AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How To: ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್​ನ ಸೇಫ್ಟಿಗೆ ಹೀಗೆ ಮಾಡಿ; EV ಬ್ಯಾಟರಿಗಳ ಬಾಳಿಕೆ, ಸುರಕ್ಷೆಗೆ ಇಲ್ಲಿದೆ ಟಿಪ್ಸ್

EV Scooters: ಕೆಲ ಸರಳ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನುಸರಿಸಿದರೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯ ಸುರಕ್ಷತೆಯ ಜೊತೆಗೆ ದೀರ್ಘ ಬಾಳಿಕೆಯೂ ಸಾಧ್ಯವಾಗುತ್ತದೆ. ಅಂಥ ಕೆಲ ಟಿಪ್ಸ್ ಇಲ್ಲಿದೆ.

How To: ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್​ನ ಸೇಫ್ಟಿಗೆ ಹೀಗೆ ಮಾಡಿ; EV  ಬ್ಯಾಟರಿಗಳ ಬಾಳಿಕೆ, ಸುರಕ್ಷೆಗೆ ಇಲ್ಲಿದೆ ಟಿಪ್ಸ್
ಎಲೆಕ್ಟ್ರಿಕ್ ವಾಹನಗಳು (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 24, 2022 | 9:31 AM

ಪೆಟ್ರೋಲ್ ದರವು 111 ರೂಪಾಯಿ ದಾಟಿದೆ. ಉಕ್ರೇನ್-ರಷ್ಯಾ ಸಂಘರ್ಷವು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ನೆರೆಯ ಶ್ರೀಲಂಕಾದ ಜನರು ಇಂಧನಕ್ಕಾಗಿ ಪರಿತಪಿಸುತ್ತಿರುವ ಭಾರತದ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿವೆ. ಬಹುಶಃ ಇದೇ ಕಾರಣಕ್ಕೆ ಇರಬಹುದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆಯಾದರೂ ಇತ್ತೀಚೆಗೆ ಕಂಡು ಬರುತ್ತಿರುವಷ್ಟು ಕ್ರೇಜ್ ಎಂದೂ ಇರಲಿಲ್ಲ. ಟಿವಿಎಸ್, ಬಜಾಜ್​ನಂಥ ಹಳೆಯ ಮೋಟಾರ್ ಕಂಪನಿಗಳ ಜೊತೆಗೆ ಓಲಾ, ಏಥರ್, ಪ್ಯೂರ್​, ಒಕಿನೊವಾದಂಥ ಹಲವು ಹೊಸ ಕಂಪನಿಗಳೂ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿವೆ. ಆದರೆ ಕಳೆದ ಒಂದು ತಿಂಗಳಿನಿಂದ ದೇಶದ ಹಲವೆಡೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಸುರಕ್ಷೆಯ ಪ್ರಶ್ನೆ ಹುಟ್ಟುಹಾಕಿದ್ದರೆ, ಇಂಥ ಸ್ಕೂಟರ್​ಗಳಲ್ಲಿ ಬಳಕೆಯಾಗಿರುವ ದುಬಾರಿ ಬ್ಯಾಟರಿಗಳು ಬೇಗ ಹಾಳಾಗುತ್ತವೆ ಎಂಬ ಆತಂಕವೂ ಹಲವರಲ್ಲಿದೆ. ಎಲೆಕ್ಟ್ರಿಕ್ ವಾಹನಗಳನ್ನು ಜನರು ಕೊಳ್ಳಲು ಹಿಂಜರಿಯಲು ಇವು ಮುಖ್ಯಕಾರಣವಾಗಿವೆ.

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆಯಾಗಿರುವ ಬ್ಯಾಟರಿಗಳು ಭಾರತದ ಬೇಸಿಗೆಯ ಬಿಸಿ ತಡೆಯುತ್ತಿಲ್ಲ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಸುರಕ್ಷಿತ ಎಂದು ಕೆಲವರು ವಾದಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ವಿಚಾರಗಳಲ್ಲಿ ಮಾರ್ಗದರ್ಶನ ಮಾಡುವ ನೀತಿ ಆಯೋಗವು ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿಗಳ ಬಳಕೆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಸುರಕ್ಷಾ ನಿಯಮಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ದುಬಾರಿ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಾರಿಗೆ ಇಲಾಖೆ ಎಚ್ಚರಿಸಿದೆ. ಈ ನಡುವೆ ಕೆಲ ಕಂಪನಿಗಳು ಮಾರಾಟ ಮಾಡಿರುವ ತಮ್ಮ ಸ್ಕೂಟರ್​ಗಳನ್ನು ಶೋರೂಂಗೆ ವಾಪಾಸ್​ ತರಿಸಿಕೊಂಡಿದ್ದು, ಅಗತ್ಯ ರಿಪೇರಿಗಳನ್ನು ಉಚಿತವಾಗಿ ಮಾಡಿಕೊಡಲು ಮುಂದಾಗಿವೆ.

ಈ ಎಲ್ಲ ಬೆಳವಣಿಗೆಗಳು ಒತ್ತಟ್ಟಿಗಿರಲಿ, ಕೆಲ ಸರಳ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನುಸರಿಸಿದರೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯ ಸುರಕ್ಷತೆಯ ಜೊತೆಗೆ ದೀರ್ಘ ಬಾಳಿಕೆಯೂ ಸಾಧ್ಯವಾಗುತ್ತದೆ. ಅಂಥ ಕೆಲ ಟಿಪ್ಸ್ ಇಲ್ಲಿದೆ.

  1. ಎಲೆಕ್ಟ್ರಿಕ್ ವಾಹನಗಳಿಗೆ ಪೆಟ್ರೋಲ್-ಡೀಸೆಲ್-ಸಿಎನ್​ಜಿ ವಾಹನಗಳಿಗೆ ಬೇಕಿರುವಷ್ಟು ಮೇಂಟೆನೆನ್ಸ್​ ಬೇಕಾಗುವುದಿಲ್ಲ. ಪದೇಪದೆ ಗ್ಯಾರೇಜ್​ಗಳಿಗೆ ಹೋಗುವುದು, ಸರ್ವೀಸ್ ಮಾಡಿಸುವುದೂ ಅಗತ್ಯವಿಲ್ಲ. ಪೆಟ್ರೋಲ್-ಡೀಸೆಲ್​ಗೆ ಹೋಲಿಸಿದರೆ ವಿದ್ಯುತ್ ವಾಹನಗಳ ಮೂಲಕ ಒಂದು ಕಿಮೀ ಸಂಚರಿಸಲು ಆಗುವ ಖರ್ಚು ತೀರಾ ಕಡಿಮೆ.
  2. ಎಲೆಕ್ಟ್ರಿಕ್ ವಾಹನ ಬಳಸುವವರು ತಮ್ಮ ವಾಹನಕ್ಕೆ ಬಳಕೆಯಾಗಿರುವ ಬ್ಯಾಟರಿಗಳ ಬಗ್ಗೆ ತಿಳಿದುಕೊಂಡಿರಬೇಕಾದ್ದು ಅತಿ ಅಗತ್ಯ. ಬ್ಯಾಟರಿ ನಿರ್ವಹಣೆ ವಿಚಾರದಲ್ಲಿ ತಪ್ಪು ಮಾಡಿದರೆ ಅದು ಬೇಗ ಹಾಳಾಗುವುದಷ್ಟೇ ಅಲ್ಲ, ಸುರಕ್ಷೆಗೂ ಆತಂಕ ತಂದೊಡ್ಡುತ್ತದೆ. ಪ್ರಾಣಕ್ಕೂ ಕುತ್ತು ತರಬಹುದು.
  3. ಬಹುತೇಕ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು 300ರಿಂದ 500 ಚಾರ್ಜಿಂಗ್ ಸೈಕಲ್ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಅಂದರೆ ಸುಮಾರು ಮೂರುವರ್ಷ ಅಥವಾ 3ರಿಂದ 10 ಸಾವಿರ ಕಿಮೀ ಸಂಚಾರವನ್ನು ತಾಳಿಕೊಳ್ಳುತ್ತವೆ. ಒಮ್ಮೆ ಈ ಹಂತ ಮುಟ್ಟಿದ ನಂತರ ಬ್ಯಾಟರಿಯ ಕಾರ್ಯಕ್ಷಮತೆ ಕಡಿಮೆಯಾಗಿ, ಮೈಲೇಜ್ ಕುಸಿಯಲು ಆರಂಭಿಸುತ್ತದೆ.
  4. ಬ್ಯಾಟರಿಗಳ ಸುರಕ್ಷೆ ಮತ್ತು ದೀರ್ಘಾವಧಿ ಬಾಳಿಕೆ ಬಗ್ಗೆ ಕಾಳಜಿಯಿರುವವರು ಎಂದಿಗೂ ಅದು ಸಂಪೂರ್ಣ ಖಾಲಿಯಾಗಲು ಬಿಡಬಾರದು. ಕೆಲ ಬ್ಯಾಟರಿಗಳಿಗೆ ಅದರಲ್ಲಿ ಸಂಗ್ರಹವಾಗಿರುವ ವಿದ್ಯುತ್ ಅನ್ನು ಸಂಪೂರ್ಣ ಬಳಸಿ ಮತ್ತು ಸಂಪೂರ್ಣ ಚಾರ್ಜ್ ಮಾಡುವುದು ಒಳ್ಳೆಯದು. ಆದರೆ ಎಲೆಕ್ಟ್ರಿಕ್ ವಾಹನಗಳ ವಿಚಾರದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಬ್ಯಾಟರಿಯಲ್ಲಿ ಸದಾ ಶೇ 10ರಷ್ಟು ವಿದ್ಯುತ್ ಉಳಿಯುವಂತೆ ಗಮನ ಕೊಡಿ. ಅದನ್ನು ದಿನಗಟ್ಟಲೆ ನಿಲ್ಲಿಸಬೇಕಾಗಿ ಬಂದಾಗ ಪೂರ್ತಿ ಚಾರ್ಜ್ ಮಾಡಿಯೇ ನಿಲ್ಲಿಸಿ. ಶೇ 40ಕ್ಕಿಂತ ಕಡಿಮೆ ಚಾರ್ಜ್ ಇರುವಂತೆ ಹೆಚ್ಚು ಅವಧಿ ನಿಲ್ಲಿಸಬೇಡಿ.
  5. ಪ್ರತಿದಿನ ನಿಯಮವಾಗಿ ಚಾರ್ಜ್ ಮಾಡುವುದು ರೂಢಿಸಿಕೊಳ್ಳಿ. ಸ್ಕೂಟರ್​ನಲ್ಲಿನ ಬ್ಯಾಟರಿ ಚಾರ್ಜ್ ಆಗಲು ಸಾಮಾನ್ಯವಾಗಿ ಎಷ್ಟು ಹೊತ್ತು ಬೇಕಾಗುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಚಾರ್ಜ್ ಪೂರ್ಣಗೊಂಡ ತಕ್ಷಣ ಸ್ವಿಚ್ ಆಫ್ ಮಾಡಿ. ಪ್ಲಗ್ ಅನ್ನೂ ಹೊರೆಗೆ ತೆಗೆದಿಡಿ. ಬ್ಯಾಟರಿಯ ಆರೋಗ್ಯಕ್ಕೆ ಅದು ಸಂಪೂರ್ಣ ಖಾಲಿಯಾಗುವುದು ಹೇಗೆ ಅಪಾಯಕಾರಿಯೋ, ಅತಿಯಾಗಿ ಚಾರ್ಜ್ ಆಗುವುದೂ ಅಪಾಯಕಾರಿ.
  6. ನೀವು ಸ್ಕೂಟರ್ ಖರೀದಿಸಿದಾಗ ಕಂಪನಿಗಳು ನೀಡಿರುವ ಚಾರ್ಜರ್​ನಿಂದಲೇ ಬ್ಯಾಟರಿ ಚಾರ್ಜ್ ಮಾಡಿ. ಕಳಪೆ ಗುಣಮಟ್ಟದ ಚಾರ್ಜಿಂಗ್ ವೈರ್, ಅಡಾಪ್ಟರ್​ಗಳನ್ನು ಎಂದಿಗೂ ಬಳಸಬೇಡಿ. ಬ್ಯಾಟರಿ ಚಾರ್ಜಿಂಗ್​ಗೆ ಬಳಕೆಯಾಗುವ ಒಂದು ಮಟ್ಟದ ವಿದ್ಯುತ್ ಮೀರಿದರೆ ಅಥವಾ ಕಡಿಮೆಯಾದರೆ ಬ್ಯಾಟರಿಗಳು ಹಾಳಾಗುತ್ತವೆ. ಸ್ಫೋಟಗೊಳ್ಳುವ ಸಾಧ್ಯತೆಯೂ ಇರುತ್ತದೆ.
  7. ಸುದೀರ್ಘ ಅವಧಿಗೆ ಬಿಸಿಲಿನಲ್ಲಿ ಎಲೆಕ್ಟ್ರಿಕ್ ಗಾಡಿ ಎಂದಿಗೂ ನಿಲ್ಲಿಸಬೇಡಿ. ಒಂದು ವೇಳೆ ಅನಿವಾರ್ಯವಾಗಿ ನಿಲ್ಲಿಸಲೇಬೇಕಾದ ಪರಿಸ್ಥಿತಿ ಬಂದರೆ ಮರೆಯದೇ ಅದಕ್ಕೆ ಸೂಕ್ತ ಕವರ್ ಹೊದಿಸಿ. ಬ್ಯಾಟರಿ ಅತಿಯಾಗಿ ಬಿಸಿಯಾಗಬಾರದು ಎಂಬ ಕಾಳಜಿ ಇರಲಿ.
  8. ನೀವು ಕಚೇರಿಯಿಂದ ಅಥವಾ ಹೊರಗೆ ಎಲ್ಲಿಂದಲಾದರೂ ಮನೆಗೆ ಬಂದ ತಕ್ಷಣ ಸ್ಕೂಟರ್​ ಅನ್ನು ಚಾರ್ಜ್​ಗೆ ಹಾಕಬೇಡಿ. ಬಳಕೆಯ ನಂತರ ಬ್ಯಾಟರಿ ಬಿಸಿಯಿರುತ್ತದೆ. ಅಂಥ ಸಂದರ್ಭದಲ್ಲಿ ಎಂದಿಗೂ ಚಾರ್ಜ್ ಮಾಡಬಾರದು. ಕನಿಷ್ಠ ಒಂದು ಗಂಟೆ ಕಾಲ ಗಾಡಿಯನ್ನು ನೆರಳಿನಲ್ಲಿ ನಿಲ್ಲಿಸಿ, ಬ್ಯಾಟರಿಗಳು ತಂಪಾದ ನಂತರ ಚಾರ್ಜ್ ಮಾಡಿ.
  9. ಬ್ಯಾಟರಿ ಸಾಮರ್ಥದ ಶೇ 10ರಿಂದ ಶೇ 90ರಷ್ಟು ಚಾರ್ಜ್ ಉಳಿಸಿಕೊಳ್ಳಲು ಗಮನ ನೀಡಿದರೆ ಬ್ಯಾಟರಿಗಳ ಬಾಳಿಕೆ ಹೆಚ್ಚಾಗುತ್ತದೆ.
  10. ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್​ನ ಟೈರ್ ಪ್ರೆಷರ್ ಬಗ್ಗೆಯೂ ಗಮನಕೊಡಿ. ಚಕ್ರದ ಗಾಳಿ ಕಡಿಮೆಯಾದರೆ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಟರಿ ಮೇಲಿನ ಒತ್ತಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಟ್ರಕ್​​ನಲ್ಲಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಎಲೆಕ್ಟ್ರಿಕ್​ ಸ್ಕೂಟರ್​​ಗಳಿಗೆ ಬೆಂಕಿ; ಧಗಧಗನೆ ಹೊತ್ತಿ ಉರಿದ 20 ವಾಹನಗಳು !

ಇದನ್ನೂ ಓದಿ: EV Explodes: ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ