Video: ಟ್ರಕ್ನಲ್ಲಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ; ಧಗಧಗನೆ ಹೊತ್ತಿ ಉರಿದ 20 ವಾಹನಗಳು !
ದ್ರಾ ಇವಿ ಕಂಪನಿಯ ವಕ್ತಾರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸುರಕ್ಷತೆಯೇ ನಮ್ಮ ಆದ್ಯತೆ. ಬೆಂಕಿಯನ್ನು ನಂದಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ: ಮಹಾರಾಷ್ಟ್ರದ ನಾಸಿಕ್ನಲ್ಲಿ ಟ್ರಕ್ನಲ್ಲಿ ಸಾಗಿಸಲಾಗುತ್ತಿದ್ದ 20 ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ದೇಶದ ಮುಂಚೂಣಿ ವಿದ್ಯುಚ್ಛಕ್ತಿ ಚಾಲಿತ ವಾಹನ ತಯಾರಕ ಕಂಪನಿಯಾದ ಜಿತೇಂದ್ರಾ ಇವಿ ಕಂಪನಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ಗಳು ಇವಾಗಿದ್ದು, ನಾಸಿಕ್ನಿಂದ ಬೆಂಗಳೂರಿಗೆ ತೆಗೆದುಕೊಂಡು ಬರಲಾಗುತ್ತಿತ್ತು. ಟ್ರಕ್ನಲ್ಲಿ ಸುಮಾರು 40 ಸ್ಕೂಟರ್ಗಳಿದ್ದವು. ಅದರಲ್ಲಿ 20 ಸ್ಕೂಟಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಇನ್ನುಳಿದ ಬೈಕ್ಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ. ಟ್ರಕ್ ಮೇಲೆ ಇದ್ದಂತೆ ಬೈಕ್ಗಳು ಹೊತ್ತಿ ಉರಿದ ಭಯಾನಕ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ವಿದ್ಯುತ್ಚಾಲಿತ ದ್ವಿಚಕ್ರವಾಹನಗಳಿಗೆ ಬೆಂಕಿ ಬಿದ್ದ ಐದನೇ ಘಟನೆ ಇದು. ಕಳೆದ ಮೂರು ವಾರಗಳಲ್ಲಿ ಇಷ್ಟು ಘಟನೆಗಳು ನಡೆದಿವೆ. ಮಾರ್ಚ್ 26ರಂದು ಪುಣೆಯಲ್ಲಿ ಓಲಾ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ವೊಂದರಲ್ಲಿ ಬೆಂಕಿ ಹೊತ್ತಿ ಆ ಬೈಕ್ ಸಂಪೂರ್ಣ ಬೆಂಕಿಗೆ ಆಹುತಿಯಾಯಿತು. ಅದಾದ ಮೇಲೆ ತಮಿಳುನಾಡಿನ ವೆಲ್ಲೋರ್ನಲ್ಲಿ ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದಾದ ಮೇಲೆ ಮಾರ್ಚ್ 28ರಂದು ತಮಿಳುನಾಡಿನ ಟ್ರಿಚಿಯಲ್ಲಿ ಇಂಥದ್ದೇ ಒಂದು ಘಟನೆ ನಡೆಯಿತು. ನಾಲ್ಕನೇ ಪ್ರಕರಣ ಮಾರ್ಚ್ 29ರಂದು ಚೆನ್ನೈನಲ್ಲಿ ನಡೆದಿತ್ತು.
It started out as random & sporadic but now cases of #ElectricVehicles on fire are surfacing with increasing frequency. Just as I had feared. Last Saturday, 20 #electricscooters from #JitendraEV were gutted near Nashik in a trailer. It’ll get worse before it gets better.#EV pic.twitter.com/2G5ZFXqBfn
— Sumant Banerji (@sumantbanerji) April 11, 2022
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಹಾಗೇ, ಬೆಂಕಿ ಕಾಣಿಸಿಕೊಳ್ಳಲು ಅದರಲ್ಲಿ ಬಳಕೆಯಾಗುವ ಬ್ಯಾಟರಿಗಳೇ ಕಾರಣವಾಗುತ್ತವೆ. ಉತ್ತಮ ಗುಣಮಟ್ಟದ ಬ್ಯಾಟರಿಗಳನ್ನು ಬಳಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಜಿತೇಂದ್ರಾ ಇವಿ ಕಂಪನಿಯ ವಕ್ತಾರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸುರಕ್ಷತೆಯೇ ನಮ್ಮ ಆದ್ಯತೆ. ಬೆಂಕಿಯನ್ನು ನಂದಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು. ಹಾಗೇ, ಬೆಂಕಿ ಬೀಳಲು ಕಾರಣವೇನು ಎಂಬ ಬಗ್ಗೆ ತನಿಖೆ ಶುರು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್ನ ಸಬ್ವೇ ಸ್ಟೇಶನ್ಗಳಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ; 13 ಮಂದಿಗೆ ಗಾಯ, ಉಗ್ರಕೃತ್ಯವೆಂದ ನೆಟ್ಟಿಗರು
Published On - 8:22 pm, Tue, 12 April 22