪ್​​ ಏಕಕಾಲಕ್ಕೆ 32 ಜನರು ಗ್ರೂಪ್‌ ವಾಯ್ಸ್ ಕಾಲ್‌ ಮಾಡುವುದು, 2 ಜಿಬಿ (ಗೀಗಾ ಬೈಟ್‌) ಗಾತ್ರದ ಫೈಲ್‌ಗಳನ್ನು ರವಾನಿಸುವುದು ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನು ಸೇರಿಸಲಾಗುವುದು ಎಂದು ಕಂಪನಿ ಘೋಷಿಸಿದೆ. ಇನ್ನು iOS ಗಾಗಿ ವಾಟ್ಸ್​ಆ್ಯಪ್​​ನಲ್ಲಿ ಬ್ಲರ್ ಟೂಲ್ ಈಗಾಗಲೇ ಲಭ್ಯವಿದ್ದು, ಈ ಹೊಸ ಡ್ರಾಯಿಂಗ್ ಟೂಲ್‌ಗಳನ್ನು ಬಳಸುವಾಗ ಡ್ರಾಯಿಂಗ್ ಎಡಿಟರ್‌ನ ಇಂಟರ್ಫೇಸ್ ಹೊಸದಾಗಿ ರಚಿಸಲಾಗಿದೆ. ಡ್ರಾಯಿಂಗ್ ಎಡಿಟರ್‌ಗಾಗಿ ಈ ಹೊಸ ಇಂಟರ್‌ಫೇಸ್ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ.

Flipkart: ಫ್ಲಿಪ್​ಕಾರ್ಟ್​ನಲ್ಲಿ ಕೇವಲ 15,000 ರೂ. ಒಳಗೆ ಲಭ್ಯವಿದೆ ಈ ಬೆಸ್ಟ್ ಸ್ಮಾರ್ಟ್​​ಫೋನ್​ಗಳು

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ